ನಮ್ಮನ್ನು ಬೆದರಿಸಲು ಯಾರಿಗೂ ಲೈಸನ್ಸ್‌ ನೀಡಿಲ್ಲ ಎಂದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು!

| Published : Jan 14 2024, 01:34 AM IST / Updated: Jan 14 2024, 11:49 AM IST

ನಮ್ಮನ್ನು ಬೆದರಿಸಲು ಯಾರಿಗೂ ಲೈಸನ್ಸ್‌ ನೀಡಿಲ್ಲ ಎಂದ ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು!
Share this Article
  • FB
  • TW
  • Linkdin
  • Email

ಸಾರಾಂಶ

ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಅವರು ಚೀನಾ ಪ್ರವಾಸ ಮುಗಿಸಿ ಬಂದ ಬಳಿಕ ಭಾರತದ ವಿರುದ್ಧ ಹರಿಹಾಯ್ದಿದ್ದು, ನಾವು ನಮ್ಮನ್ನು ಬೆದರಿಸುವಂತೆ ಯಾರಿಗೂ ಲೈಸನ್ಸ್‌ ನೀಡಿಲ್ಲ ಎಂದು ಹೇಳಿದ್ದಾರೆ.

ನವದೆಹಲಿ: ಮಾಲ್ಡೀವ್ಸ್‌ ಒಂದು ಚಿಕ್ಕ ದ್ವೀಪ ಇರಬಹುದು ಆದರೆ ನಮ್ಮನ್ನು ಬೆದರಿಸಲು ಯಾವ ದೇಶಕ್ಕೂ ನಾವು ಪರವಾನಗಿ ನೀಡಿಲ್ಲ ಎಂದು ಮಾಲ್ಡೀವ್ಸ್‌ ಅಧ್ಯಕ್ಷ ಮೊಹಮ್ಮದ್‌ ಮುಯಿಜು ಶನಿವಾರ ಹೇಳಿದ್ದಾರೆ.

5 ದಿನಗಳ ಚೀನಾ ಪ್ರವಾಸ ಕೈಗೊಂಡಿದ್ದ ಮುಯಿಜು, ವಾಪಸ್ಸಾದ ಬಳಿಕ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ್ದು ಪರೋಕ್ಷವಾಗಿ ಭಾರತದ ವಿರುದ್ಧ ಗುಡುಗಿದ್ದಾರೆ.

‘ಹಿಂದೂ ಮಹಾಸಾಗರದಲ್ಲಿ ನಮ್ಮದೊಂದು ಚಿಕ್ಕ ದ್ವೀಪವೇ ಆಗಿರಬಹುದು. ಆದರೆ ನಾವು 9 ಲಕ್ಷ ಚ.ಕಿ.ಮೀ. ಆರ್ಥಿಕ ವಲಯವನ್ನು ಹೊಂದಿದ್ದೇವೆ. ಹಿಂದೂ ಮಹಾಸಾಗರ ಯಾವುದೇ ಒಂದು ದೇಶಕ್ಕೆ ಸೇರಿದ್ದಲ್ಲ. ಇದು ಎಲ್ಲರಿಗೂ ಸೇರಿದ್ದು ಎಂದು ಹೇಳಿದ್ದಾರೆ. 

ಮಾಲ್ಡೀವ್ಸ್‌ ಭಾರತದ ಹಿತ್ತಲಿನಲ್ಲಿದೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನಾವು ಯಾವುದೇ ದೇಶದ ಹಿತ್ತಲಿನಲ್ಲಿಲ್ಲ. ನಮ್ಮದು ಸ್ವತಂತ್ರ್ಯ, ಸಾರ್ವಭೌಮ ದೇಶವಾಗಿದೆ ಎಂದು ಹೇಳಿದ್ದಾರೆ. 

ಇತ್ತೀಚೆಗೆ ಮಾಲ್ಡೀವ್ಸ್‌ ಸಚಿವರು ಮೋದಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಉಭಯ ದೇಶಗಳ ರಾಜತಾಂತ್ರಿಕ ಸಂಬಂಧ ಹಳಸಿದ್ದು, ಮಾಲ್ಡೀವ್ಸ್‌ ರಾಯಭಾರಿಯನ್ನು ಕರೆಸಿ ಭಾರತ ಆಕ್ಷೇಪ ವ್ಯಕ್ತಪಡಿಸಿತ್ತು.