ಸಾರಾಂಶ
ಬುಸಾನ್(ದಕ್ಷಿಣ ಕೊರಿಯಾ): ವಿಶ್ವ ಟೇಬಲ್ ಟೆನಿಸ್ ಟೀಂ ಚಾಂಪಿಯನ್‌ಶಿಪ್‌ನ ಗುಂಪು ಹಂತದ ಕೊನೆ ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಭಾರತದ ಪುರುಷ ಹಾಗೂ ಮಹಿಳಾ ತಂಡಗಳು ನಾಕೌಟ್ ಪ್ರವೇಶಿಸಿವೆ.ಮಹಿಳಾ ತಂಡ ಸ್ಪೇನ್ ವಿರುದ್ಧ 3-2ರಲ್ಲಿ ಜಯ ದಾಖಲಿಸಿದರೆ, ಪುರುಷರ ತಂಡ ನ್ಯೂಜಿಲೆಂಡ್ ವಿರುದ್ಧ 3-0 ರಂತರದಲ್ಲಿ ಗೆದ್ದು ಬೀಗಿತು. ಕ್ವಾರ್ಟರ್ ಫೈನಲ್ ಪ್ರವೇಶಿಸಿದರೆ ಇತ್ತಂಡಗಳು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲಿವೆ.ಮಹಿಳೆಯರ ವಿಭಾಗದಲ್ಲಿ ಮೊದಲ ಸಿಂಗಲ್ಸ್‌ನಲ್ಲಿ ಶ್ರೀಜಾ ಅಕುಲ್, ಮಣಿಕಾ ಬಾತ್ರಾ ಪರಾಭವಗೊಂಡರು. 3ನೇ ಸಿಂಗಲ್ಸ್‌ನಲ್ಲಿ ಐಹಿಕಾ ಮುಖರ್ಜಿ ಜಯ ಸಾಧಿಸುವ ಮೂಲಕ ಭಾರತ ಗೆಲುವಿನ ಆಸೆಯನ್ನು ಜೀವತವಾಗಿರಿಸಿದರು. 4 ಮತ್ತು 5ನೇ ಸಿಂಗಲ್ಸ್‌ನಲ್ಲಿ ಗೆದ್ದ ಮಣಿಕಾ ಮತ್ತು ಶ್ರೀಜಾ ಭಾರತವನ್ನು ಅಂತಿಮ 24ರ ಘಟ್ಟಕ್ಕೇರಿಸಿದರು. ಭಾರತ ಗುಂಪುಇನ್ನು ಪುರುಷರ ತಂಡದಲ್ಲಿದ್ದ ರಾಷ್ಟ್ರೀಯ ಚಾಂಪಿಯನ್ ಹರ್ಮೀತ್ ದೇಸಾಯಿ, ನ್ಯೂಜಿಲೆಂಡ್‌ನ ಚೋಯಿ ಟಿಮೋಥಿ ವಿರುದ್ಧ ಗೆದ್ದರೆ, ಜಿ.ಸತ್ಯನ್ ಅವರು ಆಲ್ಫ್ರೆಡ್ ಡೆಲಾ ವಿರುದ್ಧ, ಮಾನುಶ್ ಶಾ ಅವರು ಮಾಕ್ಸ್‌ವೆಲ್ ಹೆಂಡರ್‌ಸನ್ ವಿರುದ್ಧ ಗೆಲುವು ಸಾಧಿಸಿದರು.