ಸ್ಮೃತಿ ಮಂಧನಾ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 143 ರನ್‌ ಗೆಲುವು

| Published : Jun 17 2024, 01:37 AM IST / Updated: Jun 17 2024, 04:48 AM IST

ಸ್ಮೃತಿ ಮಂಧನಾ ಶತಕ: ದಕ್ಷಿಣ ಆಫ್ರಿಕಾ ವಿರುದ್ಧ ಭಾರತಕ್ಕೆ 143 ರನ್‌ ಗೆಲುವು
Share this Article
  • FB
  • TW
  • Linkdin
  • Email

ಸಾರಾಂಶ

ಚಿನ್ನಸ್ವಾಮಿಯಲ್ಲಿ ಸೆಂಚುರಿ ಚಚ್ಚಿದ ಸ್ಮೃತಿ ಮಂಧನಾ. ಭಾರತದ ಅಬ್ಬರಕ್ಕೆ ಬೆಚ್ಚಿಬಿದ್ದ ದಕ್ಷಿಣ ಆಫ್ರಿಕಾ. 3 ಪಂದ್ಯಗಳ ಏಕದಿನ ಸರಣಿಯಲ್ಲಿ ಹರ್ಮನ್‌ಪ್ರೀತ್‌ ಕೌರ್‌ ಪಡೆಗೆ 1-0 ಮುನ್ನಡೆ.

ಬೆಂಗಳೂರು: ಸ್ಮೃತಿ ಮಂಧನಾ ಅವರ ಅಮೋಘ ಶತಕ, ಸ್ಪಿನ್ನರ್‌ಗಳ ಆಕರ್ಷಕ ಪ್ರದರ್ಶನದ ನೆರವಿನಿಂದ ದಕ್ಷಿಣ ಆಫ್ರಿಕಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಮಹಿಳಾ ತಂಡ 143 ರನ್‌ಗಳ ಬೃಹತ್‌ ಗೆಲುವು ಸಾಧಿಸಿತು. ಇದರೊಂದಿಗೆ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು.ಮೊದಲು ಬ್ಯಾಟ್‌ ಮಾಡಿದ ಭಾರತ 50 ಓವರಲ್ಲಿ 8 ವಿಕೆಟ್‌ಗೆ 265 ರನ್‌ ಕಲೆಹಾಕಿತು. ಸ್ಮೃತಿ 127 ಎಸೆತಗಳಲ್ಲಿ 12 ಬೌಂಡರಿ, 1 ಸಿಕ್ಸರ್‌ನೊಂದಿಗೆ 117 ರನ್‌ ಸಿಡಿಸಿದರು. ಏಕದಿನ ಕ್ರಿಕೆಟ್‌ನಲ್ಲಿ ಇದು ಅವರ 6ನೇ ಶತಕ. ತವರಿನಲ್ಲಿ ಮೊದಲ ಶತಕ ಎನ್ನುವುದು ವಿಶೇಷ.

ದೊಡ್ಡ ಗುರಿ ಬೆನ್ನತ್ತಿದ ದ.ಆಫ್ರಿಕಾ, 37.4 ಓವರಲ್ಲಿ 122 ರನ್‌ಗೆ ಆಲೌಟ್‌ ಆಯಿತು. ಪಾದಾರ್ಪಣಾ ಪಂದ್ಯದಲ್ಲಿ ಲೆಗ್‌ ಸ್ಪಿನ್ನರ್‌ ಆಶಾ ಶೋಭನಾ 4 ವಿಕೆಟ್‌ ಕಿತ್ತರು. ದೀಪ್ತಿ 2, ರಾಧಾ 1 ವಿಕೆಟ್‌ ಪಡೆದರು. 2ನೇ ಪಂದ್ಯ ಜೂ.19ರಂದು ನಡೆಯಲಿದೆ. ಸರಣಿಯ ಎಲ್ಲಾ 3 ಪಂದ್ಯಗಳಿಗೂ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವೇ ಆತಿಥ್ಯ ವಹಿಸಲಿದೆ.ಸ್ಕೋರ್‌: ಭಾರತ 50 ಓವರಲ್ಲಿ 265/8 (ಸ್ಮೃತಿ 117, ದೀಪ್ತಿ 37, ಖಾಕ 3-47), ದ.ಆಫ್ರಿಕಾ 37.4 ಓವರಲ್ಲಿ 122/10 (ಲುಸ್‌ 33, ಸಿನಾಲೊ 27*, ಆಶಾ 4-21)