ಸಾರಾಂಶ
ಸೆವಿಲ್ಲೆ (ಸ್ಪೇನ್): ಸ್ಪೇನ್‌ನ ಸೆವಿಲ್ಲೆ ನಗರದ ಚರ್ಚ್‌ನಲ್ಲಿ ಪತ್ತೆಯಾಗಿದ್ದ ಮಾನವನ ಅವಶೇಷಗಳು ಹೆಸರಾಂತ ನಾವಿಕ ಹಾಗೂ ಅನ್ವೇಷಕ ಕ್ರಿಸ್ಟೋಫರ್ ಕೊಲಂಬಸ್ ಅವರದ್ದು ಎಂದು ಡಿಎನ್‌ಎ ಪರೀಕ್ಷೆಯಿಂದ ತಿಳಿದುಬಂದಿದೆ. ಈ ಮೂಲಕ 1560ರಲ್ಲಿ ಮರಣ ಹೊಂದಿದ್ದ ಕೊಲಂಬಸ್ ಅವರ ಸುತ್ತ ಇದ್ದ 500 ವರ್ಷಗಳಿಂದ ಇದ್ದ ಪ್ರಶ್ನೆಗಳಿಗೆ ತೆರೆ ಬಿದ್ದಿದೆ.
20 ವರ್ಷಗಳ ಸಂಶೋಧನೆಯ ಬಳಿಕ ಆಧುನಿಕ ತಂತ್ರಜ್ಞಾನ ಬಳಸಿ ಕೊಲಂಬಸ್ ವಂಶಸ್ಥರು ಹಾಗೂ ಸಂಬಂಧಿಕರ ಡಿಎನ್‌ಎ ಜೊತೆ ಅವರ ಡಿಎನ್‌ಎ ಹೊಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.
‘ಸೆವಿಲ್ಲೆಯಲ್ಲಿರುವ ಅವಶೇಷಗಳು ಕೊಲಂಬಸ್ ಅವರದ್ದು ಎಂಬ ಸಿದ್ಧಾಂತ ಈಗ ಸಂಪೂರ್ಣವಾಗಿ ಧೃಡಪಟ್ಟಿದೆ. ಇದು ಹೊಸ ತಂತ್ರಜ್ಞಾನದಿಂದ ಸಾದ್ಯವಾಗಿದೆ’ ಎಂದು ತನಿಖೆಯ ನೇತೃತ್ವ ವಹಿಸಿದ್ದ ವಿಧಿವಿಜ್ಞಾನ ವಿಜ್ಞಾನಿ ಮಿಗುಯೆಲ್ ಲೊರೆಂಟ್ ಸಂತಸ ವ್ಯಕ್ತಪಡಿಸಿದ್ದಾರೆ.
2003ರಲ್ಲಿ ಲೊರೆಂಟ್ ಹಾಗೂ ಇತಿಹಾಸಕಾರ ಮಾರ್ಷಿಯಲ್ ಸೇರಿಕೊಂಡು ಸೆವಿಲ್ಲೆಯಲ್ಲಿರುವ ಸಮಾಧಿಯನ್ನು ತೆರೆದು ಸಂಶೋಧನೆಯಲ್ಲಿ ತೊಡಗಿದ್ದರು. ಇದರ ಭಾಗವಾಗಿ ಅಲ್ಲೇ ಹೂಳಲಾಗಿದ್ದ ಕೊಲಂಬಸ್‌ರ ಸಹೋದರ ಡಿಯಾಗೋ ಹಾಗೂ ಪುತ್ರ ಹೆರ್ನಂಡೋ ಅವರ ಡಿಎನ್‌ಎಗಳನ್ನು ಹೊಂದಿಸುವ ಮೂಲಕ ಈ ಸಾಧನೆ ಮಾಡಿದ್ದಾರೆ.