ವಿರಾಟ್‌ ಕೊಹ್ಲಿ ನನ್ನ ಮೇಲೆ ಉಗುಳಿದ್ದರು ಎಂದ ಡೀನ್‌ ಎಲ್ಗರ್‌ !

| Published : Jan 30 2024, 01:08 PM IST

Virat-Kohli-will-not-play-to-test-against-England-due-to-personal-reason
ವಿರಾಟ್‌ ಕೊಹ್ಲಿ ನನ್ನ ಮೇಲೆ ಉಗುಳಿದ್ದರು ಎಂದ ಡೀನ್‌ ಎಲ್ಗರ್‌ !
Share this Article
  • FB
  • TW
  • Linkdin
  • Email

ಸಾರಾಂಶ

ಭಾರತದ ತಂಡ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಟೆಸ್ಟ್ ಪಂದ್ಯವೊಂದರ ವೇಳೆ ತಮ್ಮ ಮೇಲೆ ಉಗುಳಿದ್ದರು ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡೀನ್ ಎಲ್ಗರ್ ಆರೋಪಿಸಿದ್ದಾರೆ.

ಕೇಪ್ ಟೌನ್: ಭಾರತದ ತಂಡ ದಿಗ್ಗಜ ಬ್ಯಾಟರ್ ವಿರಾಟ್ ಕೊಹ್ಲಿ ಟೆಸ್ಟ್ ಪಂದ್ಯವೊಂದರ ವೇಳೆ ತಮ್ಮ ಮೇಲೆ ಉಗುಳಿದ್ದರು ಎಂದು ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಡೀನ್ ಎಲ್ಗರ್ ಆರೋಪಿಸಿದ್ದಾರೆ. 

ಈ ಘಟನೆ ಯಾವಾಗ ನಡೆಯಿತು ಎನ್ನುವುದನ್ನು ಎಲ್ಗರ್ ಬಹಿರಂಗಪಡಿಸದೆ ಇದ್ದರೂ, 2015ರ ಭಾರತ ಪ್ರವಾಸದ ವೇಳೆ ನಡೆದಿರಬಹುದು ಎಂದು ಮೂಲಗಳು ತಿಳಿಸಿರುವುದಾಗಿ ಮಾಧ್ಯಮಗಳಲ್ಲಿ ವರದಿಯಾಗಿದೆ.

ಪಾಡ್‌ಕಾಸ್ಟ್‌ವೊಂದರಲ್ಲಿ ದ.ಆಫ್ರಿಕಾದ ಮಾಜಿ ಆಲ್ರೌಂಡರ್ ಕ್ರಿಸ್ ಮೋರಿಸ್ ಹಾಗೂ ರಗ್ಬಿ ಆಟಗಾರ ಜೀನ್ ಡಿ ವಿಲಿಯರ್ಸ್ ಜೊತೆ ಮಾತನಾಡುತ್ತಾ, ಎಲ್ಗರ್ ಈ ಆಘಾತಕಾರಿ ವಿಷಯವನ್ನು ಬಹಿರಂಗಪಡಿಸಿದ್ದಾರೆ. 

ಘಟನೆ ನಡೆದ 2 ವರ್ಷಗಳ ಬಳಿಕ ವಿರಾಟ್ ತಮ್ಮಲ್ಲಿ ಕ್ಷಮೆಯಾಚಿಸಿದ್ದರು. ಇದಕ್ಕೆ ಎಬಿ ಡಿ ವಿಲಿಯರ್ಸ್ ಕಾರಣ ಎಂದು ಎಲ್ಗರ್ ಹೇಳಿದ್ದಾರೆ.

‘ಕೊಹ್ಲಿ ನನ್ನ ಮೇಲೆ ಉಗುಳಿದ ವಿಷಯ ಎಬಿಡಿಗೆ ತಿಳಿದಾಗ ಅವರು ಐಪಿಎಲ್ ವೇಳೆ, ಕೊಹ್ಲಿಯನ್ನು ಪ್ರಶ್ನಿಸಿದ್ದಾರೆ. 

ಬಳಿಕ ದ. ಆಫ್ರಿಕಾಕ್ಕೆ ಬಂದಿದ್ದ ವೇಳೆ ಕೊಹ್ಲಿ ನನ್ನ ಕ್ಷಮೆ ಕೋರಿದರು. ಆ ದಿನ ಇಬ್ಬರೂ ಬೆಳಗ್ಗಿನ ಜಾವ 3ರ ವರೆಗೂ ಕುಡಿದಿದ್ದೆವು’ ಎಂದು ಎಲ್ಗರ್ ಹೇಳಿದ್ದಾರೆ.

ಎಲ್ಗರ್ ಇತ್ತೀಚೆಗಷ್ಟೇ ಟೆಸ್ಟ್ ಕ್ರಿಕೆಟ್ ನಿಂದ ನಿವೃತ್ತಿ ಪಡೆದಿದ್ದರು. ಭಾರತ ವಿರುದ್ಧವೇ ತಮ್ಮ ಕೊನೆಯ ಪಂದ್ಯವನ್ನಾಡಿದ್ದ ಎಲ್ಗರ್‌ರ ಕ್ಯಾಚ್ ಪಡೆದಾಗ ಕೊಹ್ಲಿ ಸಂಭ್ರಮಿಸಿರಲಿಲ್ಲ. 

ಪಂದ್ಯ ಮುಗಿದ ಬಳಿಕ ವಿರಾಟ್, ತಮ್ಮ ಜೆರ್ಸಿವೊಂದನ್ನು ಎಲ್ಗರ್‌ಗೆ ಉಡುಗೊರೆಯಾಗಿ ನೀಡಿದ್ದರು.