ವಿಶ್ವಕಪ್‌ನಲ್ಲಿ 3000 ರನ್‌: ಕಿಂಗ್‌ ಕೊಹ್ಲಿ ಹೊಸ ಮೈಲಿಗಲ್ಲು!

| Published : Jun 23 2024, 02:05 AM IST / Updated: Jun 23 2024, 04:28 AM IST

ವಿಶ್ವಕಪ್‌ನಲ್ಲಿ 3000 ರನ್‌: ಕಿಂಗ್‌ ಕೊಹ್ಲಿ ಹೊಸ ಮೈಲಿಗಲ್ಲು!
Share this Article
  • FB
  • TW
  • Linkdin
  • Email

ಸಾರಾಂಶ

ವಿರಾಟ್‌ ಕೊಹ್ಲಿ ಟಿ20 ಹಾಗೂ ಏಕದಿನ ವಿಶ್ವಕಪ್‌ನಲ್ಲಿ ಒಟ್ಟಾಗಿ 3000 ರನ್‌ ಪೂರ್ಣಗೊಳಿಸಿದ್ದಾರೆ. ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ನಾರ್ತ್‌ ಸೌಂಡ್‌(ಆ್ಯಂಟಿಗಾ): ರನ್‌ ಮೆಷಿನ್‌ ಖ್ಯಾತಿಯ ವಿರಾಟ್‌ ಕೊಹ್ಲಿ ವಿಶ್ವಕಪ್‌ನಲ್ಲಿ ಮತ್ತೊಂದು ಮೈಲುಗಲ್ಲು ಸಾಧಿಸಿದ್ದಾರೆ. ಅವರು ಟಿ20 ಹಾಗೂ ಏಕದಿನ ವಿಶ್ವಕಪ್‌ನಲ್ಲಿ ಒಟ್ಟಾಗಿ 3000 ರನ್‌ ಪೂರ್ಣಗೊಳಿಸಿದ್ದು, ಈ ಸಾಧನೆ ಮಾಡಿದ ವಿಶ್ವದ ಮೊದಲ ಬ್ಯಾಟರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಈ ಬಾರಿ ಟಿ20 ವಿಶ್ವಕಪ್‌ನ ಬಹುತೇಕ ಪಂದ್ಯಗಳಲ್ಲಿ ವಿಫಲರಾಗಿದ್ದ ಕೊಹ್ಲಿ, ಶನಿವಾರ ಬಾಂಗ್ಲಾದೇಶ ವಿರುದ್ಧದ ಸೂಪರ್‌-8 ಪಂದ್ಯದಲ್ಲಿ 37 ರನ್‌ ಸಿಡಿಸಿ ಔಟಾದರು. 28 ಎಸೆತಗಳನ್ನು ಎದುರಿಸಿದ ಅವರು, 1 ಬೌಂಡರಿ, 3 ಸಿಕ್ಸರ್‌ ಸಿಡಿಸಿದರು. ಈ ಮೂಲಕ ಟಿ20 ವಿಶ್ವಕಪ್‌ನ ರನ್‌ ಗಳಿಕೆಯನ್ನು 1207ಕ್ಕೆ ಹೆಚ್ಚಿಸಿದರು. 

ಅವರು ಏಕದಿನ ವಿಶ್ವಕಪ್‌ನಲ್ಲಿ 1795 ರನ್‌ ಕಲೆಹಾಕಿದ್ದು, ಒಟ್ಟಾರೆ ವಿಶ್ವಕಪ್‌ನಲ್ಲಿ 3002 ರನ್‌ ಗಳಿಸಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ 32, ಏಕದಿನ ವಿಶ್ವಕಪ್‌ನಲ್ಲಿ 37 ಪಂದ್ಯಗಳನ್ನಾಡಿದ್ದಾರೆ.ಟಿ20 ವಿಶ್ವಕಪ್‌ನಲ್ಲಿ ಕೊಹ್ಲಿ ಗರಿಷ್ಠ ರನ್‌ ಸ್ಕೋರರ್‌ ಎನಿಸಿಕೊಂಡಿದ್ದು, ರೋಹಿತ್‌ ಶರ್ಮಾ 1062 ರನ್‌ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಸಚಿನ್‌ ತೆಂಡುಲ್ಕರ್‌ 2278 ರನ್‌ ಕಲೆಹಾಕಿ ಗರಿಷ್ಠ ರನ್‌ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಕೊಹ್ಲಿ 2ನೇ ಸ್ಥಾನದಲ್ಲಿದ್ದಾರೆ.

ವಿಶ್ವಕಪ್‌ನಲ್ಲಿ ಗರಿಷ್ಠ ಸ್ಕೋರ್‌

ಆಟಗಾರರನ್‌ಕೊಹ್ಲಿ3002ರೋಹಿತ್‌2637ವಾರ್ನರ್‌2502ಸಚಿನ್‌2278ಸಂಗಕ್ಕರ2193