ಡಬ್ಲ್ಯುಪಿಎಲ್‌: ಚಾಂಪಿಯನ್‌ ಮುಂಬೈಗೆ ಸತತ 2ನೇ ಗೆಲುವಿನ ಸಂಭ್ರಮ

| Published : Feb 26 2024, 01:32 AM IST

ಡಬ್ಲ್ಯುಪಿಎಲ್‌: ಚಾಂಪಿಯನ್‌ ಮುಂಬೈಗೆ ಸತತ 2ನೇ ಗೆಲುವಿನ ಸಂಭ್ರಮ
Share this Article
  • FB
  • TW
  • Linkdin
  • Email

ಸಾರಾಂಶ

2ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಸತತ 2ನೇ ಗೆಲುವು ಸಾಧಿಸಿದೆ.

ಬೆಂಗಳೂರು: 2ನೇ ಆವೃತ್ತಿಯ ವುಮೆನ್ಸ್‌ ಪ್ರೀಮಿಯರ್‌ ಲೀಗ್‌(ಡಬ್ಲ್ಯುಪಿಎಲ್‌)ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್ ಸತತ 2ನೇ ಗೆಲುವು ಸಾಧಿಸಿದೆ. ಭಾನುವಾರ ಗುಜರಾತ್‌ ಜೈಂಟ್ಸ್‌ ವಿರುದ್ಧ ಮುಂಬೈಗೆ 5 ವಿಕೆಟ್‌ ಜಯ ಲಭಿಸಿತು.ಮೊದಲು ಬ್ಯಾಟ್‌ ಮಾಡಿದ ಗುಜರಾತ್‌ ತೀವ್ರ ಬ್ಯಾಟಿಂಗ್‌ ವೈಫಲ್ಯಕ್ಕೊಳಗಾಗಿ 9 ವಿಕೆಟ್‌ಗೆ ಕೇವಲ 126 ರನ್‌ ಕಲೆಹಾಕಿತು. ತನುಜಾ ಕಾನ್ವಾರ್‌ 28, ಕ್ಯಾಥ್ರಿನ್‌ ಬ್ರೈಸ್‌ 25 ಹಾಗೂ ನಾಯಕಿ ಬೆಥ್‌ ಮೂನಿ 24 ರನ್‌ ಗಳಿಸಿ ತಂಡದ ಮೊತ್ತ 120 ದಾಟಲು ನೆರವಾದರು. ಅಮೇಲಿ ಕೇರ್‌ 17ಕ್ಕೆ 4, ಶಬ್ನಿಮ್‌ ಇಸ್ಮಾಯಿಲ್‌ 18ಕ್ಕೆ 3 ವಿಕೆಟ್‌ ಕಿತ್ತರು.ಸುಲಭ ಗುರಿ ಬೆನ್ನತ್ತಿದ ಮುಂಬೈ 18.1 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಜಯಭೇರಿ ಬಾರಿಸಿತು. ಹರ್ಮನ್‌ಪ್ರೀತ್‌ ಕೌರ್‌ (ಔಟಾಗದೆ 46ರನ್‌) ಮತ್ತೆ ತಂಡದ ಗೆಲುವಿನ ರೂವಾರಿ ಎನಿಸಿಕೊಂಡರು. ಬ್ಯಾಟಿಂಗ್‌ನಲ್ಲೂ ಮಿಂಚಿದ ಅಮೇರಲಿ ಕೇರ್‌ 31 ರನ್‌ ಸಿಡಿಸಿದರು.ಇಂದಿನ ಪಂದ್ಯ: ಯುಪಿ ವಾರಿಯರ್ಸ್‌-ಡೆಲ್ಲಿ ಕ್ಯಾಪಿಟಲ್ಸ್‌