ಸಾರಾಂಶ
ಪ್ರಸ್ತಕ ಡಬ್ಲ್ಯುಪಿಎಲ್‌ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಹಾಲಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ ತಂಡ ಸದ್ಯ ಮಾಡು ಇಲ್ಲವೇ ಮಡಿ ಪರಿಸ್ಥಿತಿಗೆ ತಲುಪಿದೆ. ಶನಿವಾರ ತವರು ನೆಲದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಪಂದ್ಯವನ್ನಾಡಲಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಬೆಂಗಳೂರು: ಪ್ರಸ್ತಕ ಡಬ್ಲ್ಯುಪಿಎಲ್‌ನಲ್ಲಿ ಸತತ ಸೋಲಿನಿಂದ ಕಂಗೆಟ್ಟಿರುವ ಹಾಲಿ ಐಪಿಎಲ್ ಚಾಂಪಿಯನ್ ಆರ್‌ಸಿಬಿ ತಂಡ ಸದ್ಯ ಮಾಡು ಇಲ್ಲವೇ ಮಡಿ ಪರಿಸ್ಥಿತಿಗೆ ತಲುಪಿದೆ. ಶನಿವಾರ ತವರು ನೆಲದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊನೆಯ ಪಂದ್ಯವನ್ನಾಡಲಿದ್ದು, ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಆರ್‌ಸಿಬಿ ಈ ಬಾರಿ ವಡೋದರಾದಲ್ಲಿ 2 ಗೆಲುವಿನೊಂದಿಗೆ ಅಭಿಯಾನ ಆರಂಭಿಸಿತ್ತು. ಆದರೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್‌ಸಿಬಿಗೆ ಅದೃಷ್ಟ ಕೈಕೊಟ್ಟಿದೆ. ಬೌಲಿಂಗ್ ಮತ್ತು ಬ್ಯಾಟಿಂಗ್ ಎರಡಲ್ಲಿಯೂ ವೈಫಲ್ಯ ಎದುರಿಸುವ ತಂಡ ತವರು ನೆಲದಲ್ಲಿ ಹ್ಯಾಟ್ರಿಕ್ ಸೋಲು ಕಂಡಿದ್ದು, ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ.
ಸದ್ಯ ಆಡಿರುವ 5 ಪಂದ್ಯಗಳ ಪೈಕಿ 2ರಲ್ಲಿ ಮಾತ್ರವೇ ಗೆದ್ದಿರುವ ಆರ್‌ಸಿಬಿ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಅಗ್ರ ಮೂರನೇ ಸ್ಥಾನಕ್ಕೆ ಕಾದಾಡುತ್ತಿರುವ ಅರ್‌ಸಿಬಿ ಮುಂದಿನ ಪಂದ್ಯಗಳಿಗಾಗಿ ಲಖನೌಗೆ ತೆರಳುವ ಮುನ್ನ ಕೊನೆಯ ಪಂದ್ಯವಾಗಿ ಬೆಂಗಳೂರಿನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದ್ದು, ಮತ್ತೆ ಪುಟಿದೇಳುವ ಮೂಲಕ ತವರು ನೆಲದಲ್ಲಿ ಒಂದಾದರೂ ಪಂದ್ಯ ಗೆಲ್ಲುವ ನಿರೀಕ್ಷೆಯಲ್ಲಿದೆ.