ರನ್ ಮೆಷಿನ್ ಖ್ಯಾತಿಯ ಕೊಹ್ಲಿ ಐಪಿಎಲ್‌ನಲ್ಲಿ 9000 ರನ್ ಪೂರ್ಣಗೊಳಿಸಿದ್ದು, ಈ ಮೈಲುಗಲ್ಲು ಸಾಧಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಸೋಮವಾರ ತಮ್ಮ ತವರು ನವದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊಹ್ಲಿ ಔಟಾಗದೆ 23 ರನ್ ಗಳಿಸಿ, ರನ್ ಗಳಿಕೆ 9012ಕ್ಕೆ ಹೆಚ್ಚಿಸಿದರು
ನವದೆಹಲಿ: ರನ್ ಮೆಷಿನ್ ಖ್ಯಾತಿಯ ವಿರಾಟ್ ಕೊಹ್ಲಿ ಐಪಿಎಲ್‌ನಲ್ಲಿ 9000 ರನ್ ಪೂರ್ಣಗೊಳಿಸಿದ್ದು, ಈ ಮೈಲುಗಲ್ಲು ಸಾಧಿಸಿದ ಮೊದಲ ಕ್ರಿಕೆಟಿಗ ಎನಿಸಿಕೊಂಡಿದ್ದಾರೆ. ಸೋಮವಾರ ತಮ್ಮ ತವರು ನವದೆಹಲಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕೊಹ್ಲಿ ಔಟಾಗದೆ 23 ರನ್ ಗಳಿಸಿ, ಐಪಿಎಲ್‌ನ ರನ್ ಗಳಿಕೆಯನ್ನು 9012ಕ್ಕೆ ಹೆಚ್ಚಿಸಿದರು. ಅವರು 275 ಪಂದ್ಯಗಳನ್ನಾಡಿದ್ದು, 8 ಶತಕ, 66 ಅರ್ಧಶತಕ ಬಾರಿಸಿದ್ದಾರೆ. ಅವರು 40.05 ಸರಾಸರಿ ಹೊಂದಿದ್ದು, 133.80ರ ಸ್ಟ್ರೈಕ್‌ರೇಟ್‌ನಲ್ಲಿ ಈ ಮೈಲುಗಲ್ಲು ಸಾಧಿಸಿದ್ದಾರೆ. ಅವರ ಗರಿಷ್ಠ ಸ್ಕೋರ್ ಔಟಾಗದೆ 113.
ರೋಹಿತ್ ಶರ್ಮಾ 276 ಪಂದ್ಯಗಳಲ್ಲಿ 7183, ಶಿಖರ್ ಧವನ್ 222 ಪಂದ್ಯಗಳಲ್ಲಿ 6769, ಡೇವಿಡ್ ವಾರ್ನರ್ 183 ಪಂದ್ಯಗಳಲ್ಲಿ 6565 ರನ್ ಗಳಿಸಿದ್ದಾರೆ.
ಐಪಿಎಲ್‌ನಲ್ಲಿ ಗರಿಷ್ಠ ರನ್
ಆಟಗಾರ ಪಂದ್ಯ ರನ್
ವಿರಾಟ್ 275 9012
ರೋಹಿತ್ 276 7183
ಧವನ್ 222 6769
ವಾರ್ನರ್ 184 6565
ರಾಹುಲ್ 153 5580
ರೈನಾ 205 5528
ಧೋನಿ 278 5439
ರಹಾನೆ 206 5194
ವಿಲಿಯರ್ಸ್ 184 5162
ಸ್ಯಾಮ್ಸನ್ 185 5008

