ದ್ವೇಷದ ಸುದ್ದಿ ಪ್ರಸಾರ ಆರೋಪ : ಇಸ್ರೇಲ್‌ನಲ್ಲಿ ಅಲ್‌ಜಝೀರಾಕ್ಕೆ ನಿಷೇಧ

| Published : Apr 03 2024, 01:30 AM IST / Updated: Apr 03 2024, 04:03 AM IST

ದ್ವೇಷದ ಸುದ್ದಿ ಪ್ರಸಾರ ಆರೋಪ : ಇಸ್ರೇಲ್‌ನಲ್ಲಿ ಅಲ್‌ಜಝೀರಾಕ್ಕೆ ನಿಷೇಧ
Share this Article
  • FB
  • TW
  • Linkdin
  • Email

ಸಾರಾಂಶ

ಗಾಜಾಪಟ್ಟಿಯಲ್ಲಿ ಹಮಾಸ್‌ ಜೊತೆಗಿನ ಯುದ್ಧದ ರಕ್ತಸಿಕ್ತ ಸುದ್ದಿಗಳನ್ನು ಪ್ರಸಾರ ಮಾಡಿ ತಮ್ಮ ದೇಶದ ಜನರಲ್ಲಿ ದ್ವೇಷದ ಭಾವನೆ ಮೂಡಿಸುತ್ತಿದೆ ಎಂದು ಆರೋಪಿಸಿ ಇಸ್ರೇಲ್‌ ಸರ್ಕಾರ ಆಲ್‌ಜಝೀರಾ ಸುದ್ದಿವಾಹಿನಿಯನ್ನು ನಿಷೇಧಿಸುವ ನಿರ್ಣಯ ಕೈಗೊಂಡಿದೆ.

ಜೆರುಸಲೇಂ: ಗಾಜಾಪಟ್ಟಿಯಲ್ಲಿ ಹಮಾಸ್‌ ಜೊತೆಗಿನ ಯುದ್ಧದ ರಕ್ತಸಿಕ್ತ ಸುದ್ದಿಗಳನ್ನು ಪ್ರಸಾರ ಮಾಡಿ ತಮ್ಮ ದೇಶದ ಜನರಲ್ಲಿ ದ್ವೇಷದ ಭಾವನೆ ಮೂಡಿಸುತ್ತಿದೆ ಎಂದು ಆರೋಪಿಸಿ ಇಸ್ರೇಲ್‌ ಸರ್ಕಾರ ಆಲ್‌ಜಝೀರಾ ಸುದ್ದಿವಾಹಿನಿಯನ್ನು ನಿಷೇಧಿಸುವ ನಿರ್ಣಯ ಕೈಗೊಂಡಿದೆ.

 ಈ ಕುರಿತು ಇಸ್ರೇಲ್‌ ಸಂಸತ್ತು ಕಾನೂನು ಮಂಡಿಸಿ ಅಂಗೀಕರಿಸಿದ್ದು, ಇಸ್ರೇಲ್‌ನಲ್ಲಿ ವಾಹಿನಿಯ ಸುದ್ದಿ ಪ್ರಸಾರ ಮತ್ತು ಇತರ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಷೇಧಿಸಿದೆ. 

ಈ ಕುರಿತು ಟ್ವೀಟ್‌ ಮಾಡಿರುವ ಇಸ್ರೇಲ್‌ ಪ್ರಧಾನಿ ನೆತನ್ಯಾಹು, ‘ಆಲ್‌ಜಝೀರಾ ಸುದ್ದಿಸಂಸ್ಥೆ ಹಮಾಸ್‌ ಜೊತೆಗೆ ಕೈಜೋಡಿಸಿದ್ದು, ಅ.7ರಂದು ನಡೆದ ಹತ್ಯಾಕಾಂಡದಲ್ಲಿ ಭಾಗವಹಿಸಿ ನಮ್ಮ ಜನರಲ್ಲಿ ದ್ವೇಷ ಭಾವನೆಯನ್ನು ಮೂಡುವಂತೆ ಮಾಡಿದೆ. ಈ ಹಿನ್ನೆಲೆಯಲ್ಲಿ ಸುದ್ದಿವಾಹಿನಿಯನ್ನು ನಿಷೇಧಿಸಲಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.