ಪಾಕ್‌ ಮೂಲದ ಇಸ್ಲಾಮಿಕ್‌ ದ್ವೇಷದ ಭಾಷಣಕಾರರಿಗೆ ಬ್ರಿಟನ್‌ ನಿಷೇಧ?

| Published : Mar 04 2024, 01:18 AM IST

ಪಾಕ್‌ ಮೂಲದ ಇಸ್ಲಾಮಿಕ್‌ ದ್ವೇಷದ ಭಾಷಣಕಾರರಿಗೆ ಬ್ರಿಟನ್‌ ನಿಷೇಧ?
Share this Article
  • FB
  • TW
  • Linkdin
  • Email

ಸಾರಾಂಶ

ಹೊಸ ಕಾಯ್ದೆ ಜಾರಿಗೆ ಬ್ರಿಟನ್‌ ಪ್ರಧಾನಿ ರಿಷಿ ಸರ್ಕಾರ ನಿರ್ಧಾರ ಮಾಡಿದೆ ಎನ್ನಲಾಗಿದೆ.

ಲಂಡನ್: ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಇಂಡೋನೇಷ್ಯಾ ದೇಶದ ತೀವ್ರಗಾಮಿ ಇಸ್ಲಾಮಿಕ್‌ ದ್ವೇಷದ ಭಾಷಣಕಾರರ ಮೇಲೆ ನಿಷೇಧ ಹೇರಲು ಬ್ರಿಟನ್‌ ಸರ್ಕಾರ ಹೊಸ ಕಾಯ್ದೆ ರೂಪಿಸುತ್ತಿದೆ ಎಂದು ವರದಿಗಳು ತಿಳಿಸಿವೆ.

ಇತ್ತೀಚಿನ ದಿನಗಳಲ್ಲಿ ದೇಶದಲ್ಲಿ ಮತೀಯವಾದ ಚಟುವಟಿಕೆಗಳು ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇಂಥದ್ದೊಂದು ಕಾಯ್ದೆ ಜಾರಿಗೆ ಮುಂದಾಗಿದೆ ಎಂದು ''''ದಿ ಡೈಲಿ ಟೆಲಿಗ್ರಾಫ್'''' ವರದಿ ಮಾಡಿದೆ.

ಈ ನಿಟ್ಟಿನಲ್ಲಿ ಪಾಕ್‌, ಆಫ್ಘನ್‌, ಇಂಡೋನೇಷ್ಯಾದಂಥ ದೇಶಗಳ ತೀವ್ರಗಾಮಿ ನಾಯಕರ ಪಟ್ಟಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹೀಗೆ ಪಟ್ಟಿಯಲ್ಲಿ ಸೇರ್ಪಡೆಯಾದವರನ್ನು ವೀಸಾ ಎಚ್ಚರಿಕೆ ಪಟ್ಟಿಯಲ್ಲಿ ಸೇರಿಸಿ ಅವರನ್ನು ಬ್ರಿಟನ್‌ ಪ್ರವೇಶ ಮಾಡದಂತೆ ತಡೆಯಲಾಗುವುದು ಎನ್ನಲಾಗಿದೆ.

ಕೆಲ ದಿನಗಳ ಹಿಂದಷ್ಟೇ ಕಾರ್ಯಕ್ರಮವೊಂದಲ್ಲಿ ಮಾತನಾಡಿದ್ದ ಬ್ರಿಟನ್‌ ಪ್ರಧಾನಿ ರಿಷಿ ಸುನಕ್‌, ‘ದೇಶದ ಪ್ರಜಾಪ್ರಭುತ್ವ ಮತ್ತು ಬಹು ಧರ್ಮೀಯ ನಂಬಿಕೆಗಳು ತೀವ್ರಗಾಮಿಗಳಿಂದ ಅಪಾಯ ಎದುರಿಸುತ್ತಿದೆ. ಅಂಥವರು ದೇಶ ಪ್ರವೇಶಿಸದಂತೆ ಮಾಡಲು ನಾವು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದರು.