ಸಾರಾಂಶ
ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದು ಸಭಾ ದೇವಸ್ಥಾನದ ಹೊರಗೆ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಖಲಿಸ್ತಾನಿಗಳ ಪರವಾಗಿ ಭಾಗವಹಿಸಿದ ಕೆನಡಾದ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.
ಒಟ್ಟಾವಾ: ಕೆನಡಾದ ಬ್ರಾಂಪ್ಟನ್‌ನಲ್ಲಿರುವ ಹಿಂದು ಸಭಾ ದೇವಸ್ಥಾನದ ಹೊರಗೆ ಭಾನುವಾರ ನಡೆದ ಪ್ರತಿಭಟನೆಯಲ್ಲಿ ಖಲಿಸ್ತಾನಿಗಳ ಪರವಾಗಿ ಭಾಗವಹಿಸಿದ ಕೆನಡಾದ ಪೊಲೀಸ್ ಅಧಿಕಾರಿಯೊಬ್ಬರನ್ನು ಅಮಾನತುಗೊಳಿಸಲಾಗಿದೆ.
ದೇವಸ್ಥಾನದ ಅಧಿಕಾರಿಗಳು ಹಾಗೂ ಭಾರತದ ರಾಯಭಾರಿಗಳು ಜಂಟಿಯಾಗಿ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಖಲಿಸ್ತಾನಿ ಧ್ವಜ ಹಿಡಿದವರ ಗುಂಪು ಅಲ್ಲಿದ್ದ ಹಿಂದೂಗಳ ಮೇಲೆ ದಾಳಿ ನಡೆಸಿದ ವಿಡಿಯೋಗಳು ಹರಿದಾಡುತ್ತಿವೆ.ಇದಕ್ಕೆ ಪ್ರತಿಕ್ರಿಯಿಸಿರುವ ಕೆನಡಾದ ಮಾಧ್ಯಮ ಸಂಪರ್ಕಾಧಿಕಾರಿ ರಿಚರ್ಡ್ ಚಿನ್, ‘ಪೀಲ್‌ನ ಪೊಲೀಸ್ ಸಿಬ್ಬಂದಿಯೊಬ್ಬರು ಕರ್ತವ್ಯದಲ್ಲಿ ಇರದ ವೇಳೆ ಪ್ರತಿಭಟನೆಯಲ್ಲಿ ಭಾಗವಹಿಸಿರುವ ವಿಡಿಯೋ ನಮ್ಮ ಗಮನಕ್ಕೂ ಬಂದಿದೆ. ಸಾಮಾಜಿಕ ಭದ್ರತೆ ಹಾಗೂ ಪೊಲೀಸ್ ಕಾಯ್ದೆಯ ಪ್ರಕಾರ ಅವರನ್ನು ಅಮಾನತುಗೊಳಿಸಲಾಗಿದೆ. ವಿಡಿಯೋ ಆಧರಿಸಿ ತನಿಖೆ ನಡೆಸುತ್ತಿದ್ದು, ಅದು ಪೂರ್ಣಗೊಳ್ಳುವ ತನಕ ಯಾವುದೇ ಮಾಹಿತಿ ನೀಡಲಾಗದು’ ಎಂದು ಸಿಬಿಸಿ ನ್ಯೂಸ್‌ಗೆ ತಿಳಿಸಿದ್ದಾರೆ.
==ಹಿಂದೂಗಳ ಮೇಲೆ ಹಲ್ಲೆ ಖಂಡಿಸಿ ಕೆನಡಾದಲ್ಲಿ ಪ್ರತಿಭಟನೆ
ಬ್ರಾಂಪ್ಟನ್: ಭಾನುವಾರ ಇಲ್ಲಿನ ಹಿಂದೂ ಸಭಾ ದೇವಸ್ಥಾನದ ಮೇಲೆ ನಡೆದ ದಾಳಿಯನ್ನು ಖಂಡಿಸಿ ಹಿಂದೂಗಳು ಮಂಗಳವಾರ ದೇವಾಲಯದ ಎದುರು ಪ್ರತಿಭಟನೆ ನಡೆಸಿದ್ದಾರೆ.ಇದರ ನಡುವೆ, ಈ ಪ್ರತಿಭಟನೆಯನ್ನು ಕಾನೂನುಬಾಹಿರ ಎಂದು ಕರೆದಿರುವ ಕೆನಡಾ ಪೊಲೀಸರು, ಇಂಥ ಪ್ರತಿಭಟನೆಗಳನ್ನು ಸಹಿಸುವುದಿಲ್ಲ. ಪ್ರತಿಭಟನೆ ವೇಳೆ ನರೆದಿದ್ದ 5 ಸಾವಿರಕ್ಕೂ ಅಧಿಕ ಭಾರತ ಮೂಲದ ಕೆನಡಿಯನ್ನರ ಕೈಯಲ್ಲಿ ಆಯುಧಗಳು ಪತ್ತೆಯಾಗಿವೆ ಎಂದಿದ್ದಾರೆ.ಭಾನುವಾರ ಹಿಂದೂ ಮಹಾಸಭಾ ದೇವಸ್ಥಾನದ ಹೊರಗೆ ಹಿಂದೂಗಳು ನಡೆಸಿದ್ದ ಸಮಾರಂಭವೊಂದರ ಮೇಲೆ ಖಲಿಸ್ತಾನಿಗಳು ದಾಳಿ ಮಾಡಿದ್ದರು. ಇದಕ್ಕೆ ಭಾರತ ತೀವ್ರ ಆಕ್ರೋಶ ವ್ಯಕ್ತಪಡಿಸಿತ್ತು.