ಕ್ಯಾಲಿಫೋರ್ನಿಯಾ: ಹಿಂದೂಗಳ ಮೇಲೆ ದಾಳಿ ಹೆಚ್ಚಳ

| Published : May 28 2024, 01:09 AM IST / Updated: May 28 2024, 03:58 AM IST

ಸಾರಾಂಶ

ಅಮೆರಿಕದ ಪ್ರತಿಷ್ಠಿತ ರಾಜ್ಯವಾದ ಕ್ಯಾಲಿಫೋರ್ನಿಯಾದಲ್ಲಿ ಹಿಂದೂಗಳ ಮೇಲಿನ ದಾಳಿಗಳು ಹೆಚ್ಚುತ್ತಿವೆ. ಜನಾಂಗೀಯ ದಾಳಿಗಳಲ್ಲಿ ಹಿಂದೂಗಳ ಮೇಲಿನ ದಾಳಿ ಈಗ 2ನೇ ಸ್ಥಾನ ಪಡೆದಿದೆ.

ವಾಷಿಂಗ್ಟನ್‌: ಅಮೆರಿಕದ ಪ್ರತಿಷ್ಠಿತ ರಾಜ್ಯವಾದ ಕ್ಯಾಲಿಫೋರ್ನಿಯಾದಲ್ಲಿ ಹಿಂದೂಗಳ ಮೇಲಿನ ದಾಳಿಗಳು ಹೆಚ್ಚುತ್ತಿವೆ. ಜನಾಂಗೀಯ ದಾಳಿಗಳಲ್ಲಿ ಹಿಂದೂಗಳ ಮೇಲಿನ ದಾಳಿ ಈಗ 2ನೇ ಸ್ಥಾನ ಪಡೆದಿದೆ.

 ಯಹೂದಿ ವಿರೋಧಿ ದಾಳಿ ಮೊದಲನೇ ಸ್ಥಾನ ಪಡೆದರೆ, ಇಸ್ಲಾಂ ವಿರೋಧಿ ದಾಳಿಗಳು 3ನೇ ಸ್ಥಾನ ಪಡೆದಿವೆ.ಕ್ಯಾಲಿಫೋರ್ನಿಯಾ ನಾಗರಿಕ ಹಕ್ಕುಗಳ ಇಲಾಖೆ (CRD) ವರದಿಯ ಪ್ರಕಾರ, ಒಟ್ಟಾರೆ ಜನಾಂಗೀಯ ಅಪರಾಧಗಳಲ್ಲಿ ಹಿಂದೂಗಳ ಮೇಲಿನ ಅಪರಾಧ ಪ್ರಕರಣಗಳ ಪಾಲು ಶೇ.23. ಯಹೂದಿ ವಿರೋಧಿ ಅಪರಾಧ ಪ್ರಕರಣಗಳು ಶೇ.37ರಷ್ಟು ಹಾಗೂ ಇಸ್ಲಾಂ ವಿರೋಧಿ ಅಪರಾಧ ಪ್ರಕರಣಗಳು ಶೇ.14.6ರಷ್ಟು ದಾಖಲಾಗಿವೆ.

ಕ್ಯಾಲಿಫೋರ್ನಿಯಾದಲ್ಲಿ ವಲಸೆಯ ಕಾರಣ ವಲಸಿಗರ ವಿರುದ್ಧ ದ್ವೇಷ ಪ್ರಕರಣ ಹೆಚ್ಚುತ್ತಿವೆ. ಕಳೆದ ಕೆಲವು ತಿಂಗಳುಗಳಲ್ಲಿ ಕನಿಷ್ಠ 6 ಹಿಂದೂ ದೇವಾಲಯಗಳನ್ನು ಧ್ವಂಸಗೊಳಿಸಲಾಗಿದೆ. ಸಾರ್ವಜನಿಕ ಸ್ಥಳಗಳು, ಹೋಟೆಲ್‌, ಮಾಲ್‌ಗಳಲ್ಲಿ ಹಿಂದೂಗಳ ಮೇಲೆ ದೌರ್ಜನ್ಯಗಳು ವರದಿಯಾಗಿವೆ ಎಂದು ಅದು ವಿವರಿಸಿದೆ.