ಸಾರಾಂಶ
ಸಹೋದರನ ಮದುವೆ ಕಾರಣಕ್ಕೆ ಆಡುವುದನ್ನು ತಪ್ಪಿಸಿಕೊಳ್ಳುವುದನ್ನು ಇಷ್ಟಪಡದ ಆಸ್ಟ್ರೇಲಿಯಾ ತಂಡದ ತಾರಾ ಬ್ಯಾಟರ್ ಡೇವಿಡ್ ವಾರ್ನರ್ ಅವರು ಬಿಗ್‌ಬ್ಯಾಶ್ ಲೀಗ್‌ನ ಪಂದ್ಯದಲ್ಲಿ ಭಾಗಿಯಾಗುವ ಸಲುವಾಗಿ ಹೆಲಿಕಾಪ್ಟರ್ ಮೂಲಕ ಮೈದಾನಕ್ಕೆ ಆಗಮಿಸಿ, ತಮ್ಮ ಕ್ರಿಕೆಟ್ ಪ್ರೇಮ ವ್ಯಕ್ತಪಡಿಸಿದ್ದಾರೆ.
ಸಿಡ್ನಿ: ಸಹೋದರನ ವಿವಾಹದ ನಡುವೆಯೂ ಬಿಗ್ ಬ್ಯಾಶ್ ಪಂದ್ಯವಾಡಲು ಆಸ್ಟ್ರೇಲಿಯಾ ತಾರೆ ಡೇವಿಡ್ ವಾರ್ನರ್ ಶುಕ್ರವಾರ ಹೆಲಿಕಾಪ್ಟರ್‌ನಲ್ಲೇ ಮೈದಾನಕ್ಕೆ ಬಂದಿಳಿದರು. ಸಿಡ್ನಿ ಥಂಡರ್ಸ್ ತಂಡದಲ್ಲಿರುವ ವಾರ್ನರ್‌ಗೆ ಶುಕ್ರವಾರ ಸಿಡ್ನಿ ಸಿಕ್ಸರ್ಸ್ ವಿರುದ್ಧ ಪಂದ್ಯ ನಿಗದಿಯಾಗಿತ್ತು. ಆದರೆ ಶುಕ್ರವಾರವೇ ಅವರ ಸಹೋದರನ ಮದುವೆ ಕಾರ್ಯಕ್ರಮ ಇದ್ದ ಕಾರಣ ಸಮಯ ಹೊಂದಿಸಿಕೊಳ್ಳಲು ಹೆಲಿಕಾಪ್ಟರ್‌ನಲ್ಲೇ ಸಿಡ್ನಿ ಮೈದಾನಕ್ಕೆ ಆಗಮಿಸಿದರು. ಇದರ ಫೋಟೋ, ವಿಡಿಯೋಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.ಏಷ್ಯನ್ ಶೂಟಿಂಗ್: ಚಿನ್ನ, ಬೆಳ್ಳಿ ಗೆದ್ದ ಭಾರತೀಯರು
ಜಕಾರ್ತ: ಇಲ್ಲಿ ನಡೆಯುತ್ತಿರುವ ಏಷ್ಯನ್ ಒಲಿಂಪಿಕ್ ಅರ್ಹತಾ ಟೂರ್ನಿಯಲ್ಲಿ ಭಾರತೀಯರ ಪಾರಮ್ಯ ಮುಂದುವರಿದಿದೆ. ಶುಕ್ರವಾರ ಪುರುಷರ 50 ಮೀ. 3 ಪೊಸಿಷನ್ ವಿಭಾಗದಲ್ಲಿ ಭಾರತದ ಅಖಿಲ್ ಶೆರಾನ್ ಚಿನ್ನ ಹಾಗೂ ಐಶ್ವರಿ ಪ್ರತಾಪ್ ಸಿಂಗ್ ತೋಮರ್ ಬೆಳ್ಳಿ ಪದಕ ಗೆದ್ದಿದ್ದಾರೆ. ಸದ್ಯ ಭಾರತಕ್ಕೆ 10 ಚಿನ್ನ, 8 ಬೆಳ್ಳಿ, 6 ಕಂಚು ಸೇರಿ ಒಟ್ಟು 24 ಪದಕಗಳು ಲಭಿಸಿದೆ. 25 ಮಿ. ರ್‍ಯಾಪಿಡ್ ಫೈರ್ ವಿಭಾಗದಲ್ಲಿ ಒಲಿಂಪಿಕ್ ಸ್ಥಾನಕ್ಕಾಗಿ ಇಬ್ಬರು ಭಾರತೀಯರಾದ ಆದರ್ಶ್ ಸಿಂಗ್ ಹಾಗೂ ವಿಜಯ್ ವೀರ್ ಸಿಧು ಪೈಪೋಟಿಯಲ್ಲಿದ್ದಾರೆ. ಇಬ್ಬರಲ್ಲಿ ಒಬ್ಬರಿಗೆ ಒಲಿಂಪಿಕ್ಸ್ ಟಿಕೆಟ್ ಸಿಗುವ ನಿರೀಕ್ಷೆಯಿದೆ.