ಭಾರತ ತಂಡದ ಕ್ರಿಕೆಟಿಗ ರಿಂಕು ಸಿಂಗ್‌ ಭಾನುವಾರ ಸಮಾಜವಾದಿ ಪಾರ್ಟಿಯ ಸಂಸದೆ ಪ್ರಿಯಾ ಸರೋಜ್‌ ಜೊತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡರು. ರಾಜಕೀಯ ನಾಯಕರು, ಕೆಲ ಕ್ರಿಕೆಟಿಗರು, ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.

ಲಖನೌ: ಭಾರತ ತಂಡದ ಕ್ರಿಕೆಟಿಗ ರಿಂಕು ಸಿಂಗ್‌ ಭಾನುವಾರ ಸಮಾಜವಾದಿ ಪಾರ್ಟಿಯ ಸಂಸದೆ ಪ್ರಿಯಾ ಸರೋಜ್‌ ಜೊತೆ ಮದುವೆ ನಿಶ್ಚಿತಾರ್ಥ ಮಾಡಿಕೊಂಡರು.

 ರಾಜಕೀಯ ನಾಯಕರು, ಕೆಲ ಕ್ರಿಕೆಟಿಗರು, ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು. ಈ ವರ್ಷ ನ.18ರಂದು ಮದುವೆ ನಿಗದಿಯಾಗಿದೆ. ರಿಂಕು ಭಾರತ ಪರ 2 ಏಕದಿನ, 33 ಟಿ20 ಪಂದ್ಯಗಳನ್ನು ಆಡಿದ್ದು, ಹಲವು ವರ್ಷಗಳಿಂದ ಐಪಿಎಲ್‌ನಲ್ಲಿ ಕೆಕೆಆರ್‌ ಪರ ಆಡುತ್ತಿದ್ದಾರೆ. ಪ್ರಿಯಾ 2024ರಲ್ಲಿ ಮೊದಲ ಬಾರಿಗೆ ಲೋಕಸಭಾ ಅಖಾಡಕ್ಕಿಳಿದು ಮಚ್ಚಿಶಹರ್‌ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ.