ಜಗತ್ತಿನ ದೈತ್ಯ ಟೆಕ್‌ ಕಂಪನಿಯಾಗಿರುವ ಮೈಕ್ರೋಸಾಫ್ಟ್‌ ವಿಂಡೋಸ್‌ ಮತ್ತು ಸರ್ಫೇಸ್‌ ಸಂಸ್ಥೆಗಳ ಮುಖ್ಯಸ್ಥರಾಗಿ ಭಾರತೀಯ ಮೂಲದ ಪವನ್‌ ದವುಲೂರಿ ನೇಮಕಗೊಂಡಿದ್ದಾರೆ.

ವಾಷಿಂಗ್ಟನ್‌: ಜಗತ್ತಿನ ದೈತ್ಯ ಟೆಕ್‌ ಕಂಪನಿಯಾಗಿರುವ ಮೈಕ್ರೋಸಾಫ್ಟ್‌ ವಿಂಡೋಸ್‌ ಮತ್ತು ಸರ್ಫೇಸ್‌ ಸಂಸ್ಥೆಗಳ ಮುಖ್ಯಸ್ಥರಾಗಿ ಭಾರತೀಯ ಮೂಲದ ಪವನ್‌ ದವುಲೂರಿ ನೇಮಕಗೊಂಡಿದ್ದಾರೆ. 

ಮದ್ರಾಸ್‌ ಐಐಟಿಯಲ್ಲಿ ವ್ಯಾಸಂಗ ಮಾಡಿರುವ ಪವನ್‌ ಇದಕ್ಕೂ ಮೊದಲು ಮೈಕ್ರೋಸಾಫ್ಟ್‌ ಸರ್ಫೇಸ್‌ ಸಿಲಿಕಾನ್‌ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದರು. 

ಇತ್ತೀಚೆಗೆ ವಿಂಡೋಸ್‌ ಮುಖ್ಯಸ್ಥ ಪನೋಸ್‌ ಪಣಯ್‌ ತಮ್ಮ ಕೆಲಸಕ್ಕೆ ರಾಜೀನಾಮೆ ನೀಡಿ ಅಮೆಜಾನ್‌ ಸಂಸ್ಥೆಗೆ ತೆರಳಿದ ಹಿನ್ನೆಲೆಯಲ್ಲಿ ಭಾರತೀಯನನ್ನು ಆ ಸ್ಥಾನಕ್ಕೆ ನೇಮಿಸಲಾಗಿದೆ. 

ಇದರೊಂದಿಗೆ ಮೈಕ್ರೋಸಾಫ್ಟ್‌ನಲ್ಲಿ ಸಿಇಒ ಆಗಿರುವ ಭಾರತೀಯ ಸತ್ಯ ನಾದೆಳ್ಲಾ ಜೊತೆಗೆ ಮತ್ತೊಬ್ಬರು ಅಗ್ರ ಸ್ಥಾನಕ್ಕೇರಿದಂತಾಗಿದೆ.