ಸಾರಾಂಶ
ಇಂದು (ಜನವರಿ 8) ನಟ ಯಶ್ ಅವರ 39ನೇ ಹುಟ್ಟುಹಬ್ಬ. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ ಈ ಬಾರಿ ಹುಟ್ಟುಹಬ್ಬದಂದು ತಾನು ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಯಶ್ ಈಗಾಗಲೇ ಪತ್ರ ಬರೆದಿದ್ದಾರೆ. ಆದರೆ ಈ ಸಲ ಅವರು ಭೇಟಿ ಆಗದಿದ್ದರೂ ಅಭಿಮಾನಿಗಳಿ ವಿಶೇಷ ಕೊಡುಗೆ ನೀಡಲಿದ್ದಾರೆ.
ಸಿನಿವಾರ್ತೆ : ಇಂದು (ಜನವರಿ 8) ನಟ ಯಶ್ ಅವರ 39ನೇ ಹುಟ್ಟುಹಬ್ಬ. ಚಿತ್ರೀಕರಣದಲ್ಲಿ ಬ್ಯುಸಿಯಾಗಿರುವುದರಿಂದ ಈ ಬಾರಿ ಹುಟ್ಟುಹಬ್ಬದಂದು ತಾನು ಬೆಂಗಳೂರಿನಲ್ಲಿ ಇರುವುದಿಲ್ಲ ಎಂದು ಯಶ್ ಈಗಾಗಲೇ ಪತ್ರ ಬರೆದಿದ್ದಾರೆ. ಆದರೆ ಈ ಸಲ ಅವರು ಭೇಟಿ ಆಗದಿದ್ದರೂ ಅಭಿಮಾನಿಗಳಿ ವಿಶೇಷ ಕೊಡುಗೆ ನೀಡಲಿದ್ದಾರೆ.
ಅವರ ಹುಟ್ಟುಹಬ್ಬದ ಅಂಗವಾಗಿ ಇಂದು ಬಹು ನಿರೀಕ್ಷೆಯ ‘ಟಾಕ್ಸಿಕ್’ ಚಿತ್ರದ ವಿಡಿಯೋ ತುಣುಕು ಬಿಡುಗಡೆ ಆಗಲಿದೆ. ಈ ಕುರಿತು ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್ ಅಪ್ಸ್’ ಎಂಬ ಸಾಲುಗೊಳೊಂದಿಗೆ ನಟ ಯಶ್ ಹೊಸ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ. ರೆಟ್ರೋ ಸ್ಟೈಲ್ ಕಾರಿನ ಪಕ್ಕ ನಿಂತು ಸಿಗರೇಟ್ ಸೇದುತ್ತಿದ್ದು, ತಲೆಗೆ ಟೋಪಿ ಧರಿಸಿರುವ ಅವರ ಲುಕ್ಕು ಅಭಿಮಾನಿಗಳ ಉತ್ಸಾಹ ಹೆಚ್ಚಿಸಿದೆ. ಇಂದು ಬೆಳಗ್ಗೆ 10.25ಕ್ಕೆ ವಿಡಿಯೋ ಬಿಡುಗಡೆ ಆಗಲಿದೆ.
ಕೆವಿಎನ್ ಪ್ರೊಡಕ್ಷನ್ ನಿರ್ಮಿಸುತ್ತಿರುವ ಈ ಚಿತ್ರವನ್ನು ಗೀತುಮೋಹನ್ ದಾಸ್ ನಿರ್ದೇಶಿಸುತ್ತಿದ್ದಾರೆ.