ಸಾರಾಂಶ
ಟೆಸ್ಟ್ ಕ್ರಿಕೆಟ್‌ನಲ್ಲಿ 9000 ರನ್ ಪೂರೈಸಿದ ವಿರಾಟ್ ಕೊಹ್ಲಿ. ಈ ಮಹತ್ವದ ಮೈಲಿಗಲ್ಲು ತಲುಪಿದ ಭಾರತದ ಕೇವಲ 4ನೇ ಬ್ಯಾಟರ್. ಒಟ್ಟಾರೆ ವಿಶ್ವದ 18ನೇ ಆಟಗಾರ.
ಬೆಂಗಳೂರು: ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ 9000 ರನ್ ಪೂರೈಸಿದ್ದಾರೆ. ನ್ಯೂಜಿಲೆಂಡ್ ವಿರುದ್ಧದ ಮೊದಲ ಟೆಸ್ಟ್‌ನ 3ನೇ ದಿನವಾದ ಶುಕ್ರವಾರ ಕೊಹ್ಲಿ ಈ ಮೈಲಿಗಲ್ಲು ತಲುಪಿದರು.
ಟೆಸ್ಟ್‌ನಲ್ಲಿ 9000 ರನ್ ಗಳಿಸಿದ ಭಾರತದ ಕೇವಲ 4ನೇ ಬ್ಯಾಟರ್ ಎನ್ನುವ ಹಿರಿಮೆಗೆ ಕೊಹ್ಲಿ ಪಾತ್ರರಾದರು. ಇವರಿಗೂ ಮುನ್ನ ಸಚಿನ್ ತೆಂಡುಲ್ಕರ್ (15921), ರಾಹುಲ್ ದ್ರಾವಿಡ್(13265) ಹಾಗೂ ಸುನಿಲ್ ಗವಾಸ್ಕರ್(10122) ಈ ಸಾಧನೆ ಮಾಡಿದ್ದರು. ಇದೇ ವೇಳೆ 9000 ರನ್ ಪೂರೈಸಿದ ವಿಶ್ವದ 18ನೇ ಬ್ಯಾಟರ್ ಎನ್ನುವ ಖ್ಯಾತಿಯನ್ನು ಕೊಹ್ಲಿ ಗಳಿಸಿದ್ದಾರೆ.