ಇಂಗ್ಲೆಂಡ್‌ ವಿರುದ್ಧ ಸಿಡಿದ ಜೈಸ್ವಾಲ್‌ ಈಗ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ

| Published : Mar 05 2024, 01:30 AM IST

ಇಂಗ್ಲೆಂಡ್‌ ವಿರುದ್ಧ ಸಿಡಿದ ಜೈಸ್ವಾಲ್‌ ಈಗ ಐಸಿಸಿ ತಿಂಗಳ ಆಟಗಾರ ಪ್ರಶಸ್ತಿ ರೇಸ್‌ನಲ್ಲಿ
Share this Article
  • FB
  • TW
  • Linkdin
  • Email

ಸಾರಾಂಶ

ಜೈಸ್ವಾಲ್‌ ಜೊತೆಗೆ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್, ಶ್ರೀಲಂಕಾದ ಪಥುಂ ನಿಸ್ಸಾಂಕ ಕೂಡಾ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಜೈಸ್ವಾಲ್‌ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸತತ 2 ದ್ವಿಶತಕ ಸೇರಿದಂತೆ 4 ಪಂದ್ಯಗಳಲ್ಲಿ 655 ರನ್‌ ಕಲೆಹಾಕಿದ್ದಾರೆ.

ದುಬೈ: ಭಾರತದ ಯುವ ತಾರಾ ಬ್ಯಾಟರ್‌ ಯಶಸ್ವಿ ಜೈಸ್ವಾಲ್‌ ಐಸಿಸಿ ಫೆಬ್ರವರಿ ತಿಂಗಳ ಆಟಗಾರ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ. ಅವರ ಜೊತೆಗೆ ನ್ಯೂಜಿಲೆಂಡ್‌ನ ಕೇನ್‌ ವಿಲಿಯಮ್ಸನ್, ಶ್ರೀಲಂಕಾದ ಪಥುಂ ನಿಸ್ಸಾಂಕ ಕೂಡಾ ಪ್ರಶಸ್ತಿ ರೇಸ್‌ನಲ್ಲಿದ್ದಾರೆ. ಜೈಸ್ವಾಲ್‌ ಇಂಗ್ಲೆಂಡ್‌ ವಿರುದ್ಧದ ಟೆಸ್ಟ್‌ ಸರಣಿಯಲ್ಲಿ ಸತತ 2 ದ್ವಿಶತಕ ಸೇರಿದಂತೆ 4 ಪಂದ್ಯಗಳಲ್ಲಿ 655 ರನ್‌ ಕಲೆಹಾಕಿದ್ದಾರೆ.ಟಿ20: ಬಾಂಗ್ಲಾ ವಿರುದ್ಧ ಲಂಕಾಕ್ಕೆ 3 ರನ್‌ ಗೆಲುವು

ಸೈಲೆಟ್‌(ಬಾಂಗ್ಲಾದೇಶ): ಶ್ರೀಲಂಕಾ ವಿರುದ್ಧ ಮೊದಲ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶ 3 ರನ್‌ ವೀರೋಚಿತ ಸೋಲನುಭವಿಸಿದೆ. ಇದರೊಂದಿಗೆ ಲಂಕಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಮೊದಲು ಬ್ಯಾಟ್‌ ಮಾಡಿದ ಲಂಕಾ 20 ಓವರಲ್ಲಿ 3 ವಿಕೆಟ್‌ಗೆ 206 ರನ್‌ ಕಲೆಹಾಕಿತು. ಸಮರವಿಕ್ರಮ 61, ಕುಸಾಲ್‌ ಮೆಂಡಿಸ್‌ 59 ಹಾಗೂ ಅಸಲಂಕ ಔಟಾಗದೆ 44 ರನ್‌ ಸಿಡಿಸಿದರು. ಬೃಹತ್‌ ಗುರಿ ಬೆನ್ನತ್ತಿದ ಬಾಂಗ್ಲಾ ಜಾಕರ್‌ ಅಲಿ(34 ಎಸೆತದಲ್ಲಿ 68), ಮಹ್ಮೂದುಲ್ಲಾ(31 ಎಸೆತದಲ್ಲಿ 54) ಹೋರಾಟದ ಹೊರತಾಗಿಯೂ 8 ವಿಕೆಟ್‌ಗೆ 203 ರನ್‌ ಗಳಿಸಿ ಸೋಲೊಪ್ಪಿಕೊಂಡಿತು.

ಸಿ.ಕೆ.ನಾಯ್ಡು ಟ್ರೋಫಿ: ಫೈನಲ್‌ನತ್ತ ಕರ್ನಾಟಕ

ನಾಗ್ಪುರ: ಸಿ.ಕೆ.ನಾಯ್ಡು ಟ್ರೋಫಿ ಅಂಡರ್‌-23 ರಾಷ್ಟ್ರೀಯ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್‌ನಲ್ಲಿ ಕರ್ನಾಟಕ ತಂಡ ವಿದರ್ಭ ವಿರುದ್ಧ ಗೆಲುವಿನ ಸನಿಹದಲ್ಲಿದೆ. ಮೊದಲ ಇನ್ನಿಂಗ್ಸ್‌ನಲ್ಲಿ 466 ರನ್ ಕಲೆಹಾಕಿದ್ದ ಕರ್ನಾಟಕ, ವಿದರ್ಭವನ್ನು ಕೇವಲ 73 ರನ್‌ಗೆ ಆಲೌಟ್‌ ಮಾಡಿತು. ಮೊಹ್ಸಿನ್‌ ಖಾನ್‌ 5, ಪರಾಸ್‌ ಆರ್ಯ 4 ವಿಕೆಟ್‌ ಕಿತ್ತರು. 393 ರನ್‌ ಮುನ್ನಡೆ ಪಡೆದಿರುವ ರಾಜ್ಯ ತಂಡ ಬಳಿಕ 2ನೇ ಇನ್ನಿಂಗ್ಸ್‌ನಲ್ಲಿ 2ನೇ ದಿನದಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು 63 ರನ್‌ ಕಲೆಹಾಕಿದೆ. ತಂಡ ಒಟ್ಟು 456 ರನ್‌ ಮುನ್ನಡೆಯಲ್ಲಿದೆ.