13ನೇ ಆವೃತ್ತಿಯ ವಿಪ್ರೋ ಬೆಂಗಳೂರು ಮ್ಯಾರಥಾನ್ ಸೆ .27ರಂದು ನಡೆಯಲಿದೆ. ದೇಶ-ವಿದೇಶಗಳಿಂದ 45,000ಕ್ಕೂ ಹೆಚ್ಚು ಓಟಗಾರರು, ಸ್ಪಿರಿಟ್ ಆಫ್ ವಿಪ್ರೋ ರನ್ ಸದಸ್ಯರು ಸೇರಿ ಹಲವಾರು ಈ ರೇಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಬೆಂಗಳೂರು: 13ನೇ ಆವೃತ್ತಿಯ ವಿಪ್ರೋ ಬೆಂಗಳೂರು ಮ್ಯಾರಥಾನ್ ಸೆ .27ರಂದು ನಡೆಯಲಿದೆ. ದೇಶ-ವಿದೇಶಗಳಿಂದ 45,000ಕ್ಕೂ ಹೆಚ್ಚು ಓಟಗಾರರು, ಸ್ಪಿರಿಟ್ ಆಫ್ ವಿಪ್ರೋ ರನ್ ಸದಸ್ಯರು ಸೇರಿ ಹಲವಾರು ಈ ರೇಸ್ ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಎನ್‌ಇಬಿ ಸ್ಪೋರ್ಟ್ಸ್ ಸಂಸ್ಥೆಯು ಕರ್ನಾಟಕ ಅಥ್ಲೆಟಿಕ್ಸ್ ಅಸೋಸಿಯೇಷನ್, ವಿಪ್ರೋ ಬೆಂಗಳೂರು ಹಾಗೂ ಶ್ರೀರಾಂ ಪ್ರಾಪರ್ಟೀಸ್ ಸಹಯೋಗದಲ್ಲಿ ಮ್ಯಾರಥಾನ್ ಆಯೋಜಿಸಿದೆ. ಕಂಠೀರವ ಕ್ರೀಡಾಂಗಣದಿಂದ ಮ್ಯಾರಥಾನ್ ಆರಂಭಗೊಳ್ಳಲಿದ್ದು, ಬೆಂಗಳೂರಿನ ಪ್ರಮುಖ ರಸ್ತೆಗಳ ಮೂಲಕ ಓಟ ಸಾಗಲಿದೆ. ವಿಧಾನಸೌಧ, ಕಬ್ಬನ್ ಪಾರ್ಕ್, ಎಂ.ಜಿ. ರಸ್ತೆ ಸೇರಿದಂತೆ ನಗರದ ಪ್ರಮುಖ ಸ್ಥಳಗಳು ಓಟದ ಮಾರ್ಗದ ಭಾಗವಾಗಲಿವೆ.ಈ ಬಾರಿಯ ಮ್ಯಾರಥಾನ್‌ನ ಪ್ರಮುಖ ಆಕರ್ಷಣೆಯೆಂದರೆ, ಬದುಕಿನ ಅತ್ಯಂತ ಕ್ಲಿಷ್ಟಕರ ಸವಾಲುಗಳನ್ನು ಓಟದ ಮೂಲಕ ಎದುರಿಸಿ ಗೆದ್ದ 10 ಮಂದಿ ವಿಶೇಷ ಓಟಗಾರರು. ಇವರನ್ನು ವಿಪ್ರೋ ಬೆಂಗಳೂರು ಮ್ಯಾರಥಾನ್-2026ರ ಬ್ರ್ಯಾಂಡ್ ರಾಯಭಾರಿಗಳಾಗಿ ಗುರುತಿಸಲಾಗಿದೆ. ಇವರ ವೈಯಕ್ತಿಕ ಯಶೋಗಾಥೆಗಳು ಇತರ ಓಟಗಾರರು ಹಾಗೂ ಸಾರ್ವಜನಿಕರಿಗೆ ಸ್ಫೂರ್ತಿಯಾಗಲಿವೆ.
ಎಂದಿನಂತೆ ಈ ಬಾರಿಯೂ ಫುಲ್ ಮ್ಯಾರಥಾನ್, ಹಾಫ್ ಮ್ಯಾರಥಾನ್, 10ಕೆ ಮತ್ತು 5ಕೆ ಓಟಗಳು ನಡೆಯಲಿವೆ. ಇದರೊಂದಿಗೆ ಸ್ಪಿರಿಟ್ ಆಫ್ ವಿಪ್ರೋ ರನ್ ಕೂಡ ಆಯೋಜಿಸಲಾಗಿದೆ. 21ನೇ ವರ್ಷಕ್ಕೆ ಕಾಲಿಟ್ಟಿರುವ ಸ್ಪಿರಿಟ್ ಆಫ್ ವಿಪ್ರೋ ರನ್ ಜಗತ್ತಿನ 70ಕ್ಕೂ ಹೆಚ್ಚು ನಗರಗಳಲ್ಲಿ ನಡೆಯುತ್ತಿದ್ದು, ವಿಪ್ರೋ ಉದ್ಯೋಗಿಗಳು, ಅವರ ಕುಟುಂಬ ಸದಸ್ಯರು, ಗ್ರಾಹಕರು ಮತ್ತು ಪಾಲುದಾರರು ಇದರಲ್ಲಿ ಭಾಗವಹಿಸುತ್ತಾರೆ.