ಇರಾನ್‌ ಜೊತೆ ಡೀಲ್‌: ಭಾರತಕ್ಕೆ ಅಮೆರಿಕದ ದಿಗ್ಬಂಧನದ ಎಚ್ಚರಿಕೆ

| Published : May 15 2024, 01:32 AM IST

ಇರಾನ್‌ ಜೊತೆ ಡೀಲ್‌: ಭಾರತಕ್ಕೆ ಅಮೆರಿಕದ ದಿಗ್ಬಂಧನದ ಎಚ್ಚರಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ದಿಗ್ಬಂಧನದ ಸಂಭಾವ್ಯತೆ ಎದುರಿಸಬೇಕಾಗುತ್ತದೆ. ಇರಾನ್‌ ದೇಶದ ಜತೆ ಯಾರೂ ವ್ಯವಹರಿಸುವಂತಿಲ್ಲ ಎಂದು ಅಮೆರಿಕ ಭಾರತಕ್ಕೆ ಪರೋಕ್ಷ ಎಚ್ಚರಿಕೆ ನೀಡಿದೆ.

ಪಿಟಿಐ ವಾಷಿಂಗ್ಟನ್‌

ವ್ಯೂಹಾತ್ಮಕವಾಗಿ ಮಹತ್ವದ್ದಾಗಿರುವ ಚಾಬಹಾರ್‌ ಬಂದರನ್ನು 10 ವರ್ಷಗಳ ಕಾಲ ನಿರ್ವಹಣೆ ಮಾಡಲು ಇರಾನ್‌ ಸರ್ಕಾರದ ಜತೆ ಭಾರತ ಮಾಡಿಕೊಂಡ ಒಪ್ಪಂದ ಇದೀಗ ಅಮೆರಿಕದ ಕೆಂಗಣ್ಣಿಗೆ ಗುರಿಯಾಗಿದೆ. ಇರಾನ್‌ ಜತೆ ವ್ಯವಹಾರ ಮಾಡುವ ಯಾವುದೇ ದೇಶವಾದರೂ ದಿಗ್ಬಂಧನದ ಸಂಭಾವ್ಯ ಅಪಾಯವನ್ನು ಎದುರಿಸಬೇಕಾಗುತ್ತದೆ ಎಂದು ಅಮೆರಿಕ ಗುಟುರು ಹಾಕಿದೆ.

ಇರಾನ್‌ ರಹಸ್ಯವಾಗಿ ಅಣ್ವಸ್ತ್ರ ಯೋಜನೆಗಳನ್ನು ನಡೆಸುತ್ತಿದೆ ಎಂದು ದೂರುತ್ತಲೇ ಬಂದಿರುವ ಅಮೆರಿಕ, ಆ ದೇಶದ ಮೇಲೆ ಹಲವು ದಿಗ್ಬಂಧನಗಳನ್ನು ವಿಧಿಸಿದೆ. ಇಂತಹ ಸಂದರ್ಭದಲ್ಲೇ ಇರಾನ್‌ ಜತೆ ಭಾರತ ಒಪ್ಪಂದ ಮಾಡಿಕೊಂಡಿರುವುದು ಆ ದೇಶದ ಆಕ್ರೋಶಕ್ಕೆ ಕಾರಣವಾಗಿದೆ.

ಚಾಬಹಾರ್ ಬಂದರಿಗೆ ಸಂಬಂಧಿಸಿದಂತೆ ಇರಾನ್‌ ಹಾಗೂ ಭಾರತ ಒಪ್ಪಂದಕ್ಕೆ ಸಹಿ ಹಾಕಿರುವ ವಿಷಯ ನಮಗೂ ಗೊತ್ತಾಗಿದೆ. ತನ್ನ ವಿದೇಶಾಂಗ ನೀತಿ ಹಾಗೂ ಚಾಬಹಾರ್‌ ಒಪ್ಪಂದ ಮತ್ತು ಇರಾನ್‌ ಜತೆಗಿನ ದ್ವಿಪಕ್ಷೀಯ ಸಂಬಂಧದ ಕುರಿತು ಭಾರತವೇ ಮಾತನಾಡಲಿ ಎಂದು ಅಮೆರಿಕ ವಿದೇಶಾಂಗ ಇಲಾಖೆಯ ಉಪ ವಕ್ತಾರ ವೇದಾಂತ್‌ ಪಟೇಲ್‌ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪಾಕಿಸ್ತಾನವನ್ನು ಬಳಸದೆ ಅಫ್ಘಾನಿಸ್ತಾನ ಹಾಗೂ ಕೇಂದ್ರ ಏಷ್ಯಾ ದೇಶಗಳಿಗೆ ಸರಕು ಸಾಗಿಸಲು ಭಾರತಕ್ಕೆ ಚಾಬಹಾರ್‌ ಒಪ್ಪಂದದಿಂದ ಅನುಕೂಲವಾಗಲಿದೆ.