ಸಾರಾಂಶ
ಎಡಿನ್‌ಬರ್ಗ್: ಸ್ಕಾಟ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಶ್ವ ದಾಖಲೆ ಬರೆದಿದೆ. ಪವರ್-ಪ್ಲೇನಲ್ಲಿ 113 ರನ್ ಕಲೆಹಾಕುವ ಮೂಲಕ, ಅಂತಾರಾಷ್ಟ್ರೀಯ ಟಿ20ಯಲ್ಲಿ ಪವರ್-ಪ್ಲೇನಲ್ಲಿ ಅತಿಹೆಚ್ಚು ರನ್ ಗಳಿಸಿದ ತಂಡ ಎನ್ನುವ ದಾಖಲೆಯನ್ನು ಬರೆಯಿತು.
ಮೊದಲು ಬ್ಯಾಟ್ ಮಾಡಿದ ಸ್ಕಾಟ್ಲೆಂಡ್ 20 ಓವರಲ್ಲಿ 9 ವಿಕೆಟ್‌ಗೆ 154 ರನ್ ಕಲೆಹಾಕಿತು. ಸುಲಭ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ, ಕೇವಲ 9.4 ಓವರಲ್ಲಿ ಗೆಲುವಿನ ನಗೆ ಬೀರಿತು. ಟ್ರ್ಯಾವಿಸ್ ಹೆಡ್ ಕೇವಲ 25 ಎಸೆತದಲ್ಲಿ 12 ಬೌಂಡರಿ, 5 ಸಿಕ್ಸರ್‌ಗಳೊಂದಿಗೆ 80 ರನ್ ಸಿಡಿಸಿದರು. ಮಿಚೆಲ್ ಮಾರ್ಷ್ 12 ಎಸೆತದಲ್ಲಿ 39 ರನ್ ಚಚ್ಚಿದರೆ, ಜೋಶ್ ಇಂಗ್ಲಿಸ್ 13 ಎಸೆತದಲ್ಲಿ ಔಟಾಗದೆ 27 ರನ್ ಬಾರಿಸಿದರು.
ಆಸ್ಟ್ರೇಲಿಯಾ ಸತತ 14 ಎಸೆತಗಳಲ್ಲಿ ಬೌಂಡರಿ, ಸಿಕ್ಸರ್ ಸಿಡಿಸಿ ದಾಖಲೆ ಬರೆಯಿತು. 4ನೇ ಓವರ್‌ನ ಕೊನೆ 2 ಎಸೆತ, 5 ಹಾಗೂ 6ನೇ ಓವರ್‌ನ ಎಲ್ಲಾ ಎಸೆತಗಳು ಬೌಂಡರಿ ಗೆರೆ ದಾಟಿದವು. 14 ಎಸೆತಗಳಲ್ಲೇ ಆಸೀಸ್ 66 ರನ್ ಕಲೆಹಾಕಿತು.ಪುರುಷರ ಅಂ.ರಾ.ಟಿ20 ಪವರ್-ಪ್ಲೇನಲ್ಲಿ ಗರಿಷ್ಠ ರನ್
ರನ್‌ತಂಡವಿರುದ್ಧವರ್ಷ
113/1ಆಸ್ಟ್ರೇಲಿಯಾಸ್ಕಾಟ್ಲೆಂಡ್2024
102/0ದ.ಆಫ್ರಿಕಾವಿಂಡೀಸ್2023
98/4ವಿಂಡೀಸ್‌ಶ್ರೀಲಂಕಾ2021
93/0ಐರ್ಲೆಂಡ್‌ವಿಂಡೀಸ್2020
92/1ವಿಂಡೀಸ್‌ಆಫ್ಘನ್2024