ಚಿನ್ನಸ್ವಾಮಿಯಲ್ಲಿ ವಿರಾಟ್‌ 100 ಟಿ 20 ಪಂದ್ಯ: ವಿಶ್ವದಲ್ಲಿ ಈ ಸಾಧನೆಗೈದ 15ನೇ ಆಟಗಾರ

| Published : Apr 03 2024, 01:30 AM IST / Updated: Apr 03 2024, 04:12 AM IST

ಚಿನ್ನಸ್ವಾಮಿಯಲ್ಲಿ ವಿರಾಟ್‌ 100 ಟಿ 20 ಪಂದ್ಯ: ವಿಶ್ವದಲ್ಲಿ ಈ ಸಾಧನೆಗೈದ 15ನೇ ಆಟಗಾರ
Share this Article
  • FB
  • TW
  • Linkdin
  • Email

ಸಾರಾಂಶ

ಒಂದು ಕ್ರೀಡಾಂಗಣದಲ್ಲಿ ಅತಿಹೆಚ್ಚು ಟಿ20 ಪಂದ್ಯವಾಡಿದ ಮೊದಲ ಭಾರತೀಯ ಆಟಗಾರ ಎನ್ನುವ ದಾಖಲೆ ಬರೆದ ವಿರಾಟ್‌ ಕೊಹ್ಲಿ. ಒಟ್ಟಾರೆ ವಿಶ್ವದಲ್ಲಿ ಈ ಸಾಧನೆಗೈದ 15ನೇ ಆಟಗಾರ.

 ಬೆಂಗಳೂರು :  ವಿರಾಟ್‌ ಕೊಹ್ಲಿ ಮತ್ತೊಂದು ಹೊಸ ದಾಖಲೆ ಬರೆದಿದ್ದಾರೆ. ಒಂದೇ ಕ್ರೀಡಾಂಗಣದಲ್ಲಿ 100 ಟಿ20 ಪಂದ್ಯಗಳನ್ನು ಆಡಿದ ಭಾರತದ ಮೊದಲ ಕ್ರಿಕೆಟಿಗ ಎನ್ನುವ ಹಿರಿಮೆಗೆ ಪಾತ್ರರಾಗಿದ್ದಾರೆ. ಮಂಗಳವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಲಖನೌ ಸೂಪರ್‌ಜೈಂಟ್ಸ್‌ ವಿರುದ್ಧ ಕಣಕ್ಕಿಳಿಯುವ ಮೂಲಕ ವಿರಾಟ್‌ ಈ ಮೈಲಿಗಲ್ಲು ತಲುಪಿದರು.

ರೋಹಿತ್‌ ಶರ್ಮಾ ಮುಂಬೈನ ವಾಂಖೇಡೆ ಕ್ರೀಡಾಂಗಣದಲ್ಲಿ 80 ಟಿ20 ಪಂದ್ಯಗಳನ್ನು ಆಡಿದ್ದು, ಎಂ.ಎಸ್‌.ಧೋನಿ ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣದಲ್ಲಿ 69 ಟಿ20 ಪಂದ್ಯಗಳನ್ನು ಆಡಿ ಕ್ರಮವಾಗಿ 2 ಹಾಗೂ 3ನೇ ಸ್ಥಾನದಲ್ಲಿದ್ದಾರೆ. 15ನೇ ಆಟಗಾರ: ಜಾಗತಿಕ ಮಟ್ಟದಲ್ಲಿ ಕ್ರೀಡಾಂಗಣವೊಂದರಲ್ಲಿ 100 ಟಿ20 ಪಂದ್ಯಗಳನ್ನಾಡಿದ 15ನೇ ಆಟಗಾರ ವಿರಾಟ್‌ ಕೊಹ್ಲಿ. ಬಾಂಗ್ಲಾದೇಶದ 11 ಆಟಗಾರರು, ಇಂಗ್ಲೆಂಡ್‌ನ ಮೂವರು ಈ ಸಾಧನೆಗೈದಿದ್ದಾರೆ.

ಬಾಂಗ್ಲಾದ ಮಹ್ಮುದುಲ್ಲಾ, ಮುಷ್ಫಿಕುರ್‌ ರಹೀಂ, ಶಕೀಬ್‌ ಅಲ್‌-ಹಸನ್‌, ಮೊಹಮದ್‌ ಮಿಥುನ್‌, ಶೋಮ ಸರ್ಕಾರ್‌, ಅನಾಮುಲ್‌ ಹಕ್‌, ಇಮ್ರುಲ್‌ ಕಯೆಸ್‌, ನೂರುಲ್‌ ಹಸನ್‌, ಸಬ್ಬೀರ್‌ ರಹಮಾನ್‌, ತಮೀಮ್‌ ಇಕ್ಬಾಲ್‌ ಹಾಗೂ ಮಶ್ರಫೆ ಮೊರ್ತಾಜ ಮೀರ್‌ಪುರ ಕ್ರೀಡಾಂಗಣದಲ್ಲಿ 100 ಅಥವಾ ಅದಕ್ಕಿಂತ ಹೆಚ್ಚು ಟಿ20 ಪಂದ್ಯಗಳನ್ನು ಆಡಿದ್ದಾರೆ.

ಇಂಗ್ಲೆಂಡ್‌ನ ಸಮಿತ್‌ ಪಟೇಲ್‌ ಹಾಗೂ ಅಲೆಕ್ಸ್‌ ಹೇಲ್ಸ್‌ ನಾಟಿಂಗ್‌ಹ್ಯಾಮ್‌ನ ಟ್ರೆಂಟ್‌ಬ್ರಿಡ್ಜ್‌ ಕ್ರೀಡಾಂಗಣದಲ್ಲಿ 100 ಪಂದ್ಯಗಳ ಮೈಲಿಗಲ್ಲು ದಾಟಿದ್ದರೆ, ಜೇಮ್ಸ್‌ ವಿನ್ಸ್‌ ಸೌಥಾಂಪ್ಟನ್‌ನ ರೋಸ್‌ ಬೌಲ್‌ ಕ್ರೀಡಾಂಗಣದಲ್ಲಿ ಈ ಸಾಧನೆ ಮಾಡಿದ್ದಾರೆ.