ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹಕ್ಕೆ ಹಿಮನದಿಯೊಂದರ ಬೃಹತ್ ಭಾಗ ಕುಸಿದುಬಿದ್ದಿರುವುದೇ ಮುಖ್ಯ ಕಾರಣವೆಂದು ಅಮೆರಿಕದ ಭೂವಿಜ್ಞಾನಿಗಳು ತಿಳಿಸಿದ್ದಾರೆ. ಉಪಗ್ರಹ ಚಿತ್ರಗಳ ವಿಶ್ಲೇಷಣೆಯ ಪ್ರಕಾರ, ಸುಮಾರು 2,000 ಅಡಿ ಅಗಲದ ಭಾರಿ ಹಿಮಬಂಡೆಯು ಹಿಮನದಿಯಿಂದ ಬೇರ್ಪಟ್ಟಿದೆ.
ಕಾಠ್ಮಂಡು: ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹಕ್ಕೆ ಹಿಮನದಿಯೊಂದರ ಬೃಹತ್ ಭಾಗ ಕುಸಿದುಬಿದ್ದಿರುವುದೇ ಮುಖ್ಯ ಕಾರಣವೆಂದು ಅಮೆರಿಕದ ಭೂವಿಜ್ಞಾನಿಗಳು ತಿಳಿಸಿದ್ದಾರೆ.
ಉಪಗ್ರಹ ಚಿತ್ರಗಳ ವಿಶ್ಲೇಷಣೆಯ ಪ್ರಕಾರ, ಸುಮಾರು 2,000 ಅಡಿ ಅಗಲದ ಭಾರಿ ಹಿಮಬಂಡೆಯು ಹಿಮನದಿಯಿಂದ ಬೇರ್ಪಟ್ಟಿದೆ. ಸಮುದ್ರ ಮಟ್ಟದಿಂದ 170000 ಅಡಿ ಎತ್ತರಪ್ರದೇಶದಿಂದ ಇಷ್ಟು ಭಾರೀ ಗಾತ್ರದ ನೀರ್ಗಲ್ಲುಗಳು ಏಕಾಏಕಿ ಸುಮಾರು 4,000 ಅಡಿ ಆಳಕ್ಕೆ ಭಾರೀ ವೇಗವಾಗಿ ನುಗ್ಗಿಬಂದಿವೆ. ಪರಿಣಾಮ ಅದು ಸಾಗಿಬಂದ ಹಾದಿಯಲ್ಲಿ ಸಿಕ್ಕ ಕಲ್ಲು, ಮಣ್ಣು ಎಲ್ಲವನ್ನೂ ಸೇರಿಸಿಕೊಂಡು ಮುಂದೆ ಸಾಗಿ ಬೋಟೆ ಕೋಶಿ ನದಿಗೆ ಸೇರಿಕೊಂಡು ಜನವಸತಿ ಪ್ರದೇಶಗಳ ಮೇಲೆ ಅಪ್ಪಳಿಸಿದೆ ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಪ್ರವಾಹಕ್ಕೆ ಚೀನಾ ಮೂಲಸೌಕರ್ಯ ನಿರ್ಮಾಣ ಕಾರಣ?
ಕಾಠ್ಮಂಡು: ನೇಪಾಳದಲ್ಲಿ ಉಂಟಾದ ಭೀಕರ ಪ್ರವಾಹಕ್ಕೆ ಟಿಬೆಟ್‌ನಲ್ಲಿ ಚೀನಾ ಕೈಗೊಂಡಿರುವ ಮೂಲಸೌಕರ್ಯ ನಿರ್ಮಾಣ ಕಾರ್ಯಗಳೇ ಕಾರಣವಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ.
ಪರಿಸರ ನಾಶ ಮಾಡಿರುವುದು ದಿಢೀರ್ ಪ್ರವಾಹಕ್ಕೆ ದಾರಿ
ಚೀನಾ ಕಡೆಯ ಹಿಮಾಲಯ ಪ್ರದೇಶದಲ್ಲಿ ಜನವಸತಿ ಹಾಗೂ ರಸ್ತೆ-ಬಂದರು ನಿರ್ಮಾಣಕ್ಕಾಗಿ ಬೆಟ್ಟಗಳನ್ನು ಕಡಿದು ಪರಿಸರ ನಾಶ ಮಾಡಿರುವುದು ಹಿಮಪಾತ ಮತ್ತು ದಿಢೀರ್ ಪ್ರವಾಹಕ್ಕೆ ದಾರಿ ಮಾಡಿಕೊಟ್ಟಿದೆ. ಮುಖ್ಯವಾಗಿ, ತ್ರಿಶೂಲಿ ನದಿಯ ನೈಸರ್ಗಿಕ ಹರಿವಿನ ಬಳಿ ಇರುವ ಗೈರೋಂಗ್ ನಗರ ಮತ್ತು ಗೈರೋಂಗ್ ಬಂದರು ನಿರ್ಮಾಣವು ನೀರು ನೇಪಾಳದ ಕಡೆಗೆ ರಭಸವಾಗಿ ಹರಿಯಲು ಕಾರಣವಾಗಿದೆ ಎಂದು ಆರೋಪಿಸಲಾಗಿದೆ.
