ಆಂತರಿಕ ಸಂಘರ್ಷ ಪೀಡಿತ ಆಫ್ರಿಕಾ ದೇಶವಾದ ದಕ್ಷಿಣ ಸೂಡಾನ್‌ನಲ್ಲಿ ನಿಯೋಜಿಸಲಾಗಿರುವ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗಳಲ್ಲಿ ಸಲ್ಲಿಸಿದ ಉತ್ತಮ ಸೇವೆ ಪರಿಗಣಿಸಿ ಬೆಂಗಳೂರು ಮೂಲದ ಮೇಜರ್ ಸ್ವಾತಿ ಶಾಂತಕುಮಾರ್ ಅವರಿಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ ಲಭಿಸಿದೆ.
- ಸಂಘರ್ಷಪೀಡಿತ ಸುಡಾನ್‌ನಲ್ಲಿನ ಸೇವೆಗೆ ಮನ್ನಣೆ- ಸೂಡಾನ್ ಶಾಂತಿಪಾಲನಾ ಪಡೆಗೆ ಸ್ವಾತಿ ಮುಖ್ಯಸ್ಥೆ
---ವಿಶ್ವಸಂಸ್ಥೆಯ ಶಾಂತಿಪಾಲನಾ ಪಡೆ ಭಾಗವಾಗಿ ದ.ಸೂಡಾನ್‌ನಲ್ಲಿರುವ ಸ್ವಾತಿ
ಸ್ವಾತಿ ನೇತೃತ್ವದ ತಂಡದಿಂದ ಸಂಘರ್ಷ ಪೀಡಿತ ಪ್ರದೇಶದಲ್ಲಿ ಶಾಂತಿಗೆ ಪ್ರಯತ್ನದುರ್ಗಮ ಪ್ರದೇಶ, ಕುಗ್ರಾಮಗಳಲ್ಲೂ ಗಸ್ತು ನಿರ್ವಹಣೆಯಲ್ಲಿ ವಿಶೇಷ ಸಾಧನೆ
ಕಾರ್ಯಾಚರಣೆ ಪ್ರದೇಶದಲ್ಲಿ 5000ಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷತೆಯ ಹೆಮ್ಮೆಸ್ವಾತಿ ತಂಡದಿಂದಾಗಿ ಸಮುದಾಯದಲ್ಲಿ ಮಹಿಳೆಯರ ಪಾಲುದಾರಿಕೆ ಹೆಚ್ಚಾಗಿದೆ
ಸಮಾನ ಪಾಲುದಾರರು, ಶಾಶ್ವತ ಶಾಂತಿ ವಿಭಾಗದಲ್ಲಿ ಸ್ವಾತಿ ತಂಡಕ್ಕೆ ಪ್ರಶಸ್ತಿ---
ವಿಶ್ವಸಂಸ್ಥೆ: ಆಂತರಿಕ ಸಂಘರ್ಷ ಪೀಡಿತ ಆಫ್ರಿಕಾ ದೇಶವಾದ ದಕ್ಷಿಣ ಸೂಡಾನ್‌ನಲ್ಲಿ ನಿಯೋಜಿಸಲಾಗಿರುವ ವಿಶ್ವಸಂಸ್ಥೆ ಶಾಂತಿಪಾಲನಾ ಪಡೆಗಳಲ್ಲಿ ಸಲ್ಲಿಸಿದ ಉತ್ತಮ ಸೇವೆ ಪರಿಗಣಿಸಿ ಬೆಂಗಳೂರು ಮೂಲದ ಮೇಜರ್ ಸ್ವಾತಿ ಶಾಂತಕುಮಾರ್ ಅವರಿಗೆ ವಿಶ್ವಸಂಸ್ಥೆ ಸೆಕ್ರೆಟರಿ ಜನರಲ್ ಪ್ರಶಸ್ತಿ ಲಭಿಸಿದೆ.ಸದ್ಯ ದಕ್ಷಿಣ ಸೂಡಾನ್‌ನಲ್ಲಿ ಸ್ವಾತಿ ಶಾಂತಕುಮಾರ್ ಸೇವೆ ಸಲ್ಲಿಸುತ್ತಿದ್ದು, ಅವರಿಗೆ ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಆ್ಯಂಟೋನಿಯೋ ಗುಟೆರೆಸ್ ಅವರು ಈ ಪ್ರಶಸ್ತಿ ಘೋಷಿಸಿದ್ದಾರೆ.
‘ಸಮಾನ ಪಾಲುದಾರರು, ಶಾಶ್ವತ ಶಾಂತಿ’ ಎಂಬ ವಿಭಾಗದಲ್ಲಿ ಸ್ವಾತಿ ಈ ಗೌರವ ಪಡೆದಿದ್ದಾರೆ. ವಿಶ್ವದ ಎಲ್ಲ ವಿಶ್ವಸಂಸ್ಥೆ ಶಾಂತಿಪಾಲನಾ ಮಿಷನ್‌ಗಳು ಮತ್ತು ಏಜೆನ್ಸಿಗಳಿಂದ ಬಂದ ನಾಮನಿರ್ದೇಶನಗಳ ಪೈಕಿ ಅಂತಿಮವಾಗಿ 4 ತಂಡಗಳು ಆಯ್ಕೆಯಾಗಿದ್ದವು. ಈ ತಂಡಗಳ ಪೈಕಿ ಸ್ವಾತಿ ನೇತೃತ್ವದ ಭಾರತೀಯ ತಂಡ ಅತಿ ಹೆಚ್ಚು ಮತಗಳನ್ನು ಪಡೆದು ವಿಜೇತವಾಗಿದೆ.ಸ್ವಾತಿ ಸಾಧನೆ ಏನು?:
ಮೇಜರ್ ಸ್ವಾತಿ ಅವರ ನೇತೃತ್ವದಲ್ಲಿ ಭಾರತೀಯ ತಂಡವು ಸೂಡಾನ್‌ನ ಗ್ರಾಮೀಣ ಮಟ್ಟದಲ್ಲಿ ಶಾಂತಿ ಸ್ಥಾಪನೆಗೆ ಅಪಾರ ಕೊಡುಗೆ ನೀಡಿದೆ. ಅತ್ಯಂತ ದುರ್ಗಮ ಪ್ರದೇಶ ಹಾಗೂ ಕುಗ್ರಾಮಗಳಲ್ಲೂ ವಿವಿಧ ಗಸ್ತುಗಳನ್ನು ಯಶಸ್ವಿಯಾಗಿ ನಿಭಾಯಿಸಿದೆ. ಸಂಘರ್ಷ ಪೀಡಿತ ದೇಶದಲ್ಲಿ 5,000ಕ್ಕೂ ಹೆಚ್ಚು ಮಹಿಳೆಯರಿಗೆ ಸುರಕ್ಷತೆ ಒದಗಿಸಿದೆ. ಇದರಿಂದ ಮಹಿಳೆಯರ ಸಮುದಾಯದಲ್ಲಿ ಭಾಗವಹಿಸುವಿಕೆ ಹೆಚ್ಚಾಗಿದೆ. ನಂಬಿಕೆ ಮತ್ತು ಸಂವಹನ ಬಲಗೊಂಡಿದೆ ಎಂದು ವಿಶ್ವಸಂಸ್ಥೆ ಪ್ರಕಟಣೆ ತಿಳಿಸಿದೆ.