ಕುತೂಹಲ ಘಟ್ಟಕ್ಕೆ ಮಹಿಳಾ ಟೆಸ್ಟ್‌!

| Published : Dec 24 2023, 01:45 AM IST

ಸಾರಾಂಶ

ಇಂದು ಪಂದ್ಯದ ಕೊನೆದಿನ. ಭಾರತ ಅಸಾಧಾರಣ ಪ್ರದರ್ಶನ ತೋರಿ, ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್‌ ಇತಿಹಾಸದ ಚೊಚ್ಚ ಲ ಗೆಲುವು ದಾಖಲಿಸಲು ಎದುರು ನೋಡುತ್ತಿದೆ.

ಮುಂಬೈ: ಭಾರತ ಹಾಗೂ ಆಸ್ಟ್ರೇಲಿಯಾ ಮಹಿಳೆಯರ ನಡುವಿನ ಏಕೈಕ ಟೆಸ್ಟ್‌ ಪಂದ್ಯ ಕುತೂಹಲ ಘಟ್ಟ ತಲುಪಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ ದೊಡ್ಡ ಮುನ್ನಡೆ ಸಾಧಿಸಿದ ಹೊರತಾಗಿಯೂ, ಆಸ್ಟ್ರೇಲಿಯಾ 2ನೇ ಇನ್ನಿಂಗ್ಸ್‌ನಲ್ಲಿ ತಿರುಗೇಟು ನೀಡಿದೆ. 3ನೇ ದಿನದಂತ್ಯಕ್ಕೆ ಆಸೀಸ್‌ 5 ವಿಕೆಟ್‌ಗೆ 233 ರನ್‌ ಗಳಿಸಿದ್ದು, 46 ರನ್‌ ಮುನ್ನಡೆ ಪಡೆದಿದೆ. ಭಾನುವಾರ ಕೊನೆ ದಿನವಾಗಿದ್ದು, ಭಾರತಕ್ಕೆ ದೊಡ್ಡ ಗುರಿ ನೀಡಲು ಕಾಯುತ್ತಿದೆ.2ನೇ ದಿನದಂತ್ಯಕ್ಕೆ 7 ವಿಕೆಟ್‌ಗೆ 376 ರನ್‌ ಗಳಿಸಿದ್ದ ಭಾರತ, ಶನಿವಾರ 404 ರನ್‌ಗೆ ಆಲೌಟಾಯಿತು. 8ನೇ ವಿಕೆಟ್‌ಗೆ ದೀಪ್ತಿ ಶರ್ಮಾ ಹಾಗೂ ಪೂಜಾ ವಸ್ತ್ರಾಕರ್‌ 122 ರನ್‌ ಜೊತೆಯಾಟವಾಡಿದರು. ದೀಪ್ತಿ ಶರ್ಮಾ 78ಕ್ಕೆ ನಿರ್ಗಮಿಸಿದರೆ, ಪೂಜಾ ವಸ್ತ್ರಾಕರ್‌ 47 ರನ್‌ ಗಳಿಸಿ ಔಟಾದರು. ಆಸೀಸ್‌ ತಿರುಗೇಟು: ಬಳಿಕ 2ನೇ ಇನ್ನಿಂಗ್ಸ್‌ ಆರಂಭಿಸಿದ ಆಸೀಸ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿತು. ಬೆಥ್‌ ಮೂನಿ(33), ಲಿಚ್‌ಫೀಲ್ಡ್‌(18) ಬೇಗನೇ ಔಟಾದರೂ, 3ನೇ ವಿಕೆಟ್‌ಗೆ ಎಲೈಸಿ ಪೆರ್ರಿ ಹಾಗೂ ತಹಿಲಾ ಮೆಗ್ರಾಥ್‌ 84 ರನ್‌ ಜೊತೆಯಾಟವಾಡಿ ತಂಡವನ್ನು ಮೇಲೆತ್ತಿದರು. 45 ರನ್‌ ಗಳಿಸಿದ್ದ ಪೆರ್ರಿಗೆ ಸ್ನೇಹಾ ರಾಣಾ ಪೆವಿಲಿಯನ್ ಹಾದಿ ತೋರಿದರೆ, ಮೆಗ್ರಾಥ್‌(73) ಅವರನ್ನು ನಾಯಕಿ ಹರ್ಮನ್‌ಪ್ರೀತ್‌ ಔಟ್‌ ಮಾಡಿದರು. ಬಳಿಕ ಬಂದ ಅಲೀಸಾ ಹೀಲಿ(32) ಕೂಡಾ ಹರ್ಮನ್‌ ಎಸೆತದಲ್ಲಿ ಎಲ್‌ಬಿ ಬಲೆಗೆ ಬಿದ್ದು ನಿರ್ಗಮಿಸಿದರು. ಸದ್ಯ ಅನಾಬೆಲ್‌ ಸುಥರ್‌ಲಂಡ್‌ ಹಾಗೂ ಆ್ಯಶ್ಲೆ ಗಾರ್ಡ್ನರ್‌ ಕ್ರೀಸ್‌ನಲ್ಲಿದ್ದಾರೆ. ಸ್ನೇಹಾ ರಾಣಾ, ಹರ್ಮನ್‌ ತಲಾ 2 ವಿಕೆಟ್‌ ಕಿತ್ತರು.ಸ್ಕೋರ್‌: ಆಸ್ಟ್ರೇಲಿಯಾ 219/10 ಹಾಗೂ 233/5 (ತಹಿಲಾ 73, ಪೆರ್ರಿ 45, ಹರ್ಮನ್‌ 2-23), ಭಾರತ 406/10(ದೀಪ್ತಿ 78, ಪೂಜಾ 47, ಗಾರ್ಡ್ನರ್‌ 4-100)

---01ನೇ ಗರಿಷ್ಠ8ನೇ ವಿಕೆಟ್‌ಗೆ ದೀಪ್ತಿ-ಪೂಜಾ 122 ರನ್‌ ಜೊತೆಯಾಟವಾಡಿದರು. ಇದು ಭಾರತ ಪರ ಮಹಿಳಾ ಟೆಸ್ಟ್‌ನಲ್ಲಿ 8 ಅಥವಾ ಅದಕ್ಕಿಂತ ಕೆಳ ಕ್ರಮಾಂಕದಲ್ಲಿ ದಾಖಲಾದ ಗರಿಷ್ಠ ಜೊತೆಯಾಟ.