ಸಾರಾಂಶ
ಅಂಡರ್-19 ವಿಶ್ವಕಪ್‌ನಲ್ಲಿ ಭಾರತ ಭಾನುವಾರ ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಅಮೆರಿಕ ವಿರುದ್ಧ 201 ರನ್ ಬೃಹತ್ ಗೆಲುವು ದಾಖಲಿಸಿತು.
ಬ್ಲೂಮ್‌ಫಂಟೀನ್: ಅಂಡರ್-19 ವಿಶ್ವಕಪ್‌ನಲ್ಲಿ 5 ಬಾರಿ ಚಾಂಪಿಯನ್ ಭಾರತ ಹ್ಯಾಟ್ರಿಕ್ ಗೆಲುವಿನೊಂದಿಗೆ ಸೂಪರ್-6 ಹಂತ ಪ್ರವೇಶಿಸಿದೆ. ಭಾನುವಾರ ‘ಎ’ ಗುಂಪಿನ ಕೊನೆ ಪಂದ್ಯದಲ್ಲಿ ಅಮೆರಿಕ ವಿರುದ್ಧ 201 ರನ್ ಬೃಹತ್ ಗೆಲುವು ದಾಖಲಿಸಿತು.
ಕಳೆದ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧವೂ ಭಾರತಕ್ಕೆ 201 ರನ್ ಜಯ ಲಭಿಸಿತ್ತು.ಮೊದಲು ಬ್ಯಾಟ್ ಮಾಡಿದ ಭಾರತ ಅರ್ಶಿನ್ ಕುಲ್ಕರ್ಣಿ(109), ಮುಶೀರ್ ಖಾನ್(73) ಆಕರ್ಷಕ ಆಟದ ನೆರವಿನಿಂದ 5 ವಿಕೆಟ್ ಕಳೆದುಕೊಂಡು 326 ರನ್ ಕಲೆಹಾಕಿತು.
ದೊಡ್ಡ ಗುರಿ ಬೆನ್ನತ್ತಿದ ಅಮೆರಿಕ 50 ಓವರಲ್ಲಿ 8 ವಿಕೆಟ್ ಕಳೆದುಕೊಂಡು 125 ರನ್ ಗಳಿಸಿ ಸೋಲೊಪ್ಪಿಕೊಂಡಿತು. ನಮನ್ ತಿವಾರಿ 4 ವಿಕೆಟ್ ಕಬಳಿಸಿದರು. ಭಾರತ ಸೂಪರ್-6 ಹಂತದ ಮೊದಲ ಪಂದ್ಯದಲ್ಲಿ ಜ.30ರಂದು ನ್ಯೂಜಿಲೆಂಡ್ ವಿರುದ್ಧ ಸೆಣಸಾಡಲಿದೆ.