ಟಿ20 ವಿಶ್ವಕಪ್‌: ಕೊನೆಗೂ ಅಮೆರಿಕ ವಿಮಾನವೇರಿದ ವಿರಾಟ್‌ ಕೊಹ್ಲಿ

| Published : May 31 2024, 02:18 AM IST / Updated: May 31 2024, 04:10 AM IST

ಸಾರಾಂಶ

ಕೊಹ್ಲಿ ಶುಕ್ರವಾರ ನ್ಯೂಯಾರ್ಕ್‌ನಲ್ಲಿ ಟೀಂ ಇಂಡಿಯಾ ಆಟಗಾರರನ್ನು ಕೂಡಿಕೊಳ್ಳಲಿದ್ದಾರೆ. ತಂಡದ ಆಟಗಾರರೆಲ್ಲಾ ನ್ಯೂಯಾರ್ಕ್‌ನಲ್ಲಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ.

ಮುಂಬೈ: ಟಿ20 ವಿಶ್ವಕಪ್‌ ಆಡಲು ಭಾರತದ ಸ್ಟಾರ್‌ ಕ್ರಿಕೆಟಿಗ ವಿರಾಟ್‌ ಕೊಹ್ಲಿ ಗುರುವಾರ ಮುಂಬೈನಿಂದ ಅಮೆರಿಕಕ್ಕೆ ಪ್ರಯಾಣಿಸಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಅವರು ಅಭಿಮಾನಿಗಳೊಂದಿಗೆ ಫೋಟೋ ಕ್ಲಿಕ್ಕಿಸುತ್ತಿರುವ ಹಾಗೂ ಆಟೋಗ್ರಾಫ್‌ ನೀಡುತ್ತಿರುವ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.ಕೊಹ್ಲಿ ಶುಕ್ರವಾರ ನ್ಯೂಯಾರ್ಕ್‌ನಲ್ಲಿ ಟೀಂ ಇಂಡಿಯಾ ಆಟಗಾರರನ್ನು ಕೂಡಿಕೊಳ್ಳಲಿದ್ದಾರೆ. 

ರೋಹಿತ್‌ ಶರ್ಮಾ, ಜಸ್‌ಪ್ರೀತ್‌ ಬೂಮ್ರಾ, ರಿಷಭ್‌ ಪಂತ್‌, ರವೀಂದ್ರ ಜಡೇಜಾ, ಮೊಹಮದ್‌ ಸಿರಾಜ್‌, ಅರ್ಶ್‌ದೀಪ್‌ ಸೇರಿದಂತೆ ಹಲವು ಆಟಗಾರರಿದ್ದ ಭಾರತದ ಮೊದಲ ಬ್ಯಾಚ್‌ ಐಪಿಎಲ್‌ ನಡುವೆಯೇ ಅಮೆರಿಕಕ್ಕೆ ತೆರಳಿತ್ತು. ಬಳಿಕ ಸಂಜು ಸ್ಯಾಮ್ಸನ್‌, ಚಹಲ್‌, ಯಶಸ್ವಿ ಜೈಸ್ವಾಲ್‌ ಸೇರಿದಂತೆ ಕೆಲ ಆಟಗಾರರು 2ನೇ ಬ್ಯಾಚ್‌ನಲ್ಲಿ ವಿಶ್ವಕಪ್‌ನ ವಿಮಾನವೇರಿದ್ದರು. ತಂಡದ ಆಟಗಾರರೆಲ್ಲಾ ನ್ಯೂಯಾರ್ಕ್‌ನಲ್ಲಿ ಈಗಾಗಲೇ ಅಭ್ಯಾಸ ಆರಂಭಿಸಿದ್ದಾರೆ.

ನ್ಯೂಯಾರ್ಕ್‌ನಲ್ಲೇ ಮೂರು ಪಂದ್ಯವಾಡಲಿರುವ ಭಾರತ

ಭಾರತ ನ್ಯೂಯಾರ್ಕ್‌ನಲ್ಲಿ ಗುಂಪು ಹಂತದ 3 ಪಂದ್ಯಗಳನ್ನಾಡಲಿದೆ. ಜೂ.5ರಂದು ಐರ್ಲೆಂಡ್‌ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿರುವ ಭಾರತ, ಜೂ.9ರಂದು ಪಾಕ್‌ ಹಾಗೂ ಜೂ.12ರಂದು ಅಮೆರಿಕ ತಂಡದ ವಿರುದ್ಧ ಸೆಣಸಾಡಲಿದೆ. ಬಳಿಕ ಜೂ.15ರಂದು ಫ್ಲೋರಿಡಾ ಕ್ರೀಡಾಂಗಣದಲ್ಲಿ ಕೆನಡಾ ವಿರುದ್ಧ ಆಡಲಿದೆ. ಜೂ.1ರಂದು ಬಾಂಗ್ಲಾದೇಶ ವಿರುದ್ಧ ಅಭ್ಯಾಸ ಪಂದ್ಯವೂ ಇದೇ ಕ್ರೀಡಾಂಗಣದಲ್ಲಿ ನಿಗದಿಯಾಗಿದೆ.