ಸಾರಾಂಶ
ಆಸ್ಟ್ರೇಲಿಯಾದಲ್ಲಿ ಸೋತಿದ್ದು ಅಷ್ಟೊಂದು ಬೇಜಾರಾಗಲಿಲ್ಲ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3ರಲ್ಲಿ ಸೋತಿದ್ದು ತುಂಬಾ ನೋವು ನೀಡಿತು. ನಮ್ಮವರ ಆಟ ಬಹಳ ಕಳಪೆಯಾಗಿತ್ತು ಎಂದು ಯುವರಾಜ್ ಸಿಂಗ್ ಬೇಸರ.
ದುಬೈ: ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ 1-3ರ ಅಂತರದಲ್ಲಿ ಸೋತಿದ್ದಕ್ಕಿಂತ, ಕಳೆದ ವರ್ಷ ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ 0-3ರಲ್ಲಿ ವೈಟ್‌ವಾಶ್ ಮುಖಭಂಗ ಅನುಭವಿಸಿದ್ದು, ಹೆಚ್ಚು ನೋವು ನೀಡಿತು ಎಂದು ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಹೇಳಿದ್ದಾರೆ.
ಸುದ್ದಿ ಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿರುವ ಯುವರಾಜ್, ‘ತವರಿನಲ್ಲಿ ನಮ್ಮವರು 0-3ರಲ್ಲಿ ಸೋತಿದ್ದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಆ ಫಲಿತಾಂಶ ಬಹಳ ನೋವು ನೀಡಿತು. ಆಸ್ಟ್ರೇಲಿಯಾದಲ್ಲಿ ಈ ಹಿಂದಿನ 2 ಸರಣಿಯಲ್ಲಿ ನಾವು ಗೆದ್ದಿದ್ದೆವು. ಹಾಗಾಗಿ ಈ ಸಲದ ಸೋಲನ್ನು ತಕ್ಕಮಟ್ಟಿಗೆ ಒಪ್ಪಬಹುದು. ಆದರೆ, ನ್ಯೂಜಿಲೆಂಡ್ ವಿರುದ್ಧ ನಮ್ಮ ತಂಡ ಸಂಪೂರ್ಣ ವೈಫಲ್ಯ ಅನುಭವಿಸಿತು’ ಎಂದಿದ್ದಾರೆ.