ಇಂದು, ನಾಳೆ ಭಾರತ-ಪಾಕ್‌ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯ

| Published : Feb 03 2024, 01:48 AM IST

ಇಂದು, ನಾಳೆ ಭಾರತ-ಪಾಕ್‌ ಡೇವಿಸ್‌ ಕಪ್‌ ಟೆನಿಸ್‌ ಪಂದ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಪಾಕ್‌ ವಿರುದ್ಧ ಇದುವರೆಗೂ ನಡೆದಿರುವ ನಡೆದಿರುವ ಡೇವಿಸ್‌ ಕಪ್‌ ಟೆನಿಸ್‌ 7 ಮುಖಾಮುಖಿಯಲ್ಲೂ ಭಾರತ ಅಜೇಯವಾಗಿದ್ದು, ಗೆಲುವಿನ ಓಟ ಮುಂದುರಿಯುವ ಸಾಧ್ಯತೆ ಹೆಚ್ಚಾಗಿದೆ.

ಇಸ್ಲಾಮಾಬಾದ್‌: ಭಾರತ ಹಾಗೂ ಪಾಕಿಸ್ತಾನ ನಡುವಿನ ಬಹುನಿರೀಕ್ಷಿತ ಡೇವಿಸ್‌ ಕಪ್‌ ಟೆನಿಸ್‌ ಟೂರ್ನಿಯ ಗುಂಪು-1 ಪ್ಲೇ-ಆಫ್‌ ಪಂದ್ಯ ಶನಿವಾರ ಹಾಗೂ ಭಾನುವಾರ ಇಸ್ಲಾಮಾಬಾದ್‌ನಲ್ಲಿ ನಡೆಯಲಿದೆ. ಪಾಕ್‌ಗೆ 60 ವರ್ಷಗಳ ಬಳಿಕ ಟೆನಿಸ್‌ ಆಡಲು ತೆರಳಿರುವ ಭಾರತೀಯ ಆಟಗಾರರು, ಪಾಕ್‌ ವಿರುದ್ಧದ ಗೆಲುವಿನ ಓಟ ಮುಂದುವರಿಸುವ ನಿರೀಕ್ಷೆಯಲ್ಲಿದ್ದಾರೆ.ಪಾಕ್‌ ವಿರುದ್ಧ ಭಾರತ ಈ ವರೆಗೂ ಡೇವಿಸ್‌ ಕಪ್‌ನಲ್ಲಿ 7 ಬಾರಿ ಆಡಿದ್ದು, ಎಲ್ಲಾ ಬಾರಿಯೂ ಗೆಲುವು ಸಾಧಿಸಿದೆ. ಈ ಬಾರಿಯೂ ಜಯದ ಕಾತರದಲ್ಲಿರುವ ಭಾರತ ವಿಶ್ವ ಗುಂಪು-1ರಲ್ಲೇ ಉಳಿಯುವ ಗುರಿ ಇಟ್ಟುಕೊಂಡಿದೆ. ಒಂದು ವೇಳೆ ಸೋತರೆ ವಿಶ್ವ ಗುಂಪು-2ಕ್ಕೆ ಹಿಂಬಡ್ತಿ ಪಡೆಯಲಿದೆ. ಅತ್ತ ಪಾಕ್‌ ತವರಿನ ಲಾಭೆವತ್ತಿ ಮೊದಲ ಬಾರಿ ಭಾರತ ವಿರುದ್ಧ ಗೆಲ್ಲುವ ನಿರೀಕ್ಷೆಯಲ್ಲಿದೆ.ಶನಿವಾರ 2 ಸಿಂಗಲ್ಸ್‌ ಪಂದ್ಯಗಳು ನಡೆಯಲಿದ್ದು, ರಾಮ್‌ಕುಮಾರ್‌ ರಾಮನಾಥನ್‌ ಹಾಗೂ ಶ್ರೀರಾಮ್‌ ಬಾಲಾಜಿ ಕಣಕ್ಕಿಳಿಯಲಿದ್ದಾರೆ. ಭಾನುವಾರ 2 ಸಿಂಗಲ್ಸ್‌, 1 ಡಬಲ್ಸ್‌ ಪಂದ್ಯ ನಡೆಯಲಿವೆ.