ಸಾರಾಂಶ
ಬೀಜಿಂಗ್: ತನ್ನ ಉತ್ಪನ್ನಗಳ ಮೇಲೆ ಶೇ.34ರಷ್ಟು ಪ್ರತಿತೆರಿಗೆ ಹಾಕಿದ ಅಮೆರಿಕದ ವಿರುದ್ಧ ಸಿಡಿದೆದ್ದಿರುವ ಚೀನಾ, ತಾನು ಕೂಡಾ ಅಮೆರಿಕದ ಉತ್ಪನ್ನಗಳ ಮೇಲೆ ಶೇ.34ರಷ್ಟು ಹೆಚ್ಚುವರಿ ತೆರಿಗೆ ಹಾಕುವುದಾಗಿ ಘೋಷಿಸಿದೆ. ಈ ಮೂಲಕ ಅಮೆರಿಕದೊಂದಿಗೆ ನೇರ ತೆರಿಗೆ ಯುದ್ಧಕ್ಕೆ ಇಳಿದಿದೆ. ಗುರುವಾರ ಕೆನಡಾ ಕೂಡಾ ಅಮೆರಿಕದ ವಿವಿಧ ಉತ್ಪನ್ನಗಳ ಮೇಲೆ ಶೇ.25ರಷ್ಟು ಹೆಚ್ಚುವರಿ ತೆರಿಗೆ ಹಾಕುವುದಾಗಿ ಘೋಷಿಸಿತ್ತು.
ಟ್ರಂಪ್ ತೆರಿಗೆ ದಾಳಿಯನ್ನು ಕಟುವಾಗಿ ವಿರೋಧಿಸಿರುವ ಚೀನಾ ವಾಣಿಜ್ಯ ಇಲಾಖೆ, ಟ್ರಂಪ್ ತೆರಿಗೆ ನೀತಿಯು ವಿಶ್ವ ವ್ಯಾಪಾರ ಒಕ್ಕೂಟ (ಡಬ್ಲ್ಯುಟಿಓ) ನೀತಿಗೆ ವಿರುದ್ಧವಾಗಿದೆ. ಪ್ರತಿ ತೆರಿಗೆಯಿಂದಾಗಿ ಯಾರೂ ಗೆಲ್ಲುವುದಿಲ್ಲ. ತೆರಿಗೆ ಮತ್ತು ವ್ಯಾಪಾರ ಕುರಿತು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬೇಕು ಎಂದಿದೆ.
ಈ ಮೊದಲೇ ಚೀನಾ ಉತ್ಪನ್ನಗಳ ಮೇಲೆ ಅಮೆರಿಕ ಶೇ.30ರಷ್ಟು ತೆರಿಗೆ ವಿಧಿಸುತ್ತಿತ್ತು. ಇದೀಗ ಮತ್ತೆ ಶೇ.34ರಷ್ಟು ತೆರಿಗೆ ಹೇರಿದೆ. ಚೀನಾದ ರಫ್ತಿನ ಪೈಕಿ ಅಮೆರಿಕದ 3ನೇ ಸ್ಥಾನದಲ್ಲಿದೆ. ಪ್ರತಿ ವರ್ಷ ಚೀನಾ ಅಮೆರಿಕಕ್ಕೆ 50 ಲಕ್ಷ ಕೋಟಿ ರು. ಮೌಲ್ಯದ ಉತ್ಪನ್ನ ರಫ್ತು ಮಾಡುತ್ತದೆ. ಇನ್ನೊಂದೆಡೆ ಅಮೆರಿಕ ಚೀನಾಕ್ಕೆ ವಾರ್ಷಿಕ 12 ಲಕ್ಷ ಕೋಟಿ ರು. ಮೌಲ್ಯದ ಉತ್ಪನ್ನ ರಫ್ತು ಮಾಡುತ್ತದೆ.
ಟ್ರಂಪ್ ತೆರಿಗೆಯಿಂದ ಹಣದುಬ್ಬರ:
ಅಮೆರಿಕ ಕೇಂದ್ರೀಯ ಬ್ಯಾಂಕ್!ಅರ್ಲಿಂಗ್‌ಸ್ಟನ್: ತನ್ನೊಂದಿಗೆ ವ್ಯಾಪಾರ ನಡೆಸುವ ದೇಶಗಳ ಮೇಲೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ವಿವಿಧ ಪ್ರಮಾಣದ ಪ್ರತಿತೆರಿಗೆ ವಿಧಿಸಿದ್ದನ್ನು ಸ್ವತಃ ಅಮೆರಿಕ ಕೇಂದ್ರೀಯ ಬ್ಯಾಂಕ್ ವಿರೋಧ ವ್ಯಕ್ತಪಡಿಸಿದೆ. ಹೊಸ ತೆರಿಗೆ ನೀತಿಯಿಂದ ಹಣದುಬ್ಬರ ಏರಿಕೆಯ ಮತ್ತು ಆರ್ಥಿಕತೆ ಕುಸಿಯುವ ಭೀತಿಯೂ ಇದೆ ಎಂದು ಹೇಳಿದೆ.ಈ ಬಗ್ಗೆ ಪ್ರತಿಕ್ರಿಯಿಸಿರುವ ಬ್ಯಾಂಕ್ ಅಧ್ಯಕ್ಷ ಜೆರೋಂ ಪೋವೆಲ್, ‘ತೆರಿಗೆ, ಆರ್ಥಿಕತೆಯ ಮೇಲೆ ಅದರ ಪರಿಣಾಮ ಮತ್ತು ಹಣದುಬ್ಬರ ಪ್ರಮಾಣವು ನಿರೀಕ್ಷೆಗಿಂತಲೂ ಅಧಿಕವಾಗಿದೆ. ಆಮದು ತೆರಿಗೆಯಿಂದಾಗಿ ಹಣದುಬ್ಬರದಲ್ಲಿ ತಾತ್ಕಾಲಿಕ ಏರಿಕೆಯಂತೂ ಖಚಿತ. ಜೊತೆಗೆ ಈ ಸಮಸ್ಯೆ ನಿರಂತರವಾಗಿರುವ ಸಾಧ್ಯತೆಯೂ ದಟ್ಟವಾಗಿದೆ ಎಂದು ಹೇಳಿದ್ದಾರೆ.
ಭಾರತದ ಮೇಲಿನ ಅಮೆರಿಕ ಪ್ರತಿ
ತೆರಿಗೆ ಶೇ.27 ರಿಂದ 26ಕ್ಕೆ ಇಳಿಕೆನವದೆಹಲಿ: ಭಾರತದ ಉತ್ಪನ್ನಗಳ ಆಮದಿನ ಮೇಲೆ ವಿಧಿಸಿದ್ದ ಪ್ರತಿತೆರಿಗೆ ಪ್ರಮಾಣವನ್ನು ಶೇ.27 ರಿಂದ 26ಕ್ಕೆ ಇಳಿಸಲಾಗಿದೆ. ಬುಧವಾರ ತಡರಾತ್ರಿ ಟ್ರಂಪ್ ಈ ಕುರಿತು ಘೋಷಣೆ ಮಾಡಿದಾಗ ಭಾರತದ ಮೇಲೆ ಶೇ.26ರಷ್ಟು ತೆರಿಗೆ ಘೋಷಿಸಿದ್ದರು. ಗುರುವಾರ ಶ್ವೇತಭವನದ ದಾಖಲೆಗಳಲ್ಲಿ ಈ ಪ್ರಮಾಣ ಶೇ.27 ಎಂದು ತೋರಿಸಲಾಗಿತ್ತು. .ಆದರೆ ಬಳಿಕ ಈ ಕುರಿತು ಬಿಡುಗಡೆ ಮಾಡಲಾದ ಪರಿಷ್ಕೃತ ಮಾಹಿತಿಯನ್ನು ಪ್ರತಿತೆರಿಗೆ ಪ್ರಮಾಣ ಶೇ.26ರಷ್ಟು ಎಂದು ಸ್ಪಷ್ಟಪಡಿಸಲಾಗಿದೆ.
ಟ್ರಂಪ್ ತೆರಿಗೆ ದಾಳಿ ಬಳಿಕ 500 ಭಾರೀ ಶ್ರೀಮಂತರಿಗೆ 17 ಲಕ್ಷ ಕೋಟಿ ರು.ನಷ್ಟ!
ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಸೇರಿದಂತೆ ವಿವಿಧ ದೇಶಗಳ ಮೇಲೆ ತೆರಿಗೆ ವಿಧಿಸಿದ ಬೆನ್ನಲ್ಲೇ ಶುಕ್ರವಾರ ಒಂದೇ ದಿನ 500 ಶತಕೋಟ್ಯಾಧೀಶರಿಗೆ ಬರೋಬ್ಬರಿ 17 ಲಕ್ಷ ಕೋಟಿ ನಷ್ಟ ಸಂಭವಿಸಿದೆ. ಈ ಶ್ರೀಮಂತರು ಹೊಂದಿರುವ ಷೇರುಗಳ ಮೌಲ್ಯ ಕುಸಿತದ ಕಾರಣ ಈ ಬೆಳವಣಿಗೆ ಸಂಭವಿಸಿದೆ. ಈ ಪೈಕಿ ಫೇಸ್‌ಬುಕ್ಸಂ ಸಂಸ್ಥಾಪಕ ಮಾರ್ಕ್ ಜುಗರ್ ಬರ್ಗ್ ಮೊದಲ ಸ್ಥಾನದಲ್ಲಿದ್ದು, ಅವರ ಆಸ್ತಿ ಒಂದೇ ದಿನ 1.5 ಲಕ್ಷ ಕೋಟಿ ಇಳಿದಿದೆ. 2ನೇ ಸ್ಥಾನದಲ್ಲಿ ಅಮೆಜಾನ್‌ನ ಜೆಫ್ ಬೆಜೋಸ್‌ರಿದ್ದು ಅವರ ಆಸ್ತಿ 1.3 ಲಕ್ಷ ಕೋಟಿ ರು. ಕುಸಿದಿದೆ, ಮೂರನೇಯ ಸ್ಥಾನದಲ್ಲಿ ಎಲಾನ್ ಮಸ್ಕ್ ಇದ್ದು ಮಸ್ಕ್‌ಗೆ 95000 ಕೋಟಿ ನಷ್ಟವಾಗಿದೆ. ಇದು ಕೋವಿಡ್ ಬಳಿಕದ ಅತಿದೊಡ್ಡ ಕುಸಿತವಾಗಿದೆ.