ಚೀನಾದಲ್ಲೀಗ 10 ಜಿ ನೆಟ್‌ : 1000 ಎಂಬಿಪಿಎಸ್‌ ವೇಗ!

| N/A | Published : Apr 21 2025, 01:34 AM IST / Updated: Apr 21 2025, 04:12 AM IST

internet

ಸಾರಾಂಶ

  ಚೀನಾದಲ್ಲಿ 10ಜಿ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ ಅನ್ನು ಪರಿಚಯಿಸಲಾಗಿದೆ. ಹುವೈ ಮತ್ತು ಚೀನಾ ಯುನಿಕಾರ್ನ್ ಜಂಟಿಯಾಗಿ ಚೀನಾದ ಈ ಮೊದಲ 10ಜಿ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ ಅನ್ನು ಹೆಬೈಪ್ರಾಂತ್ಯದ ಸುನನ್‌ ಕೌಂಟಿಯಲ್ಲಿ ಅನುಷ್ಠಾನಗೊಳಿಸಿವೆ.

ಬೀಜಿಂಗ್‌: ಭಾರತ ಸೇರಿ ಅನೇಕ ದೇಶಗಳು 5ಜಿ ಜಾರಿಗೇ ಪರದಾಡುತ್ತಿರುವ ಈ ಹೊತ್ತಿನಲ್ಲಿ ಚೀನಾದಲ್ಲಿ 10ಜಿ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ ಅನ್ನು ಪರಿಚಯಿಸಲಾಗಿದೆ. ಹುವೈ ಮತ್ತು ಚೀನಾ ಯುನಿಕಾರ್ನ್ ಜಂಟಿಯಾಗಿ ಚೀನಾದ ಈ ಮೊದಲ 10ಜಿ ಬ್ರಾಡ್‌ಬ್ಯಾಂಡ್‌ ನೆಟ್‌ವರ್ಕ್‌ ಅನ್ನು ಹೆಬೈಪ್ರಾಂತ್ಯದ ಸುನನ್‌ ಕೌಂಟಿಯಲ್ಲಿ ಅನುಷ್ಠಾನಗೊಳಿಸಿವೆ.

ಭಾರತದಲ್ಲಿ ಸರಾಸರಿ ಬ್ರಾಡ್‌ಬ್ಯಾಂಡ್‌ ಡೌನ್‌ಲೋಡ್‌ ಸ್ಪೀಡ್‌ 100 ಎಂಬಿಪಿಎಸ್‌ ಒಳಗಿದೆ. ಆದರೆ ಚೀನಾವು 1000, ನಎಂಬಿಪಿಎಸ್‌ ವೇಗದ ಬ್ರಾಡ್‌ಬ್ಯಾಂಡ್‌ ಪರಿಚಯಿಸುವ ಮೂಲಕ ಇಂಟರ್ನೆಟ್‌ ಮೂಲಸೌಲಭ್ಯ ಕ್ಷೇತ್ರದಲ್ಲಿ ಆ ದೇಶ ಬಹುದೊಡ್ಡ ಜಿಗಿತ ದಾಖಲಿಸಿದೆ.

ಹೆಬೈ ಪ್ರಾಂತ್ಯವು ಚೀನಾದ ತಂತ್ರಜ್ಞಾನದ ಹಬ್‌ಗಳಲ್ಲೊಂದಾಗಿದೆ. ಇಲ್ಲೀಗ ಪರಿಚಯಿಸಲ್ಟಟ್ಟಿರುವ ವಿಶ್ವದ ಮೊದಲ 50ಜಿ ಪಿಒಎನ್‌( ಪ್ಯಾಸಿವ್‌ ಆಪ್ಟಿಕಲ್‌ ನೆಟ್‌ವರ್ಕ್‌) ಸೊಲ್ಯೂಷನ್ಸ್‌ ಅಡಿ ನಿರ್ಮಿಸಲ್ಪಟ್ಟ ಈ ಬ್ರಾಡ್‌ಬ್ಯಾಂಡ್‌ ಮೂಲಸೌಲಭ್ಯ 9,834 ಎಂಬಿಪಿಎಸ್‌ ಡೌನ್‌ಲೋಡ್‌ ಸ್ಟೀಡ್‌ ಹೊಂದಿದ್ದರೆ, 1,008 ಎಂಬಿಪಿಎಸ್‌ ಸ್ಪೀಡ್‌ನಲ್ಲಿ ಅಪ್‌ಲೋಡ್‌ ಮಾಡುತ್ತದೆ. 900 ಜಿಬಿಯಷ್ಟು ಭಾರಿ ಫೈಲ್‌ಗಳು ಕೆಲವೇ ಸೆಕೆಂಡಲ್ಲಿ ಡೌನ್‌ಲೋಡ್ ಆಗುತ್ತವೆ.

ಫೈಬರ್‌ ಆಪ್ಟಿಕ್‌ ಆರ್ಕಿಟೆಕ್ಚರ್‌ ಅನ್ನು ಅಪ್‌ಗ್ರೇಡ್‌ ಮಾಡಿದಾಗ ಸಿಂಗಲ್‌ ಯೂಸರ್‌ ಬ್ಯಾಂಡ್‌ವಿಡ್ತ್‌ ಅನ್ನು ಸಾಂಪ್ರದಾಯಿಕ ಗಿಗಾಬೈಟ್‌ನಿಂದ 10ಜಿ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗಿದೆ.

ಬ್ರಾಡ್‌ಬ್ಯಾಂಡ್‌ ವೇಗವರ್ಧನೆಯು ಭವಿಷ್ಯದಲ್ಲಿ 8ಕೆ ವಿಡಿಯೋ ಸ್ಟ್ರೀಮಿಂಗ್‌ ಆ್ಯಪ್‌ಗಳು ಹಾಗೂ ಅಡ್ವಾನ್ಸ್ಡ್‌ ಕ್ಲೌಡ್‌ ಕಂಪ್ಯೂಟಿಂಗ್‌ ಹಾಗೂ ಅತ್ಯುನ್ನತ ವರ್ಚುವಲ್‌ ರಿಯಾಲಿಟಿ(ಎಆರ್‌/ವಿಆರ್‌ ಗೇಮಿಂಗ್‌)ಅನುಭವಕ್ಕೆ ಹೊಸ ಬಾಗಿಲುಗಳನ್ನು ತೆರೆಯಲಿದೆ ಎನ್ನಲಾಗಿದೆ.

ಹೈಸ್ಪೀಡ್‌ ಇಂಟರ್ನೆಟ್‌

ಹುವೈ ಮತ್ತು ಚೀನಾ ಯೂರ್ನಿಕಾರ್ನ್‌ ಕಂಪನಿಯಿಂದ 10ಜಿ ನೆಟ್‌ವರ್ಕ್‌ ಅಭಿವೃದ್ಧಿ

ಹೆಬೈ ಪ್ರಾಂತ್ಯದ ಸುನನ್‌ ಕೌಂಟಿ ಪ್ರದೇಶದಲ್ಲಿ ಭಾರೀ ವೇಗದ ನೆಟ್‌ವರ್ಕ್‌ ಜಾರಿ

ಇದರಿಂದಾಗಿ ಅತ್ಯಂತ ವೇಗದಲ್ಲಿ ಫೈಲ್‌ ಅಪ್‌ಲೋಡ್‌, ಡೌನ್‌ಲೋಡ್‌ ಸಾಧ್ಯ

8ಕೆ ವಿಡಿಯೋ ಸ್ಟ್ರೀಮಿಂಗ್‌ ಆ್ಯಪ್‌, ಅಡ್ವಾನ್ಸ್ಡ್‌ ಕ್ಲೌಡ್‌ ಕಂಪ್ಯೂಟಿಂಗ್‌ಗೆ ಅನುಕೂಲ