ಇಸ್ರೇಲ್‌ ವೈಮಾನಿಕ ದಾಳಿಯಲ್ಲಿ 9 ಒತ್ತೆಯಾಳು ಸಾವು: ಹಮಾಸ್‌

| Published : Oct 15 2023, 12:45 AM IST

ಇಸ್ರೇಲ್‌ ವೈಮಾನಿಕ ದಾಳಿಯಲ್ಲಿ 9 ಒತ್ತೆಯಾಳು ಸಾವು: ಹಮಾಸ್‌
Share this Article
  • FB
  • TW
  • Linkdin
  • Email

ಸಾರಾಂಶ

ಇಸ್ರೇಲ್‌ ಪ್ಯಾಲೆಸ್ತಿನ್‌ ಕದನ ತಾರಕಕ್ಕೇರುತ್ತಿರುವ ನಡುವೆಯೇ ಶನಿವಾರ ಇಸ್ರೇಲ್‌ ವಾಯುದಾಳಿಯಲ್ಲಿ ಆ ದೇಶಕ್ಕೇ ಸೇರಿದ 9 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ.
ಟೆಲ್‌ ಅವೀವ್‌: ಇಸ್ರೇಲ್‌ ಪ್ಯಾಲೆಸ್ತಿನ್‌ ಕದನ ತಾರಕಕ್ಕೇರುತ್ತಿರುವ ನಡುವೆಯೇ ಶನಿವಾರ ಇಸ್ರೇಲ್‌ ವಾಯುದಾಳಿಯಲ್ಲಿ ಆ ದೇಶಕ್ಕೇ ಸೇರಿದ 9 ಒತ್ತೆಯಾಳುಗಳು ಸಾವನ್ನಪ್ಪಿದ್ದಾರೆ. ಇವರಲ್ಲಿ ನಾಲ್ವರು ವಿದೇಶಿಗರೂ ಇದ್ದಾರೆ ಹಮಾಸ್‌ ನಾಯಕರು ತಿಳಿಸಿದ್ದಾರೆ. ಶುಕ್ರವಾರ 13 ಒತ್ತೆಯಾಳುಗಳು ಇಸ್ರೇಲ್ ವಾಯುದಾಳಿಯಲ್ಲಿ ಸಾವನ್ನಪ್ಪಿದ್ದರು ಎಂದು ಹಮಾಸ್‌ ಹೇಳಿತ್ತು. ಇದರಿಂದ ಸಾವನ್ನಪ್ಪಿದ ಒತ್ತೆಯಾಳುಗಳ ಸಂಖ್ಯೆ 24ಕ್ಕೇರಿದೆ. ಆದರೆ ಇದನ್ನು ಇಸ್ರೇಲ್‌ ಹಾಗೂ ಇತರ ಸಂಘಟನೆಗಳು ಖಚಿತಪಡಿಸಿಲ್ಲ. ಹಮಾಸ್‌ ಕಳೆದ ಶನಿವಾರ ದಕ್ಷಿಣ ಇಸ್ರೇಲ್‌ನ ಸೇನಾ ಪ್ರದೇಶಕ್ಕೆ ದಾಳಿ ಮಾಡಿದಾಗ ನೂರಾರು ಜನರನ್ನು ಒತ್ತೆಸೆರೆ ಮಾಡಿಕೊಂಡಿತ್ತು.