ಸಾರಾಂಶ
ಈಗಾಗಲೇ 500 ವಿಮಾನ ಖರೀದಿಗೆ ಜಾಗತಿಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಏರ್ ಇಂಡಿಯಾ, ಇದರ ಭಾಗವಾಗಿ ಮುಂದಿನ ಒಂದೂವರೆ ವರ್ಷಗಳ ಅವಧಿಯಲ್ಲಿ ಪ್ರತಿ 6 ದಿನಕ್ಕೆ ಒಂದರಂತೆ ಒಂದು ಹೊಸ ವಿಮಾನಗಳನ್ನು ಪಡೆದುಕೊಳ್ಳಲಿದೆ
ಸಿಂಗಾಪುರ: ಈಗಾಗಲೇ 500 ವಿಮಾನ ಖರೀದಿಗೆ ಜಾಗತಿಕ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಏರ್ ಇಂಡಿಯಾ, ಇದರ ಭಾಗವಾಗಿ ಮುಂದಿನ ಒಂದೂವರೆ ವರ್ಷಗಳ ಅವಧಿಯಲ್ಲಿ ಪ್ರತಿ 6 ದಿನಕ್ಕೆ ಒಂದರಂತೆ ಒಂದು ಹೊಸ ವಿಮಾನಗಳನ್ನು ಪಡೆದುಕೊಳ್ಳಲಿದೆ. ಇವುಗಳನ್ನು ಅಂತಾರಾಷ್ಟ್ರೀಯ ವಿಮಾನಯಾನಕ್ಕಾಗಿ ಬಳಕೆ ಮಾಡಿಕೊಳ್ಳಲಿದ್ದೇವೆ ಎಂದು ಕಂಪನಿ ಸಿಇಒ ಕ್ಯಾಂಪ್‌ಬೆಲ್ ವಿಲ್ಸನ್ ತಿಳಿಸಿದ್ದಾರೆ. ಏರಿಂಡಿಯಾ ಸಂಸ್ಥೆಯ ಒಡೆತನವನ್ನು ಮತ್ತೆ ಟಾಟಾ ಪಡೆದುಕೊಂಡ ಬಳಿಕ ವಿಮಾನಯಾನ ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ಜಾರಿ ಮಾಡಿದ್ದು, ಹೊಸ ವಿಮಾನಗಳ ಖರೀದಿಯನ್ನು ಮಾಡಿತ್ತು.