ಕರುಣ್‌ ನಾಯರ್ ಮತ್ತೆ ಶತಕ ಆಸರೆ : ತಮಿಳುನಾಡು ವಿರುದ್ಧ ಕ್ವಾರ್ಟರ್‌ನಲ್ಲಿ ಅಬ್ಬರದ ಆಟ

| N/A | Published : Feb 09 2025, 01:16 AM IST / Updated: Feb 09 2025, 04:13 AM IST

ಸಾರಾಂಶ

44ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಕರುಣ್ ಆಸರೆಯಾದರು. ಅವರು ಔಟಾಗದೆ 100 ರನ್‌ ಗಳಿಸಿದ್ದಾರೆ. ದಿನೇಶ್‌ ಮಲೆವಾರ್‌ 75 ರನ್ ಗಳಿಸಿದರು.

ನಾಗ್ಪುರ: ದೇಸಿ ಕ್ರಿಕೆಟ್‌ನಲ್ಲಿ ಕರುಣ್‌ ನಾಯರ್‌ ಮತ್ತೆ ಅಬ್ಬರಿಸಿದ್ದಾರೆ. ತಮಿಳುನಾಡು ವಿರುದ್ಧ ನಡೆಯುತ್ತಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಕರುಣ್‌ ಶತಕದ ನೆರವಿನಿಂದ ವಿದರ್ಭ ತಂಡ ಮೊದಲ ದಿನದಂತ್ಯಕ್ಕೆ 6 ವಿಕೆಟ್‌ಗೆ 264 ರನ್‌ ಕಲೆಹಾಕಿದೆ.

44ಕ್ಕೆ 3 ವಿಕೆಟ್‌ ಕಳೆದುಕೊಂಡಿದ್ದ ತಂಡಕ್ಕೆ ಕರುಣ್ ಆಸರೆಯಾದರು. ಅವರು ಔಟಾಗದೆ 100 ರನ್‌ ಗಳಿಸಿದ್ದಾರೆ. ದಿನೇಶ್‌ ಮಲೆವಾರ್‌ 75 ರನ್ ಗಳಿಸಿದರು. ಮುಂಬೈ ಚೇತರಿಕೆ: ಕೋಲ್ಕತಾದಲ್ಲಿ ನಡೆಯುತ್ತಿರುವ ಮತ್ತೊಂದು ಕ್ವಾರ್ಟರ್‌ನಲ್ಲಿ ಹರ್ಯಾಣ ವಿರುದ್ಧ ಮುಂಬೈ ಆರಂಭಿಕ ಆಘಾತರಿಂದ ಚೇತರಿಸಿಕೊಂಡಿದೆ. 25ಕ್ಕೆ 4 ವಿಕೆಟ್‌ ಕಳೆದುಕೊಂಡಿದ್ದ ತಂಡ ದಿನದಂತ್ಯಕ್ಕೆ 8 ವಿಕೆಟ್‌ ನಷ್ಟದಲ್ಲಿ 278 ರನ್‌ ಗಳಿಸಿದೆ. ಶಮ್ಸ್‌ ಮುಲಾನಿ 91ಕ್ಕೆ ಔಟಾದರೆ, ತನುಶ್‌ ಕೋಟ್ಯನ್‌ ಔಟಾಗದೆ 85 ರನ್‌ ಗಳಿಸಿದ್ದಾರೆ.

ಗುಜರಾತ್‌, ಕೇರಳ ತಂಡಗಳು ಮೇಲುಗೈ

ಪುಣೆಯಲ್ಲಿ ನಡೆಯಲ್ಲಿ ನಡೆಯುತ್ತಿರುವ ಕ್ವಾರ್ಟರ್‌ ಫೈನಲ್‌ನಲ್ಲಿ ಕೇರಳ ವಿರುದ್ಧ ಜಮ್ಮು ಮತ್ತು ಕಾಶ್ಮೀರ ತಂಡ ಮೊದಲ ದಿನದಂತ್ಯಕ್ಕೆ 8 ವಿಕೆಟ್‌ಗೆ 228 ರನ್‌ ಗಳಿಸಿದೆ. ಕನ್ಹಯ್ಯಾ ವಧ್ವಾನ್‌ 48, ಲೋನೆ ನಾಸಿರ್‌ 44 ರನ್‌ ಗಳಿಸಿದರು. 

ನಿಧೀಶ್‌ 5 ವಿಕೆಟ್‌ ಕಿತ್ತರು. ರಾಜ್‌ಕೋಟ್‌ನಲ್ಲಿ ನಡೆಯುತ್ತಿರುವ ಗುಜರಾತ್‌ ವಿರುದ್ಧ ಕ್ವಾರ್ಟರ್‌ನಲ್ಲಿ ಸೌರಾಷ್ಟ್ರ ಮೊದಲ ಇನ್ನಿಂಗ್ಸ್‌ನಲ್ಲಿ 216ಕ್ಕೆ ಆಲೌಟಾಗಿದೆ. ದಿನದಂತ್ಯಕ್ಕೆ ಗುಜರಾತ್‌ ವಿಕೆಟ್ ನಷ್ಟವಿಲ್ಲದೆ 21 ರನ್‌ ಗಳಿಸಿದೆ.