ಬಾಂಗ್ಲಾ: ಯೂನಸ್‌ ಸರ್ಕಾರದಿಂದ ಹಸೀನಾರ ಅವಾಮಿ ಪಕ್ಷ ಬ್ಯಾನ್‌

| N/A | Published : May 12 2025, 12:18 AM IST / Updated: May 12 2025, 04:23 AM IST

ಬಾಂಗ್ಲಾ: ಯೂನಸ್‌ ಸರ್ಕಾರದಿಂದ ಹಸೀನಾರ ಅವಾಮಿ ಪಕ್ಷ ಬ್ಯಾನ್‌
Share this Article
  • FB
  • TW
  • Linkdin
  • Email

ಸಾರಾಂಶ

ಬಾಂಗ್ಲಾದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ, ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಅನ್ನು ಪ್ರಸ್ತುತ ಅಧಿಕಾರದಲ್ಲಿರುವ ಮೊಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ಶನಿವಾರ ನಿಷೇಧಿಸಿದೆ.

 ಢಾಕಾ: ಬಾಂಗ್ಲಾದೇಶದ ಅತ್ಯಂತ ಹಳೆಯ ರಾಜಕೀಯ ಪಕ್ಷವಾದ, ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ಅವರ ಅವಾಮಿ ಲೀಗ್‌ ಅನ್ನು ಪ್ರಸ್ತುತ ಅಧಿಕಾರದಲ್ಲಿರುವ ಮೊಹಮ್ಮದ್‌ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ ಶನಿವಾರ ನಿಷೇಧಿಸಿದೆ.

ಈ ಬಗ್ಗೆ ಯೂನಸ್‌ರ ಕಚೇರಿ ಹೇಳಿಕೆ ಬಿಡುಗಡೆ ಮಾಡಿದ್ದು, ‘ದೇಶದ ಭದ್ರತೆ ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವ ಸಲುವಾಗಿ ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯಲ್ಲಿ ಅವಾಮಿ ಲೀಗ್ ಮತ್ತು ಅದರ ನಾಯಕರ ವಿಚಾರಣೆ ಪೂರ್ಣಗೊಳ್ಳುವವರೆಗೆ ನಿಷೇಧವು ಜಾರಿಯಲ್ಲಿಡಲು ಸಲಹೆಗಾರರ ​​ಮಂಡಳಿ ನಿರ್ಧರಿಸಿದೆ. ಈ ಬಗ್ಗೆ ಅಧಿಕೃತ ಪ್ರಕಟಣೆಯನ್ನು ಮುಂದಿನ ಕೆಲಸದ ದಿನ (ಸೋಮವಾರ) ಹೊರಡಿಸಲಾಗುವುದು’ ಎಂದು ತಿಳಿಸಿದೆ.

ಅವಾಮಿ ಲೀಗ್‌ ನಿಷೇಧಕ್ಕೆ ಆಗ್ರಹಿಸಿ ವಿದ್ಯಾರ್ಥಿಗಳ ಹೊಸ ಪಕ್ಷವಾದ ರಾಷ್ಟ್ರೀಯ ನಾಗರಿಕ ಪಕ್ಷದ(ಎನ್‌ಸಿಪಿ) ಕಾರ್ಯಕರ್ತರು ಗುರುವಾರ ರ್‍ಯಾಲಿ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆಯಾಗಿದೆ.

ದೇಶದಲ್ಲಿ ಭುಗಿಲೆದ್ದ ವಿದ್ಯಾರ್ಥಿ ದಂಗೆಯ ಪರಿಣಾಮ 2024ರ ಆಗಸ್ಟ್‌ 5ರಂದು ಹಸೀನಾ ಬಾಂಗ್ಲಾ ತೊರೆದು ಭಾರತದಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಅತ್ತ ಬಾಂಗ್ಲಾದಲ್ಲಿ ಅವರು ಹಾಗೂ ಪಕ್ಷದ ನಾಯಕರ ವಿರುದ್ಧ ನರಮೇಧ, ಭ್ರಷ್ಟಾಚಾರ ಸೇರಿದಂತೆ 100ಕ್ಕೂ ಅಧಿಕ ಪ್ರಕರಣಗಳನ್ನು ದಾಖಲಿಸಲಾಗಿದೆ.