ನಿವೃತ್ತಿ ನಿರ್ಧಾರದಿಂದ ವಿನೇಶ್ ಯೂಟರ್ನ್‌: ನನ್ನಲ್ಲಿನ ಹೋರಾಟ, ಕುಸ್ತಿ ಇನ್ನೂ ಮುಗಿದಿಲ್ಲ ಎಂದ ತಾರಾ ರೆಸ್ಲರ್‌

| Published : Aug 17 2024, 12:55 AM IST / Updated: Aug 17 2024, 04:17 AM IST

ನಿವೃತ್ತಿ ನಿರ್ಧಾರದಿಂದ ವಿನೇಶ್ ಯೂಟರ್ನ್‌: ನನ್ನಲ್ಲಿನ ಹೋರಾಟ, ಕುಸ್ತಿ ಇನ್ನೂ ಮುಗಿದಿಲ್ಲ ಎಂದ ತಾರಾ ರೆಸ್ಲರ್‌
Share this Article
  • FB
  • TW
  • Linkdin
  • Email

ಸಾರಾಂಶ

ಎಕ್ಸ್‌ ಖಾತೆಯಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿರುವ ವಿನೇಶ್‌, ನನ್ನಲ್ಲಿನ ಹೋರಾಟ ಮತ್ತು ಕುಸ್ತಿ ಮುಗಿದಿಲ್ಲ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಆದರೆ ನಾನು ನಂಬಿದ ವಿಷಯದಲ್ಲಿ ಯಾವತ್ತೂ ಹೋರಾಡುತ್ತೇನೆ ಎಂದಿದ್ದಾರೆ.

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಿಂದ ಅನರ್ಹಗೊಂಡ ಬಳಿಕ ನಿವೃತ್ತಿ ಘೋಷಿಸಿದ್ದ ಭಾರತದ ತಾರಾ ಕುಸ್ತಿಪಟು ವಿನೇಶ್‌ ಫೋಗಟ್‌, ತಮ್ಮ ನಿರ್ಧಾರಿಂದ ಹಿಂದೆ ಸರಿಯುವ ಸುಳಿವು ನೀಡಿದ್ದಾರೆ. 

ಈ ಬಗ್ಗೆ ಎಕ್ಸ್‌ ಖಾತೆಯಲ್ಲಿ ಸುದೀರ್ಘ ಪೋಸ್ಟ್‌ ಹಂಚಿಕೊಂಡಿದ್ದಾರೆ. ‘ನಾನು ಸಾಧನೆಯ ಗುರಿಯನ್ನು ಇನ್ನೂ ತಲುಪಿಲ್ಲ. ಬಹುಶಃ ಬೇರೆ ಬೇರೆ ಸನ್ನಿವೇಶಗಳಿಗೆ ಅನುಗುಣವಾಗಿ, ನಾನು 2032ರ ವರೆಗೂ ಆಡುವುದನ್ನು ನೋಡಬಹುದು. 

ನನ್ನಲ್ಲಿನ ಹೋರಾಟ ಮತ್ತು ಕುಸ್ತಿ ಮುಗಿದಿಲ್ಲ. ಭವಿಷ್ಯದಲ್ಲಿ ಏನಾಗುತ್ತದೆ ಎಂದು ಊಹಿಸಲು ಸಾಧ್ಯವಿಲ್ಲ. ಆದರೆ ನಾನು ನಂಬಿದ ವಿಷಯದಲ್ಲಿ ಯಾವತ್ತೂ ಹೋರಾಡುತ್ತೇನೆ’ ಎಂದು 29 ವರ್ಷದ ವಿನೇಶ್‌ ತಿಳಿಸಿದ್ದಾರೆ. ಇದೇ ವೇಳೆ, ತಮ್ಮ ಒಲಿಂಪಿಕ್ಸ್‌ ಪಯಣದಲ್ಲಿ ಜೊತೆಗಿದ್ದ ವೈದ್ಯ ದಿನ್‌ಶಾ ಪರ್ದಿವಾಲಾ, ಸಹಾಯಕ ಸಿಬ್ಬಂದಿ, ಕುಟುಂಬಸ್ಥರಿಗೆ ವಿನೇಶ್‌ ಧನ್ಯವಾದ ತಿಳಿಸಿದ್ದಾರೆ.

ವಿನೇಶ್‌ ಸತ್ತೇ ಹೋಗ್ತಾರೆ ಎಂದು ಆತಂಕಗೊಂಡಿದ್ದೆ: ಕೋಚ್‌ ವೋಲರ್‌ ಅಕೋಸ್‌

ನವದೆಹಲಿ: ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಅನರ್ಹತೆ ತಪ್ಪಿಸಲು ತೂಕ ಇಳಿಸುವ ಪ್ರಯತ್ನದಲ್ಲಿದ್ದಾಗ ವಿನೇಶ್‌ ಫೋಗಟ್‌ ಸತ್ತೇ ಹೋಗುತ್ತಾರೆ ಎಂದು ಆತಂಕಗೊಂಡಿದ್ದೆ ಎಂದು ವಿನೇಶ್‌ರ ಕೋಚ್‌ ವೋಲರ್‌ ಅಕೋಸ್‌ ಶುಕ್ರವಾರ ಫೇಸ್‌ಬುಕ್‌ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ. 

ಬಳಿಕ ಅವರು ಪೋಸ್ಟ್‌ ಅಳಿಸಿ ಹಾಕಿದ್ದಾರೆ. ತೂಕ ಇಳಿಸುವ ಪ್ರಕ್ರಿಯೆ ವೇಳೆ ನಡೆದ ಘಟನೆಗಳನ್ನು ವಿವರಿಸಿರುವ ಅವರು, ‘ವಿನೇಶ್‌ ಮಧ್ಯರಾತ್ರಿಯಿಂದ ಬೆಳಗ್ಗೆ 5.30ರ ವರೆಗೂ ಕಠಿಣ ಪರಿಶ್ರಮ ಪಟ್ಟಿದ್ದಾರೆ. ಬಿಡುವಿಲ್ಲದೆ ಜಿಮ್‌, ಸ್ಕಿಪ್ಪಿಂಗ್‌, ಜಾಗಿಂಗ್‌, ಹಬೆಯಲ್ಲಿ ಕೂರುವ ಮೂಲಕ ತೂಕ ಇಳಿಸಲು ಪ್ರಯತ್ನಿಸಿದ್ದಾರೆ. ಇದರಿಂದ ವಿನೇಶ್‌ ಕುಸಿದು ಬಿದ್ದಿದ್ದರು. 

ಆದರೆ ಹೇಗಾದರೂ ಮಾಡಿ ಅವಳನ್ನು ಎಬ್ಬಿಸಿದೆವು. ಈ ಹಂತದಲ್ಲಿ ವಿನೇಶ್‌ ಸಾಯಬಹುದು ಎಂದು ನಾನು ಆತಂಕಕ್ಕೊಳಗಾಗಿದ್ದೆ’ ಎಂದು ಅವರು ವಿವರಿಸಿದ್ದಾರೆ.