ಇಸ್ರೇಲ್‌ಗೆ ಇಂದು ಬೈಡೆನ್‌ ಭೇಟಿ

| Published : Oct 18 2023, 01:01 AM IST

ಸಾರಾಂಶ

ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಸಂಘರ್ಷ ಬಿಗಡಾಯಿಸಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಬುಧವಾರ ಇಸ್ರೇಲಿಗೆ ಭೇಟಿ ನೀಡಲಿದ್ದಾರೆ.
ಇಸ್ರೇಲ್‌ಗೆ ಬೆಂಬಲ ಸೂಚಿಸುವ ಸಲುವಾಗಿ ಆಗಮನ ವಾಷಿಂಗ್ಟನ್‌: ಇಸ್ರೇಲ್‌ ಮತ್ತು ಪ್ಯಾಲೆಸ್ತೀನ್‌ ಸಂಘರ್ಷ ಬಿಗಡಾಯಿಸಿರುವ ಬೆನ್ನಲ್ಲೇ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಬುಧವಾರ ಇಸ್ರೇಲಿಗೆ ಭೇಟಿ ನೀಡಲಿದ್ದಾರೆ. ‘ಅಧ್ಯಕ್ಷ ಜೋ ಬೈಡೆನ್‌ ಅವರು ಪ್ಯಾಲೆಸ್ತೀನಿಗಳ ಜತೆಗಿನ ಯುದ್ಧದಲ್ಲಿ ಇಸ್ರೇಲ್‌ಗೆ ಬೆಂಬಲ ಸೂಚಿಸುವ ಸಲುವಾಗಿ ಬುಧವಾರ, ಅ.18 ರಂದು ಅಲ್ಲಿಗೆ ತೆರಳಲಿದ್ದಾರೆ. ಈ ವೇಳೆ ಇಸ್ರೇಲ್‌ ತೆಗೆದುಕೊಳ್ಳಬಹುದಾದ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಿದ್ದಾರೆ. ಈ ವೇಳೆ ಬೈಡನ್‌ ಅವರು ಶೃಂಗಸಭೆಗಾಗಿ ಜೋರ್ಡಾನ್‌, ಈಜಿಪ್ಟ್‌ ಮತ್ತು ಪ್ಯಾಲಿಸ್ತೀನಿನ ಅಧ್ಯಕ್ಷರ ಜೊತೆಗಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ’ ಎಂದು ಶ್ವೇತಭವನದ ಹೇಳಿಕೆ ತಿಳಿಸಿದೆ.