ಸಾರಾಂಶ
ಬೆಂಗಳೂರು : ಎರಡು ವರ್ಷಗಳ ಹಿಂದೆ ಕರ್ನಾಟಕ ತಂಡ ತೊರೆದು ವಿದರ್ಭ ಸೇರ್ಪಡೆಗೊಂಡಿದ್ದ ತಾರಾ ಕ್ರಿಕೆಟಿಗ ಕರುಣ್ ನಾಯರ್ ಮತ್ತೆ ರಾಜ್ಯ ತಂಡಕ್ಕೆ ಸೇರ್ಪಡೆಗೊಳ್ಳಲಿದ್ದಾರೆ. ಅವರು ಈ ಬಾರಿ ದೇಸಿ ಋತುವಿನಲ್ಲಿ ಕರ್ನಾಟಕ ಪರ ಆಡುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ತಿಳಿಸಿವೆ.
2023ರಲ್ಲಿ ವಿದರ್ಭ ಸೇರಿದ್ದ ಕರುಣ್ 2 ಆವೃತ್ತಿಗಳಲ್ಲಿ ತಂಡ ಪ್ರತಿನಿಧಿಸಿದ್ದಾರೆ. ಕಳೆದ ಬಾರಿ ಬ್ಯಾಟಿಂಗ್‌ನಲ್ಲಿ ಅಭೂತಪೂರ್ವ ಪ್ರದರ್ಶನ ನೀಡಿದ್ದ ಅವರು ವಿದರ್ಭ ತಂಡ ರಣಜಿಯಲ್ಲಿ ಚಾಂಪಿಯನ್, ವಿಜಯ್ ಹಜಾರೆಯಲ್ಲಿ ರನ್ನರ್-ಅಪ್ ಆಗಲು ಪ್ರಮುಖ ಕಾರಣರಾಗಿದ್ದರು. ಆದರೆ ಕೌಟುಂಬಿಕ ಕಾರಣಗಳಿಂದಾಗಿ ಮತ್ತೆ ಕರ್ನಾಟಕ ಪರ ಆಡಲು ಮುಂದಾಗಿದ್ದು, ಇದಕ್ಕಾಗಿ ವಿದರ್ಭ ಕ್ರಿಕೆಟ್ ಸಂಸ್ಥೆ ಜೊತೆ ಎನ್‌ಒಸಿ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ವೇಗಿ ಕೌಶಿಕ್ ಗೋವಾ ಸೇರ್ಪಡೆಇತ್ತೀಚೆಗಷ್ಟೇ ಕರ್ನಾಟಕ ತಂಡ ತೊರೆದಿದ್ದ ವೇಗಿ ವಾಸುಕಿ ಕೌಶಿಕ್ ಮುಂದಿನ ಋತುವಿನಲ್ಲಿ ಗೋವಾ ಪರ ಆಡುವುದು ಖಚಿತವಾಗಿದೆ. ಅವರ ಮನವಿಯನ್ನು ಗೋವಾ ಕ್ರಿಕೆಟ್ ಸಂಸ್ಥೆ ಪುರಸ್ಕರಿಸಿದೆ. ‘ಗೋವಾ ಪರ ಆಡುವುದಕ್ಕೆ ಅನುಮತಿ ಕೇಳಿದ್ದೆ. ಅದಕ್ಕೆ ಸಮ್ಮತಿಸಿದ್ದಾರೆ. ಮುಂದಿನ ಬಾರಿ ಗೋವಾ ತಂಡ ಪರ ಕಣಕ್ಕಿಳಿಯಲಿದ್ದೇನೆ’ ಎಂದು ಕೌಶಿಕ್ ಕನ್ನಡಪ್ರಭ ಪತ್ರಿಕೆಗೆ ತಿಳಿಸಿದ್ದಾರೆ.