ಇದು ಭಾರತದ ಪರವಾಗಿ ನನ್ನ ಕಡೆಯ ಟಿ20 ಪಂದ್ಯ, ನಾವು ಕಪ್‌ ಎತ್ತಲು ಬಯಸಿದ್ದೆವು ಎಂದು ಕೊಹ್ಲಿ ಹೇಳಿದ್ದಾರೆ. ಕೊಹ್ಲಿ ಟಿ20 ಆಟ ಇನ್ನು ಐಪಿಎಲ್‌ನಲ್ಲಿ ಆರ್‌ಸಿಬಿಗೆ ಸೀಮಿತ ಸಾಧ್ಯತೆ.

ಬ್ರಿಡ್ಜ್‌ಸ್ಟೋನ್‌: ಭಾರತ ತಂಡ ಕಂಡ ಶ್ರೇಷ್ಠ ಕ್ರಿಕೆಟಿಗರಲ್ಲಿ ಒಬ್ಬರಾದ ವಿರಾಟ್‌ ಕೊಹ್ಲಿ ಅಂತಾರಾಷ್ಟ್ರೀಯ ಟಿ20ಗೆ ಶನಿವಾರ ವಿದಾಯ ಘೋಷಿಸಿದ್ದಾರೆ. ಟೀಂ ಇಂಡಿಯಾ ಶನಿವಾರ ಟಿ20 ವಿಶ್ವಕಪ್‌ ಗೆದ್ದ ಬೆನ್ನಲ್ಲೇ ಮಾತನಾಡಿದ ಕೊಹ್ಲಿ, ‘ಇದು ನನ್ನ ಕಡೆಯ ಟಿ20 ವಿಶ್ವಕಪ್‌, ನಾವು ಏನು ಮಾಡಬೇಕು ಅಂದುಕೊಂಡಿದ್ದೇವೋ ಅದನ್ನು ಸಾಧಿಸಿದ್ದೇವೆ. ಒಂದೊಂದು ದಿನ ನಾವು ಇಂದು ರನ್‌ ಗಳಿಸುವುದು ಸಾಧ್ಯವಿಲ್ಲ ಎಂದುಕೊಂಡಿರುತ್ತೇವೆ ಆದರೂ ಇಂಥು ನಡೆದಂಥ ಘಟನೆಗಳು ನಡೆಯುತ್ತದೆ. ದೇವರು ದೊಡ್ಡವನು. ಇಂದು ಅಥವಾ ಇನ್ನೆಂದೂ ಇಲ್ಲ ಎನ್ನುವ ಸಂದರ್ಭ. ಇದು ಭಾರತದ ಪರವಾಗಿ ನನ್ನ ಕಡೆಯ ಟಿ20 ಪಂದ್ಯ, ನಾವು ಕಪ್‌ ಎತ್ತಲು ಬಯಸಿದ್ದೆವು’ ಎಂದು ಹೇಳಿದ್ದಾರೆ.

ಕೊಹ್ಲಿ ಟಿ20 ಇತಿಹಾಸ

2010ರ ಜೂನ್‌ನಲ್ಲಿ ಟಿ20ಗೆ ಪದಾರ್ಪಣೆ ಮಾಡಿದ್ದ ಕೊಹ್ಲಿ, ನಂತರದ 14 ವರ್ಷಗಳಲ್ಲಿ 125 ಟಿ20 ಪಂದ್ಯಗಳನ್ನು ಆಡಿದ್ದಾರೆ. ಇದರಲ್ಲಿ 4188 ರನ್‌ ಸಿಡಿಸಿದ್ದು, ಅದರಲ್ಲಿ ಒಂದು ಶತಕ ಮತ್ತು 28 ಅರ್ಧಶತಕ ಸೇರಿವೆ. ರೋಹಿತ್‌ ಶರ್ಮಾ ನಂತರ ಭಾರತದ ಪರವಾಗಿ ಅತಿ ಹೆಚ್ಚು ರನ್‌ ಸಿಡಿಸಿರುವ ದಾಖಲೆಯೂ ಕೊಹ್ಲಿ ಬತ್ತಳಿಕೆಯಲ್ಲಿದೆ.

ಪಂದ್ಯ: 125ರನ್‌: 4188

50/100: 38/01ಗರಿಷ್ಠ: 122

4/6: 369/1247 ಪಂದ್ಯದಲ್ಲಿ 75 ರನ್‌, 8ನೇ ಪಂದ್ಯದಲ್ಲಿ 76!: ಏಳೂ ಪಂದ್ಯಕ್ಕಿಂತ 8ನೇ ಪಂದ್ಯದಲ್ಲಿ ಹೆಚ್ಚು ರನ್‌

ಕಿಂಗ್‌ ಕೊಹ್ಲಿ ಶನಿವಾರ ತಮ್ಮ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡುವ ಮೂಲಕ ಟಿಂ ಇಂಡಿಯಾ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಕೊಹ್ಲಿ ಪಾಲಿಗೆ ಈ ಬಾರಿಯ ಟಿ20 ವಿಶ್ವಕಪ್‌ ಹೆಚ್ಚು ಸಂಭ್ರಮ ನೀಡುವಂಥದ್ದೇನೂ ಆಗಿರಲಿಲ್ಲ. ಕಾರಣ ಫೈನಲ್‌ಗೂ ಮುನ್ನ ಆಡಿದ 7 ಪಂದ್ಯಗಳ ಪೈಕಿ ಕೊಹ್ಲಿ ಹೊಡೆದಿದ್ದು ಕೇವಲ 75 ರನ್‌. ಈ ಪೈಕಿ ಬಾಂಗ್ಲಾದೇಶದ ವಿರುದ್ಧ ಹೊಡೆದ 37 ರನ್ನೇ ಗರಿಷ್ಠವಾಗಿತ್ತು. ಆದರೆ ಶನಿವಾರ ತಂಡ ಅತ್ಯಂತ ಗರಿಷ್ಠ ಪ್ರಮಾಣದಲ್ಲಿ ‘ಕಿಂಗ್‌ ಕೊಹ್ಲಿ’ ಆಟ ಬಯಸಿದ್ದಾಗ, ಕೊಹ್ಲಿ ನಿರೀಕ್ಷೆ ಹುಸಿಗೊಳಿಸದೇ 59 ಬಾಲ್‌ಗಳಲ್ಲಿ 76 ರನ್‌ ಹೊಡೆದ ತಂಡ 170ರ ಗಡಿದಾಟುವಲ್ಲಿ ಮತ್ತು ತಂಡ ಜಯ ಗಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದರು.

ಅಂಡರ್‌-19, ಏಕದಿನ, ಟಿ20 ವಿಶ್ವಕಪ್‌ ಗೆದ್ದ ಕೊಹ್ಲಿ!

2008ರಲ್ಲಿ ಅಂಡರ್‌-19 ವಿಶ್ವಕಪ್‌ ಗೆದ್ದ ವಿರಾಟ್‌ ಕೊಹ್ಲಿ, ಭಾರತ ಹಿರಿಯರ ತಂಡಕ್ಕೆ ಕಾಲಿಟ್ಟ ಬಳಿಕ ಮೊದಲ ವಿಶ್ವಕಪ್‌ ಗೆದ್ದಿದ್ದು 2011ರಲ್ಲಿ. ಏಕದಿನ ವಿಶ್ವಕಪ್‌ ಎತ್ತಿಹಿಡಿದ ವಿರಾಟ್‌ , 2013ರಲ್ಲಿ ಚಾಂಪಿಯನ್ಸ್‌ ಟ್ರೋಫಿಯನ್ನೂ ಗೆದ್ದರು. 2012ರಿಂದ ಟಿ20 ವಿಶ್ವಕಪ್‌ನಲ್ಲಿ ಆಡಿದ ಕೊಹ್ಲಿ, ಕೊನೆಗೂ ಟ್ರೋಫಿ ಎತ್ತಿಹಿಡಿದರು. ವಿಶ್ವ ಟೆಸ್ಟ್‌ ಚಾಂಪಿಯನ್‌ಶಿಪ್‌ವೊಂದನ್ನು ಗೆಲ್ಲಲು ಕೊಹ್ಲಿಗೆ ಇನ್ನೂ ಸಾಧ್ಯವಾಗಿಲ್ಲ.