ಅಂ-19 ವಿಶ್ವಕಪ್: ಇಂದು ಭಾರತ vs ನೇಪಾಳ ಫೈಟ್‌

| Published : Feb 02 2024, 01:02 AM IST

ಸಾರಾಂಶ

ಈ ಬಾರಿ ಅಂಡರ್‌-19 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಸ್ಥಾನದ ಮೇಲೆ ಕಣ್ಣಿಟ್ಟಿರುವ 5 ಬಾರಿ ಚಾಂಪಿಯನ್‌ ಭಾರತ ತಂಡ, ಸೂಪರ್‌-6 ಹಂತದ ಕೊನೆ ಪಂದ್ಯದಲ್ಲಿ ಶುಕ್ರವಾರ ನೇಪಾಳ ವಿರುದ್ಧ ಸೆಣಸಾಡಲಿದೆ.

ಬ್ಲೂಮ್‌ಫೌಂಟೇನ್‌(ದ.ಆಫ್ರಿಕಾ): ಈ ಬಾರಿ ಅಂಡರ್‌-19 ವಿಶ್ವಕಪ್‌ನಲ್ಲಿ ಸೆಮಿಫೈನಲ್‌ ಸ್ಥಾನದ ಮೇಲೆ ಕಣ್ಣಿಟ್ಟಿರುವ 5 ಬಾರಿ ಚಾಂಪಿಯನ್‌ ಭಾರತ ತಂಡ, ಸೂಪರ್‌-6 ಹಂತದ ಕೊನೆ ಪಂದ್ಯದಲ್ಲಿ ಶುಕ್ರವಾರ ನೇಪಾಳ ವಿರುದ್ಧ ಸೆಣಸಾಡಲಿದೆ.ಭಾರತ ಗುಂಪು ಹಂತದಲ್ಲಿ ಬಾಂಗ್ಲಾದೇಶ, ಐರ್ಲೆಂಡ್‌ ಹಾಗೂ ಸೂಪರ್‌-6 ಹಂತದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಗೆದ್ದಿದ್ದು, ಹೀಗಾಗಿ ಗುಂಪು 1ರಲ್ಲಿ ಉತ್ತಮ ನೆಟ್‌ ರನ್‌ರೇಟ್‌(+3.32)ನೊಂದಿಗೆ ಅಗ್ರಸ್ಥಾನದಲ್ಲಿದೆ. ಪಾಕಿಸ್ತಾನ ಕೂಡಾ 6 ಅಂಕ ಪಡೆದಿದ್ದರೂ +1.06 ನೆಟ್‌ ರನ್‌ರೇಟ್‌ನೊಂದಿಗೆ 2ನೇ ಸ್ಥಾನದಲ್ಲಿದೆ. ಬಾಂಗ್ಲಾದೇಶ 4, ನ್ಯೂಜಿಲೆಂಡ್‌ 2 ಅಂಕ ಸಂಪಾದಿಸಿದೆ. ಪ್ರತಿ ಗುಂಪಿನಿಂದ ಅಗ್ರ-2 ತಂಡಗಳು ಸೆಮೀಸ್‌ಗೇರಲಿವೆ.ಭಾರತ ಈ ಪಂದ್ಯದಲ್ಲಿ ಗೆದ್ದು ಅಗ್ರಸ್ಥಾನಿಯಾಗಿಯೇ ಸೆಮೀಸ್‌ಗೇರಲು ಕಾಯುತ್ತಿದೆ. ಒಂದು ವೇಳೆ ಸೋತರೂ ನೆಟ್‌ ರನ್‌ರೇಟ್‌ ಉತ್ತಮವಾಗಿರುವ ಹಿನ್ನೆಲೆಯಲ್ಲಿ ತಂಡಕ್ಕೆ ಸೆಮೀಸ್‌ ಅವಕಾಶ ಸಿಗುವ ಸಾಧ್ಯತೆ ಹೆಚ್ಚು. ಅತ್ತ ನೇಪಾಳ ಒಂದೂ ಪಂದ್ಯ ಗೆಲ್ಲದೆ ಅಂಕಪಟ್ಟಿಯಲ್ಲಿ ಕೊನೆ ಸ್ಥಾನದಲ್ಲಿದೆ. ಹೀಗಾಗಿ ಭಾರತ ವಿರುದ್ಧ ಗೆದ್ದರೂ ಸೆಮಿಫೈನಲ್‌ಗೇರುವುದಿಲ್ಲ.ಪಂದ್ಯ: ಮಧ್ಯಾಹ್ನ 1.30ಕ್ಕೆ