ಅಂತಾರಾಷ್ಟ್ರೀಯ ಖೋ ಖೋ ಪಂದ್ಯಾವಳಿಗೆ ಎಸ್ ಟಿಜಿ ಕಾಲೇಜಿನ ವರುಣ್ ಕುಮಾರ್ ಆಯ್ಕೆ

| Published : Oct 19 2023, 12:46 AM IST

ಅಂತಾರಾಷ್ಟ್ರೀಯ ಖೋ ಖೋ ಪಂದ್ಯಾವಳಿಗೆ ಎಸ್ ಟಿಜಿ ಕಾಲೇಜಿನ ವರುಣ್ ಕುಮಾರ್ ಆಯ್ಕೆ
Share this Article
  • FB
  • TW
  • Linkdin
  • Email

ಸಾರಾಂಶ

ಅಂತಾರಾಷ್ಟ್ರೀಯ ಖೋ ಖೋ ಪಂದ್ಯಾವಳಿಗೆ ಎಸ್ ಟಿಜಿ ಕಾಲೇಜಿನ ವರುಣ್ ಕುಮಾರ್ ಆಯ್ಕೆ
ಪಾಂಡವಪುರ: ಮಲೇಷಿಯಾದಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರೀಯ ಖೋ-ಖೋ ಪಂದ್ಯಾವಳಿಗೆ ತಾಲೂಕಿನ ಚಿನಕುರಳಿಯ ಎಸ್‌ಟಿಜಿ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿ ವರುಣ್‌ಕುಮಾರ್ ಆಯ್ಕೆಯಾಗಿದ್ದಾರೆ. ತಾಲೂಕಿನ ಕ್ಯಾತನಹಳ್ಳಿ ಗ್ರಾಮದ ರೈತ ಕುಟುಂಬದ ವರುಣ್‌ಕುಮಾರ್ ಚಿನಕುರಳಿಯ ಎಸ್‌ಟಿಜಿ ಶಿಕ್ಷಣ ಸಂಸ್ಥೆಯಲ್ಲಿ ಪ್ರಥಮ ವರ್ಷದ ಬಿಕಾಂ ಪದವಿ ಮಾಡುತ್ತಿದ್ದಾನೆ. ವರುಣ್‌ಕುಮಾರ್ ಇತ್ತೀಚೆಗೆ ಪಶ್ಚಿಮ ಬಂಗಾಳ ಖೋ-ಖೋ ಆಸೋಸಿಯೇಷನ್ ಹಾಗೂ ಖೋ-ಖೋ ಫೆಡರೇಷನ್ ಆಫ್ ಇಂಡಿಯಾ ಆಯೋಜಿಸಿದ್ದ 41ನೇ ಜ್ಯೂನಿಯರ್ ರಾಷ್ಟ್ರೀಯ ಖೋ-ಖೋ ಚಾಂಪಿಯನ್ ಶಿಪ್‌ನಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ತೋರಿದ್ದರು. ಮಲೇಷಿಯಾದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಖೋ-ಖೋ ಪಂದ್ಯಾವಳಿಕೆ ಭಾರತದ ಪರವಾಗಿ ಆಡುವ 15ರ ಬಳಗದಲ್ಲಿ ಕರ್ನಾಟಕ ಪರವಾಗಿ ವರುಣ್‌ಕುಮಾರ್ ಆಯ್ಕೆಯಾದ ಏಕೈಕ ಕ್ರೀಡಾಪಟು ಆಗಿದ್ದಾನೆ. ಈ ವಿಷಯವನ್ನು ಸ್ವತಃ ಕ್ರೀಡಾಪಟು ವರುಣ್‌ಕುಮಾರ್ ದೂರವಾಣಿ ಕರೆ ಮಾಡಿ ಕಾಲೇಜಿನ ಪ್ರಾಂಶುಪಾಲರ ಬಳಿ ಹಂಚಿಕೊಂಡಿದ್ದು, ಅಂತಾರಾಷ್ಟ್ರಮಟ್ಟದಲ್ಲಿ ದೇಶವನ್ನು ಪ್ರತಿನಿಧಿಸುತ್ತಿರುವ ಕ್ರೀಡಾಪಟು ವರುಣ್‌ಕುಮಾರ್ ಅವರಿಗೆ ಎಸ್‌ಟಿಜಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಮಾಜಿ ಸಚಿವ ಸಿ.ಎಸ್.ಪುಟ್ಟರಾಜು, ಸಿಇಒ ಸಿ.ಪಿ.ಶಿವರಾಜು, ಆಡಳಿತಾಧಿಕಾರಿ ನಿವೇದಿತ ನಾಗೇಶ್, ಪ್ರಾಂಶುಪಾಲ ಡಾ.ನಿಶಾಂತ್ ಎ.ನಾಯ್ಡು, ದೈಹಿಕ ಶಿಕ್ಷಕ ಆರ್.ನಾಗೇಂದ್ರ ಸೇರಿದಂತೆ ಎಲ್ಲಾ ಶಿಕ್ಷಕರು, ಸಿಬ್ಬಂದಿ ವರ್ಗದವರು ಅಭಿನಂಧನೆ ಸಲ್ಲಿಸಿ, ಕ್ರೀಡೆಯಲ್ಲಿ ಜಯಗಳಿಸುವಂತೆ ಆಶೀರ್ವಾಧಿಸಿದ್ದಾರೆ. 17ಕೆಎಂಎನ್ ಡಿ20 ಅಂತಾರಾಷ್ಟ್ರೀಯ ಖೋ-ಖೋಗೆ ಆಯ್ಕೆಯಾದ ವರುಣ್‌ಕುಮಾರ್