ಹಮಾಸ್‌ ಉಗ್ರರಿಂದ ಪರೇಡ್‌ ಆದ ಅರೆ ನಗ್ನ ಮಹಿಳೆ ಚಿತ್ರಕ್ಕೆ ಪ್ರಶಸ್ತಿ ತೀವ್ರ ಆಕ್ರೋಶ ವ್ಯಕ್ತ

| Published : Mar 30 2024, 12:59 AM IST

ಹಮಾಸ್‌ ಉಗ್ರರಿಂದ ಪರೇಡ್‌ ಆದ ಅರೆ ನಗ್ನ ಮಹಿಳೆ ಚಿತ್ರಕ್ಕೆ ಪ್ರಶಸ್ತಿ ತೀವ್ರ ಆಕ್ರೋಶ ವ್ಯಕ್ತ
Share this Article
  • FB
  • TW
  • Linkdin
  • Email

ಸಾರಾಂಶ

ಇಸ್ರೇಲ್‌- ಪ್ಯಾಲೆಸ್ತೀನ್‌ ಯುದ್ಧದ ವೇಳೆ ಜರ್ಮನಿ ಮೂಲದ ಶಾನಿಲೋಕ್‌ ಎಂಬ ಯುವತಿಯನ್ನು ಹತ್ಯೆಗೈದು ನಗ್ನವಾಗಿ ಗಾಜಾದ ನಗರಗಳಲ್ಲಿ ಹಮಾಸ್‌ ಉಗ್ರರು ಪರೇಡ್‌ ಮಾಡಿದ ದೃಶ್ಯವುಳ್ಳ ಫೋಟೋಗೆ ಈ ಬಾರಿಯ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಕಟಿಸಲಾಗಿದೆ.

ಗಾಜಾ: ಇಸ್ರೇಲ್‌- ಪ್ಯಾಲೆಸ್ತೀನ್‌ ಯುದ್ಧದ ವೇಳೆ ಜರ್ಮನಿ ಮೂಲದ ಶಾನಿಲೋಕ್‌ ಎಂಬ ಯುವತಿಯನ್ನು ಹತ್ಯೆಗೈದು ನಗ್ನವಾಗಿ ಗಾಜಾದ ನಗರಗಳಲ್ಲಿ ಹಮಾಸ್‌ ಉಗ್ರರು ಪರೇಡ್‌ ಮಾಡಿದ ದೃಶ್ಯವುಳ್ಳ ಫೋಟೋಗೆ ಈ ಬಾರಿಯ ಪ್ರತಿಷ್ಠಿತ ಅಂತಾರಾಷ್ಟ್ರೀಯ ಪ್ರಶಸ್ತಿ ಪ್ರಕಟಿಸಲಾಗಿದೆ. ಆದರೆ ಅಸೋಸಿಯೇಟ್‌ ಪ್ರೆಸ್‌ನ ಪತ್ರಕರ್ತರು ಸೆರೆಹಿಡಿದ ಫೋಟೋಕ್ಕೆ ಪ್ರಶಸ್ತಿ ನೀಡಿರುವುದಕ್ಕೆ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕೆಲವರು ಫೋಟೋ ಪ್ರಶಂಸಿಸಿದರೆ, ಇದು ಜ್ಯೂಯಿಷ್‌ ಜನಾಂಗಕ್ಕೆ ಮಾಡಿದ ಅವಮಾನ. ಇಂಥ ಸ್ಥಿತಿಯಲ್ಲಿ ತಮ್ಮ ಮಗಳನ್ನು ನೋಡಲು ಅವರ ಪೋಷಕರು ಬಯಸುತ್ತಾರೆಯೇ ಎಂದು ಜನರು ಪ್ರಶ್ನಿಸಿದ್ದಾರೆ. ಕಳೆದ ಅ.7 ರಂದು ಹಮಾಸ್‌ ಉಗ್ರರು ಶಾನಿ ಲೌಕ್‌ (22) ಎಂಬ ಮಹಿಳೆಯನ್ನು ಅಪಹರಿಸಿ ಕೊಂದು ಅವರ ಮೃತದೇಹವನ್ನು ಗಾಜಾ ಬೀದಿಯಲ್ಲಿ ಮೆರವಣಿಗೆ ಮಾಡಿದ್ದರು.