ಸಾರಾಂಶ
ದಾಂಬುಲಾ: 9ನೇ ಆವೃತ್ತಿ ಮಹಿಳಾ ಏಷ್ಯಾಕಪ್ ಟೂರ್ನಿಯ ಸೆಮಿಫೈನಲ್‌ನಲ್ಲಿ ಶುಕ್ರವಾರ ಭಾರತ ತಂಡಕ್ಕೆ ಬಾಂಗ್ಲಾದೇಶ ಸವಾಲು ಎದುರಾಗಲಿದೆ.ಭಾರತ ‘ಎ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿದ್ದರೆ, ಬಾಂಗ್ಲಾ ‘ಬಿ’ ಗುಂಪಿನಲ್ಲಿ 2ನೇ ಸ್ಥಾನ ಪಡೆದಿತ್ತು.
7 ಬಾರಿ ಚಾಂಪಿಯನ್ ಟೀಂ ಇಂಡಿಯಾ ಈ ಹಿಂದಿನ ಎಲ್ಲಾ 8 ಆವೃತ್ತಿಗಳಲ್ಲೂ ಫೈನಲ್ ಪ್ರವೇಶಿಸಿದ್ದು, ಸತತ 9ನೇ ಬಾರಿಯೂ ಪ್ರಶಸ್ತಿ ಸುತ್ತಿಗೇರುವ ನಿರೀಕ್ಷೆಯಲ್ಲಿದೆ. ತಂಡ 2018ರಲ್ಲಿ ಮಾತ್ರ ರನ್ನರ್-ಅಪ್ ಆಗಿದ್ದು, ಆ ವರ್ಷ ಬಾಂಗ್ಲಾದೇಶ ಟ್ರೋಫಿ ಗೆದ್ದಿತ್ತು.
ಈ ಬಾರಿ ಭಾರತ ಟೂರ್ನಿಯಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿದ್ದು, ಫೈನಲ್‌ಗೇರುವ ಫೇವರಿಟ್ ಎನಿಸಿಕೊಂಡಿದೆ. ಅತ್ತ ಬಾಂಗ್ಲಾ 2018ರ ಬಳಿಕ ಮತ್ತೊಮ್ಮೆ ಫೈನಲ್‌ಗೇರಲು ಕಾಯುತ್ತಿದೆ.ಶುಕ್ರವಾರದ ಮತ್ತೊಂದು ಸೆಮಿಫೈನಲ್‌ನಲ್ಲಿ ಶ್ರೀಲಂಕಾ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಲಿವೆ. ಪಾಕ್ ತಂಡ ‘ಎ’ ಗುಂಪಿನಲ್ಲಿ 2ನೇ ಸ್ಥಾನ ಪಡೆದರೆ, ಕಳೆದ ಬಾರಿ ರನ್ನರ್-ಅಪ್ ಶ್ರೀಲಂಕಾ ‘ಬಿ’ ಗುಂಪಿನಲ್ಲಿ ಅಗ್ರಸ್ಥಾನ ಪಡೆದಿತ್ತು.
ಭಾರತ-ಬಾಂಗ್ಲಾ ಪಂದ್ಯ: ಮಧ್ಯಾಹ್ನ 2 ಗಂಟೆಗೆ
ಶ್ರೀಲಂಕಾ-ಪಾಕ್ ಪಂದ್ಯ, ಸಂಜೆ 7 ಗಂಟೆಗೆನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್, ಹಾಟ್‌ಸ್ಟಾರ್