ಅಂಡರ್‌-19 ವಿಶ್ವಕಪ್‌: ಇಂದು ಭಾರತ vs ದ.ಆಫ್ರಿಕಾ ಸೆಮೀಸ್‌

| Published : Feb 06 2024, 01:31 AM IST / Updated: Feb 06 2024, 12:12 PM IST

U India vs South Africa
ಅಂಡರ್‌-19 ವಿಶ್ವಕಪ್‌: ಇಂದು ಭಾರತ vs ದ.ಆಫ್ರಿಕಾ ಸೆಮೀಸ್‌
Share this Article
  • FB
  • TW
  • Linkdin
  • Email

ಸಾರಾಂಶ

5 ಬಾರಿ ಅಂಡರ್‌ 19 ಚಾಂಪಿಯನ್‌ ಚಾಂಪಿಯನ್‌ ಪಟ್ಟ ಅಲಂಕರಿಸಿರುವ ಭಾರತ ತಂಡ 9ನೇ ಬಾರಿ ಫೈನಲ್‌ ಪ್ರವೇಶಿಸುವ ಗುರಿ ಹೊಂದಿದೆ. ಸೆಮಿಫೈನಲ್‌ನಲ್ಲಿ ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ.

ಬೆನೋನಿ(ದ.ಆಫ್ರಿಕಾ): ದಾಖಲೆಯ 6ನೇ ಕಿರೀಟದ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ ಯುವ ಪಡೆ, ಈ ಬಾರಿ ಅಂಡರ್‌-19 ಏಕದಿನ ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಮಂಗಳವಾರ ದಕ್ಷಿಣ ಆಫ್ರಿಕಾ ವಿರುದ್ಧ ಸೆಣಸಾಡಲಿದೆ. ಭಾರತ 9ನೇ ಬಾರಿ ಫೈನಲ್‌ಗೇರುವ ನಿರೀಕ್ಷೆಯಲ್ಲಿದ್ದರೆ, 2014ರ ಚಾಂಪಿಯನ್‌ ದ.ಆಫ್ರಿಕಾ 4ನೇ ಸಲ ಪ್ರಶಸ್ತಿ ಸುತ್ತಿಗೇರುವ ತಕಕದಲ್ಲಿದೆ.

ಹಾಲಿ ಚಾಂಪಿಯನ್‌, ಉದಯ್‌ ಸಹರಾನ್‌ ನಾಯಕತ್ವದ ಭಾರತ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲೂ ಜಯಭೇರಿ ಬಾರಿಸಿದ್ದು, ಸೆಮೀಸ್‌ನಲ್ಲೂ ಗೆಲ್ಲುವ ಫೇವರಿಟ್‌ ಎನಿಸಿಕೊಂಡಿದೆ. ಗುಂಪು ಹಂತದಲ್ಲಿ 3, ಸೂಪರ್‌-6 ಹಂತದಲ್ಲಿ 2 ಪಂದ್ಯದಲ್ಲೂ ಭಾರತ ಅದ್ವಿತೀಯ ಗೆಲುವು ಸಾಧಿಸಿದೆ. 

ಎಲ್ಲಾ ಪಂದ್ಯದಲ್ಲೂ ಸರಾಸರಿ 130 ರನ್‌ ಅಂತರದಲ್ಲಿ ಗೆದ್ದಿರುವುದು ಭಾರತದ ಪ್ರಾಬಲ್ಯಕ್ಕೆ ಸಾಕ್ಷಿ.ಮುಶೀರ್‌ ಖಾನ್‌ 334 ರನ್‌ ಸಿಡಿಸಿ ಟೂರ್ನಿಯ ಗರಿಷ್ಠ ರನ್‌ ಸರದಾರ ಎನಿಸಿಕೊಂಡಿದ್ದು, ಉದಯ್‌(308 ರನ್) 2ನೇ ಸ್ಥಾನದಲ್ಲಿದ್ದಾರೆ. 

ಎಡಗೈ ಸ್ಪಿನ್ನರ್‌ ಸೌಮಿ ಪಾಂಡೆ 5 ಪಂದ್ಯದಲ್ಲಿ 16 ವಿಕೆಟ್‌ ಕಿತ್ತಿದ್ದಾರೆ. ಈ ಮೂವರ ಆಟ ತಂಡಕ್ಕೆ ನಿರ್ಣಾಯಕ ಎನಿಸಿದ್ದು, ಇತರರಿಂದಲೂ ಸೂಕ್ತ ಬೆಂಬಲ ಸಿಗಬೇಕಿದೆ.ಅತ್ತ ದ.ಆಫ್ರಿಕಾ ಟೂರ್ನಿಯಲ್ಲಿ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಗೆದ್ದಿದೆ. 

ತವರಿನ ಪಿಚ್‌ನ ಲಾಭವೆತ್ತಿ ಭಾರತಕ್ಕೆ ಸೋಲುಣಿಸುವುದು ತಂಡದ ಮುಂದಿರುವ ಗುರಿ. ಮತ್ತೊಂದು ಸೆಮೀಸ್‌ನಲ್ಲಿ ಗುರುವಾರ ಪಾಕಿಸ್ತಾನ-ಆಸ್ಟ್ರೇಲಿಯಾ ಮುಖಾಮುಖಿಯಾಗಲಿವೆ.

ಪಂದ್ಯ: ಮಧ್ಯಾಹ್ನ 1.30ಕ್ಕೆ, ನೇರಪ್ರಸಾರ: ಡಿಸ್ನಿ+ಹಾಟ್‌ಸ್ಟಾರ್‌, ಸ್ಟಾರ್‌ ಸ್ಪೋರ್ಟ್ಸ್‌

ಸತತ 4 ಸೆಮೀಸ್‌ಗೆದ್ದಿರುವ ಭಾರತ: ಭಾರತಕ್ಕೆ ಈ ಬಾರಿಯದು ಸತತ 5ನೇ ಸೆಮಿಫೈನಲ್‌. 2016, 2018, 2020, 2022ರಲ್ಲಿ ಭಾರತ ಸೆಮೀಸ್‌ಗೇರಿ ಜಯಗಳಿಸಿತ್ತು. ಈ ಪೈಕಿ 2018, 2022ರಲ್ಲಿ ಚಾಂಪಿಯನ್‌ ಆಗಿದೆ

02 ಬಾರಿ: ಭಾರತ ಟೂರ್ನಿಯ ಇತಿಹಾಸಲದಲಿ ಈ ವರೆಗೂ 2 ಬಾರಿ ಸೆಮಿಫೈನಲ್‌ನಲ್ಲಿ ಎಡವಿದೆ. 2002ರ ಸೆಮೀಸ್‌ನಲ್ಲಿ ದ.ಆಫ್ರಿಕಾ, 2004ರ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ವಿರುದ್ಧ ಮುಗ್ಗರಿಸಿತ್ತು.