ಸಮಾರಂಭದಲ್ಲಿ ಪಾಲ್ಗೊಂಡ ಅಭಿಮಾನಿಗಳು ತಮ್ಮ ನೆಚ್ಚಿನ ಆರ್‌ಸಿಬಿ ಕ್ರಿಕೆಟಿಗರನ್ನು ಭೇಟಿಯಾಗಿ, ಅವರ ಜೊತೆ ಫೋಟೋ ಕೂಡಾ ಕ್ಲಿಕ್ಕಿಸಿಕೊಂಡರು.

ಬೆಂಗಳೂರು: ಐಪಿಎಲ್‌ ಫ್ರಾಂಚೈಸಿ ಆರ್‌ಸಿಬಿಯ ಸಹ ಪಾಲುದಾರ ಸಂಸ್ಥೆಯಾಗಿರುವ ನಿಪ್ಪಾನ್‌ ಪೈಂಟ್ಸ್‌ ತನ್ನ ಹೊಸ ಉತ್ಪನ್ನ ವೆದರ್‌ಬಾಂಡ್‌ 8 ಅನ್ನು ಗುರುವಾರ ಬೆಂಗಳೂರಿನಲ್ಲಿರುವ ಆರ್‌ಸಿಬಿ ಬಾರ್‌ & ಕೆಫೆಯಲ್ಲಿ ಅನಾವರಣಗೊಳಿಸಿತು.

ಸಮಾರಂಭದಲ್ಲಿ ಆರ್‌ಸಿಬಿ ತಾರಾ ಆಟಗಾರರು ಪಾಲ್ಗೊಂಡರು. ತಾರಾ ಆಲ್ರೌಂಡರ್‌ ಕ್ಯಾಮರೂನ್‌ ಗ್ರೀನ್‌, ಯುವ ಬ್ಯಾಟರ್‌ಗಳಾದ ರಜತ್‌ ಪಾಟೀದಾರ್‌ ಹಾಗೂ ಮಹಿಪಾಲ್‌ ಲೊಮ್ರೊರ್‌, ವೇಗದ ಬೌಲರ್‌ ಲಾಕಿ ಫರ್ಗ್ಯೂಸನ್‌ ನಿಪ್ಪಾನ್‌ ಪೈಂಟ್ಸ್‌ನ ಹೊಸ ಉತ್ಪನ್ನವನ್ನು ಅನಾವರಣಗೊಳಿಸಿದರು. ವೆದರ್‌ಬಾಂಡ್‌ ಹೆಸರಿದ್ದ ಜೆರ್ಸಿಯನ್ನೂ ಈ ವೇಳೆ ಪ್ರದರ್ಶಿಸಲಾಯಿತು.

ಸಮಾರಂಭದಲ್ಲಿ ಪಾಲ್ಗೊಂಡ ಅಭಿಮಾನಿಗಳು ತಮ್ಮ ನೆಚ್ಚಿನ ಆರ್‌ಸಿಬಿ ಕ್ರಿಕೆಟಿಗರನ್ನು ಭೇಟಿ ಮಾಡಲು ಮತ್ತು ವೆದರ್‌ಬಾಂಡ್‌ 8 ಅನಾವರಣವನ್ನು ವೀಕ್ಷಿಸಲು ಅವಕಾಶವನ್ನು ಪಡೆದರು. ಅಭಿಮಾನಿಗಳು ಆಟಗಾರರ ಜೊತೆ ಫೋಟೋ ಕೂಡಾ ಕ್ಲಿಕ್ಕಿಸಿಕೊಂಡರು.

 ನಿಪ್ಪಾನ್ ಪೇಂಟ್ ಇಂಡಿಯಾ ಮಾರ್ಕೆಟಿಂಗ್‍ನ ವಿಪಿ ಮಾರ್ಕ್ ಟೈಟಸ್ ಅವರು ಕೂಡಾ ಸಮಾರಂಭದಲ್ಲಿ ಉಪಸ್ಥಿತರಿದ್ದರು. ವೆದರ್‌ಬಾಂಡ್‌ 8 ಉತ್ತಮ ಕಾರ್ಯ ಕ್ಷಮತೆಯ ಬಣ್ಣವಾಗಿದ್ದು, ಕಠಿಣ ಹವಾಮಾನ ಪರಿಸ್ಥಿತಿಗಳನ್ನು ತಡೆದುಕೊಳ್ಳಲು ವಿಶೇಷವಾಗಿ ತಯಾರಿಸಲಾಗಿದೆ. ಇದನ್ನು ವಿಶೇಷ ತಂತ್ರಜ್ಞಾನದೊಂದಿಗೆ ರೂಪಿಸಲಾಗಿದೆ. ಇದು ಇತರ ಬಣ್ಣಗಳಿಗಿಂತ ಎರಡು ಪಟ್ಟು ಕಠಿಣ ಮತ್ತು ಬಾಳಿಕೆ ಬರುವಂತೆ ಮಾಡುತ್ತದೆ. ಇದು ಮಳೆ, ಸೂರ್ಯನ ಕಿರಣ ಮತ್ತು ನಿಮ್ಮ ಮನೆಯ ಹೊರಭಾಗವನ್ನು ಹಾನಿಗೊಳಿಸಬಹುದಾದ ಇತರ ಅಂಶಗಳಿಂದ ರಕ್ಷಿಸುತ್ತದೆ ಎಂದು ನಿಪ್ಪಾನ್‌ ಪೈಂಟ್ಸ್‌ ಸಂಸ್ಥೆ ತಿಳಿಸಿದೆ.