ಒಲಿಂಪಿಕ್ಸ್‌ನಲ್ಲಿ ಮಿಸ್ಸಾದರೂ ವಿನೇಶ್‌ಗೆ ತವರಲ್ಲಿ ಸಿಕ್ತು ಚಿನ್ನದ ಪದಕ! ರೆಸ್ಲರ್‌ಗೆ ಹರ್ಯಾಣದ ಬಲಾಲಿಯಲ್ಲಿ ಅದ್ಧೂರಿ ಸನ್ಮಾನ

| Published : Aug 19 2024, 12:45 AM IST / Updated: Aug 19 2024, 04:20 AM IST

ಒಲಿಂಪಿಕ್ಸ್‌ನಲ್ಲಿ ಮಿಸ್ಸಾದರೂ ವಿನೇಶ್‌ಗೆ ತವರಲ್ಲಿ ಸಿಕ್ತು ಚಿನ್ನದ ಪದಕ! ರೆಸ್ಲರ್‌ಗೆ ಹರ್ಯಾಣದ ಬಲಾಲಿಯಲ್ಲಿ ಅದ್ಧೂರಿ ಸನ್ಮಾನ
Share this Article
  • FB
  • TW
  • Linkdin
  • Email

ಸಾರಾಂಶ

ರೆಸ್ಲರ್‌ಗೆ ಹರ್ಯಾಣದ ಬಲಾಲಿಯಲ್ಲಿ ಅದ್ಧೂರಿ ಸನ್ಮಾನ. ಗ್ರಾಮಸ್ಥರಿಂದ 750 ಕೆ.ಜಿ. ಲಡ್ಡು ವಿತರಣೆ. ವಿನೇಶ್‌ಗೆ ನೋಟಿನ ಮಾಲೆ, ಖಡ್ಗ ಉಡುಗೊರೆ. ನನಗೆ ಸಿಗುತ್ತಿರುವ ಪ್ರೀತಿ 1000 ಚಿನ್ನದ ಪದಕಗಳಿಗೂ ಮಿಗಿಲು ಎಂದ ವಿನೇಶ್‌.

ಬಲಾಲಿ(ಹರ್ಯಾಣ): ಒಲಿಂಪಿಕ್ಸ್‌ನಲ್ಲಿ ಪದಕ ವಂಚಿತರಾಗಿದ್ದ ಭಾರತದ ತಾರಾ ಕುಸ್ತಿಪಟು ವಿನೇಶ್‌ ಪೋಗಟ್‌ ಶನಿವಾರ ರಾತ್ರಿ ತಮ್ಮ ತವರು, ಹರ್ಯಾಣದ ಬಲಾಲಿ ಗ್ರಾಮಕ್ಕೆ ಆಗಮಿಸಿದ್ದಾರೆ. ಈ ವೇಳೆ ಅವರಿಗೆ ಗ್ರಾಮದಲ್ಲಿ ಅದ್ಧೂರಿ ಸ್ವಾಗತ ಕೋರಲಾಗಿದ್ದು, ಗ್ರಾಮಸ್ಥರೇ ಚಿನ್ನದ ಪದಕವೊಂದನ್ನು ವಿನೇಶ್‌ ಕೊರಳಿಗೆ ಹಾಕಿದ್ದಾರೆ.

ಶನಿವಾರ ಬೆಳಗ್ಗೆ ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ವಿನೇಶ್‌, ಕಾರ್‌ ರ್‍ಯಾಲಿ ಮೂಲಕ 135 ಕಿ.ಮೀ. ದೂರದ ಬಲಾಲಿಗೆ ತೆರಳಿದ್ದಾರೆ. ಸನ್ಮಾನ ಸಮಾರಂಭದ ವೇಳೆ ಗ್ರಾಮಸ್ಥರು 750 ಕೆ.ಜಿ. ಲಡ್ಡು ಹಂಚಿದ್ದಾರೆ. ಅಲ್ಲದೆ, ಊರ ಜನರು ₹100, ₹500, ₹2000, ₹5000 ನಗದು ಬಹುಮಾನವನ್ನು ವಿನೇಶ್‌ಗೆ ಉಡುಗೊರೆಯಾಗಿ ನೀಡಿದ್ದಾರೆ. ಹಲವರು ನೋಟಿನ ಮಾಲೆ ಹಾಕಿ ವಿನೇಶ್‌ರನ್ನು ಸನ್ಮಾನಿಸಿದ್ದಾರೆ. ಈ ವೇಳೆ ಭಾವುಕರಾಗಿ ಮಾತನಾಡಿದ ವಿನೇಶ್‌, ‘ನನಗೆ ಅವರು ಚಿನ್ನದ ಪದಕ ಕೊಡಲಿಲ್ಲ. ಆದರೆ ಗ್ರಾಮಸ್ಥರು ನೀಡಿದ್ದಾರೆ. ನನಗೆ ಸಿಗುತ್ತಿರುವ ಪ್ರೀತಿ 1000 ಚಿನ್ನದ ಪದಕಗಳಿಗೂ ಮಿಗಿಲು ಎಂದಿದ್ದಾರೆ.

ಅಂ-19 ವನಿತಾ ವಿಶ್ವಕಪ್‌: ವೆಸ್ಟ್‌ಇಂಡೀಸ್‌ ವಿರುದ್ಧ ಭಾರತಕ್ಕೆ ಮೊದಲ ಪಂದ್ಯ

ದುಬೈ: 2025ರ ಐಸಿಸಿ ಅಂಡರ್‌-19 ಮಹಿಳಾ ಟಿ20 ವಿಶ್ವಕಪ್‌ ವೇಳಾಪಟ್ಟಿ ಪ್ರಕಟಗೊಂಡಿದೆ. 2ನೇ ಆವೃತ್ತಿಯ ಟೂರ್ನಿ ಜ.18ರಿಂದ ಫೆ.2ರ ವರೆಗೆ ಮಲೇಷ್ಯಾದಲ್ಲಿ ನಡೆಯಲಿದೆ. ‘ಎ’ ಗುಂಪಿನಲ್ಲಿರುವ ಹಾಲಿ ಚಾಂಪಿಯನ್‌ ಭಾರತ ತಂಡ ವೆಸ್ಟ್‌ಇಂಡೀಸ್‌ ವಿರುದ್ಧ ಮೊದಲ ಪಂದ್ಯವಾಡಲಿದೆ. ಬಳಿಕ ಮಲೇಷ್ಯಾ, ಶ್ರೀಲಂಕಾ ವಿರುದ್ಧ ಸೆಣಸಲಿದೆ. 

ಟೂರ್ನಿಯಲ್ಲಿ ಒಟ್ಟು 16 ತಂಡಗಳು ಪಾಲ್ಗೊಳ್ಳಲಿದ್ದು, ತಲಾ 4 ತಂಡಗಳ 4 ಗುಂಪುಗಳನ್ನಾಗಿ ವಿಂಗಡಿಸಲಾಗಿದೆ. ಪ್ರತಿ ತಂಡಗಳು ಗುಂಪು ಹಂತದಲ್ಲಿ 1 ಬಾರಿ ಪರಸ್ಪರ ಮುಖಾಮುಖಿಯಾಗಲಿವೆ. ಎಲ್ಲಾ ಗುಂಪಿನ ಅಗ್ರ-3 ತಂಡಗಳು ಸೂಪರ್‌-6 ಹಂತ ಪ್ರವೇಶಿಸಿಲಿವೆ. ಸೂಪರ್‌-6ನಲ್ಲಿ ತಲಾ 6 ತಂಡಗಳ 2 ಗುಂಪುಗಳನ್ನಾಗಿ ವಿಂಗಡಿಸಲಾಗುತ್ತದೆ. ಗುಂಪಿನ ಅಗ್ರ-2 ತಂಡಗಳು ಸೆಮಿಫೈನಲ್‌ ಪ್ರವೇಶಿಸಲಿವೆ. ಸೆಮೀಸ್‌ ಪಂದ್ಯಗಳು ಜ.31ಕ್ಕೆ, ಫೈನಲ್‌ ಫೆ.2ಕ್ಕೆ ನಡೆಯಲಿದೆ.