ಟಿ20 ಸರಣಿ: ಜಿಂಬಾಬ್ವೆಗೆ ತೆರಳಿದ ಯುವ ಟೀಂ ಇಂಡಿಯಾ

| Published : Jul 03 2024, 12:17 AM IST / Updated: Jul 03 2024, 12:18 AM IST

ಸಾರಾಂಶ

5 ಪಂದ್ಯಗಳ ಟಿ20 ಸರಣಿಯನ್ನು ಆಡಲು ಜಿಂಬಾಬ್ವೆ ತಲುಪಿದ ಯುವ ಟೀಂ ಇಂಡಿಯಾ. ಹಂಗಾಮಿ ಕೋಚ್‌ ವಿವಿಎಸ್‌ ಲಕ್ಷ್ಮಣ್‌ ನೇತೃತ್ವ. ಶುಭ್‌ಮನ್‌ ಗಿಲ್‌ ನಾಯಕತ್ವದಲ್ಲಿ ಆಡಲಿರುವ ತಂಡ. ಜು.6ರಿಂದ ಸರಣಿ ಆರಂಭ.

ಮುಂಬೈ: ಹಂಗಾಮಿ ಕೋಚ್‌ ವಿವಿಎಸ್‌ ಲಕ್ಷ್ಮಣ್‌ರ ನೇತೃತ್ವದಲ್ಲಿ ಯುವ ಭಾರತ ತಂಡ 5 ಪಂದ್ಯಗಳ ಟಿ20 ಸರಣಿಯನ್ನಾಡಲು ಮಂಗಳವಾರ ಜಿಂಬಾಬ್ವೆಗೆ ತೆರಳಿತು. ಜು.6ರಿಂದ ಹರಾರೆಯಲ್ಲಿ ಸರಣಿ ನಡೆಯಲಿದೆ.ಶುಭ್‌ಮನ್‌ ಗಿಲ್‌ ನಾಯಕತ್ವದ ತಂಡದಲ್ಲಿ ಯುವ ಪ್ರತಿಭೆಗಳಾದ ಅಭಿಷೇಕ್‌ ಶರ್ಮಾ, ರಿಯಾನ್‌ ಪರಾಗ್‌ ಸೇರಿ ಐಪಿಎಲ್‌ನಲ್ಲಿ ಮಿಂಚಿದ ಹಲವು ಆಟಗಾರರಿದ್ದಾರೆ. ಟಿ20 ವಿಶ್ವಕಪ್‌ನಲ್ಲಿ ಮೀಸಲು ಆಟಗಾರನಾಗಿದ್ದ ಗಿಲ್‌, ಅಮೆರಿಕದಿಂದ ನೇರವಾಗಿ ಹರಾರೆಗೆ ಆಗಮಿಸಲಿದ್ದಾರೆ.

ಮೊದಲೆರಡು ಟಿ20ಗೆ ಜಿತೇಶ್‌, ಸಾಯಿ, ರಾಣಾ

ನವದೆಹಲಿ: ಭಾರತ ತಂಡ ಬಾರ್ಬಡೋಸ್‌ನಿಂದ ಹೊರಡುವುದು ವಿಳಂಬವಾದ ಕಾರಣ, ತಂಡದಲ್ಲಿದ್ದ ಯಶಸ್ವಿ ಜೈಸ್ವಾಲ್‌, ಶಿವಂ ದುಬೆ, ಸಂಜು ಸ್ಯಾಮ್ಸನ್‌ಗೆ ಮೊದಲೆರಡು ಪಂದ್ಯಗಳಿಗೆ ವಿಶ್ರಾಂತಿ ನೀಡಲಾಗಿದೆ. ಇವರ ಬದಲಿಗೆ ಸಾಯಿ ಸುದರ್ಶನ್‌, ಜಿತೇಶ್‌ ಶರ್ಮಾ, ಹರ್ಷಿತ್‌ ರಾಣಾ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಇಂಗ್ಲೆಂಡ್‌ನಲ್ಲಿ ಕೌಂಟಿ ಕ್ರಿಕೆಟ್‌ ಆಡುತ್ತಿದ್ದ ಸುದರ್ಶನ್‌ಗೆ ತಕ್ಷಣ ಹೊರಟು ಹರಾರೆ ತಲುಪುವಂತೆ ಬಿಸಿಸಿಐ ಸೂಚಿಸಿದೆ.