10 ವರ್ಷ, 5 ಫೈನಲ್‌ ಸೋಲು: ಈ ಬಾರಿಯಾದರೂ ನನಸಾಗುತ್ತಾ ದಶಕದ ಕನಸು?

| Published : Jun 29 2024, 12:39 AM IST / Updated: Jun 29 2024, 04:22 AM IST

ಸಾರಾಂಶ

ಐಸಿಸಿ ಟೂರ್ನಿಗಳಲ್ಲಿ ಸತತವಾಗಿ ಸೋಲನುಭವಿಸುತ್ತಿರುವ ಭಾರತ ಈ ಬಾರಿಯಾದರೂ ಅದೃಷ್ಟ ಕೈ ಹಿಡಿಯುವ ನಿರೀಕ್ಷೆಯಲ್ಲಿದೆ. 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದ ಭಾರತ, ಆ ಬಳಿಕ 5 ಬಾರಿ ಫೈನಲ್‌ ಆಡಿದ್ದರೂ, ಒಮ್ಮೆಯೂ ಗೆದ್ದಿಲ್ಲ.

ಬಾರ್ಬಡೊಸ್‌: ಐಸಿಸಿ ಟೂರ್ನಿಗಳಲ್ಲಿ ಭಾರತ ಅತ್ಯುತ್ತಮ ಪ್ರದರ್ಶನ ನೀಡುತ್ತಿರುವ ಹೊರತಾಗಿಯೂ ಕಳೆದ 10 ವರ್ಷಗಳಲ್ಲಿ 5 ಬಾರಿ ಫೈನಲ್‌ನಲ್ಲಿ ಎಡವಿದೆ. ಸತತವಾಗಿ ಎದುರಾಗುತ್ತಿರುವ ಸೋಲನ್ನು ಈ ವರೆಗೂ ಆಟಗಾರರು, ಅಭಿಮಾನಿಗಳು ಅರಗಿಸಿಕೊಂಡಿದ್ದು, ಈ ಬಾರಿಯಾದರೂ ಟ್ರೋಫಿ ಗೆಲ್ಲುವ ಕಾತರದಲ್ಲಿದ್ದಾರೆ. 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿ ಗೆದ್ದಿದ್ದ ಭಾರತ, ಬಳಿಕ 2014ರಲ್ಲಿ/ ಟಿ20 ವಿಶ್ವಕಪ್‌ ಫೈನಲ್‌, 2017ರಲ್ಲಿ ಚಾಂಪಿಯನ್ಸ್ ಟ್ರೋಫಿ ಫೈನಲ್‌, 2021 ಹಾಗೂ 2023ರಲ್ಲಿ ಟೆಸ್ಟ್ ವಿಶ್ವ ಚಾಂಪಿಯನ್‌ಶಿಪ್‌ ಫೈನಲ್‌, 2023ರಲ್ಲಿ ಏಕದಿನ ವಿಶ್ವಕಪ್‌ನಲ್ಲಿ ಫೈನಲ್‌ನಲ್ಲಿ ಪರಾಭವಗೊಂಡಿತ್ತು.

12 ತಿಂಗಳಲ್ಲಿ 3ನೇ ಐಸಿಸಿ ಫೈನಲ್‌ ಆಡಲಿರುವ ಭಾರತ

ಟೀಂ ಇಂಡಿಯಾ 12 ತಿಂಗಳಲ್ಲಿ 3ನೇ ಬಾರಿ ಐಸಿಸಿ ಟೂರ್ನಿಯ ಫೈನಲ್‌ನಲ್ಲಿ ಆಡುತ್ತಿದೆ. ಕಳೆದ ವರ್ಷ ಜೂನ್‌ನಲ್ಲಿ ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ ಆಡಿದ್ದ ಭಾರತ, ಆಸ್ಟ್ರೇಲಿಯಾ ವಿರುದ್ಧ ಸೋತಿತ್ತು. ಬಳಿಕ ನವೆಂಬರ್‌ನಲ್ಲಿ ನಡೆದ ಏಕದಿನ ವಿಶ್ವಕಪ್‌ ಫೈನಲ್‌ನಲ್ಲೂ ಭಾರತ ತಂಡ ಆಸೀಸ್‌ ವಿರುದ್ಧ ಪರಾಭವಗೊಂಡು ರನ್ನರ್‌-ಅಪ್‌ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿತ್ತು. ಈಗ 3ನೇ ಬಾರಿ ಅದೃಷ್ಟ ಪರೀಕ್ಷೆಗಿಳಿಯಲಿದೆ.

ಟಿ20 ವಿಶ್ವಕಪ್‌ಗಳಲ್ಲಿ 2 ತಂಡಗಳ ಸಾಧನೆ

ಭಾರತವರ್ಷಸಾಧನೆ2007ಚಾಂಪಿಯನ್‌2009  2ನೇ ಸುತ್ತು2010 2ನೇ ಸುತ್ತು20122ನೇ ಸುತ್ತು2014ರನ್ನರ್‌-ಅಪ್‌2016ಸೆಮಿಫೈನಲ್‌2021//2////ನೇ ಸುತ್ತು2022 ಸೆಮಿಫೈನಲ್‌

ದಕ್ಷಿಣ ಆಫ್ರಿಕಾ ವರ್ಷಸಾಧನೆ2007  2ನೇ ಸುತ್ತು2009ಸೆಮಿಫೈನಲ್‌2010  2ನೇ ಸುತ್ತು2012  2ನೇ ಸುತ್ತು2014ಸೆಮಿಫೈನಲ್‌ 2016     2ನೇ ಸುತ್ತು2021  2ನೇ ಸುತ್ತು2022  2ನೇ ಸುತ್ತು