2036ರ ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಲು ಭಾರತ ಸಿದ್ಧ: ಕೇಂದ್ರ ಕ್ರೀಡಾ ಸಚಿವ ಅನುರಾಗ್‌

| Published : May 12 2024, 01:17 AM IST / Updated: May 12 2024, 04:26 AM IST

2036ರ ಒಲಿಂಪಿಕ್ಸ್‌ಗೆ ಬಿಡ್‌ ಸಲ್ಲಿಸಲು ಭಾರತ ಸಿದ್ಧ: ಕೇಂದ್ರ ಕ್ರೀಡಾ ಸಚಿವ ಅನುರಾಗ್‌
Share this Article
  • FB
  • TW
  • Linkdin
  • Email

ಸಾರಾಂಶ

2028ರಲ್ಲಿ ಲಾಸ್‌ ಏಂಜಲೀಸ್‌, 2032ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್‌ ಆತಿಥ್ಯ ವಹಿಸಲಿದೆ. 2036ರ ಒಲಿಂಪಿಕ್ಸ್‌ಗೆ 2026 ಅಥವಾ 2027ರಲ್ಲಿ ಆತಿಥ್ಯ ರಾಷ್ಟ್ರ ಆಯ್ಕೆಯಾಗಲಿದೆ.

ಹಮೀರ್‌ಪುರ(ಹಿಮಾಚಲ ಪ್ರದೇಶ): 2036ರ ಒಲಿಂಪಿಕ್ಸ್‌ ಆತಿಥ್ಯಕ್ಕೆ ಬಿಡ್‌ ಸಲ್ಲಿಸಲು ಭಾರತ ಸಿದ್ಧವಿದೆ ಎಂದು ಕೇಂದ್ರ ಕ್ರೀಡಾ ಸಚಿವ ಅನುರಾಗ್‌ ಠಾಕೂರ್‌ ತಿಳಿಸಿದ್ದಾರೆ. ಈ ಬಗ್ಗೆ ಸಂದರ್ಶನದಲ್ಲಿ ಮಾತನಾಡಿರುವ ಅವರು, ‘ಒಲಿಂಪಿಕ್ಸ್‌ ಬಿಡ್‌ ಸಲ್ಲಿಸಲು ನಾವು ಸಿದ್ಧರಾಗಿದ್ದೇವೆ. ಆತಿಥ್ಯ ಹಕ್ಕು ನಮಗೆ ಸಿಗುವ ವಿಶ್ವಾಸವಿದೆ. ಕಳೆದ ವರ್ಷ ನಮ್ಮ ಬಂಡವಾಳ ವೆಚ್ಚ ₹10 ಲಕ್ಷ ಕೋಟಿ ಇತ್ತು. ಒಂದು ವರ್ಷದ ಹಿಂದೆ ₹7.5 ಲಕ್ಷ ಕೋಟಿ ಇದ್ದರೆ, ಈ ವರ್ಷ ₹11,11,111 ಕೋಟಿ ಆಗಿದೆ. 

ಕ್ರೀಡಾ ಮೂಲಸೌಕರ್ಯಕ್ಕೆ 5,000 ಕೋಟಿ ಬೇಕಾಗಬಹುದು. ಅದು 20000 ಕೋಟಿಗೆ ಹೆಚ್ಚಳವಾದರೂ ನಿಭಾಯಿಸಬಹುದು’ ಎಂದು ಹೇಳಿದ್ದಾರೆ. ಈ ಬಾರಿ ಒಲಿಂಪಿಕ್ಸ್‌ ಪ್ಯಾರಿಸ್‌ನಲ್ಲಿ ನಡೆಯಲಿದ್ದು, 2028ರಲ್ಲಿ ಲಾಸ್‌ ಏಂಜಲೀಸ್‌, 2032ರಲ್ಲಿ ಆಸ್ಟ್ರೇಲಿಯಾದ ಬ್ರಿಸ್ಬೇನ್‌ ಆತಿಥ್ಯ ವಹಿಸಲಿದೆ. 2036ರ ಒಲಿಂಪಿಕ್ಸ್‌ಗೆ 2026 ಅಥವಾ 2027ರಲ್ಲಿ ಆತಿಥ್ಯ ರಾಷ್ಟ್ರ ಆಯ್ಕೆಯಾಗಲಿದೆ.

ಡೈಮಂಡ್‌ ಲೀಗ್‌ನಲ್ಲಿ ನೀರಜ್‌ಗೆ 2ನೇ ಸ್ಥಾನ

ದೋಹಾ(ಕತಾರ್‌): ದೋಹಾ ಡೈಮಂಡ್‌ ಲೀಗ್‌ನಲ್ಲಿ ಭಾರತದ ತಾರಾ ಜಾವೆಲಿನ್‌ ಎಸೆತಗಾರ ನೀರಜ್‌ ಚೋಪ್ರಾ 2ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಶುಕ್ರವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ ನೀರಜ್‌ ತಮ್ಮ ಕೊನೆ ಪ್ರಯತ್ನದಲ್ಲಿ 88.36ಮೀ. ದೂರಕ್ಕೆ ಜಾವಲಿನ್‌ ಎಸೆದರು. 

ಅವರು ಕೇವಲ 0.02 ಮೀ. ಅಂತರದಲ್ಲಿ ಅಗ್ರಸ್ಥಾನ ಕಳೆದುಕೊಂಡರು. ಚೆಕ್ ಗಣರಾಜ್ಯದ ವೆಡ್‌ಲೆಜ್‌ ಜಾಕುಬ್‌ 88.38 ಮೀ. ದೂರ ದಾಖಲಿಸಿ ಮೊದಲ ಸ್ಥಾನ ಪಡೆದರೆ, ಗ್ರೆನೆಡಾದ ಆ್ಯಂಡರ್ಸನ್‌ ಪೀಟರ್ಸ್‌(85.75ಮೀ.) 3ನೇ ಸ್ಥಾನಿಯಾದರು. 76.31 ಮೀ. ದೂರ ದಾಖಲಿಸಿದ ಭಾರತದ ಕಿಶೋರ್‌ ಜೆನಾ 9ನೇ ಸ್ಥಾನಿಯಾಗಿ ಅಭಿಯಾನ ಕೊನೆಗೊಳಿಸಿದರು.